This is the title of the web page
This is the title of the web page

ವಿಶ್ವ ಕ್ಯಾನ್ಸರ್ ದಿನ

ವಿಶ್ವ ಕ್ಯಾನ್ಸರ್ ದಿನವನ್ನು ಫೆಬ್ರವರಿ 4ನೇ ತಾರೀಖು ಆಚರಿಸಲಾಗುತತಿದೆ. 2000ನೇ ಇಸವಿಯ ಫೆಬ್ರವರಿ 4ನೇ ತಾರೀಕಿನಂದು ಪ್ಯಾರಿಸ್‍ನಲ್ಲಿ ನಡೆದ ಕ್ಯಾನ್ಸರ್ ವಿರುದ್ಧದ ಹೋರಾಟದ ಸಲುವಾಗಿ ನಡೆದ ಸಮ್ಮೇಳನದಲ್ಲಿ ಕ್ಯಾನ್ಸರ್ ಕುರಿತಾದ ಅಧ್ಯಯನ ಮತ್ತು ಅದರಿಂದ ಪಾರಾಗುವ ವಿಧಗಳು ಹೊಸ ಹೊಸ ಔಷಧಿಗಳ ಆವಿಷ್ಕಾರ ಮಾಡಿ ವಿಶ್ವದಲ್ಲೇ ಸಾವಿಗೆ ಅತೀ ದೊಡ್ಡ ಎರಡನೇ ಕಾರಣವಾಗಿರುವ ಕಾಯಿಲೆಯ ವಿರುದ್ಧ ಹೋರಾಡುವ ಸಲುವಾಗಿ ಮತ್ತು ರೋಗಿಗಳಿಗೆ ಸರಿಯಾದ ಮಾಹಿತಿಯನ್ನು ಕೊಟ್ಟು ವೈದ್ಯಕೀಯ ಸೌಲಭ್ಯಗಳು ಅದನ್ನು ಬಳಸಿಕೊಳ್ಳುವ ಬಗೆಯ ಕುರಿತು ಜ್ಞಾನವನ್ನು ನೀಡುವ ದಿನವಾಗಿದೆ.

ವಿಶೇಷವಾಗಿ ಇಂದಿನ ದಿನ ಹೊಸ ಶತಮಾನದಲ್ಲಿ ಮಾರಕ ಕಾಯಿಲೆಯಿಂದ ಹೋರಾಡಲು ವಿಶ್ವ ಕ್ಯಾನ್ಸರ್ ದಿನವನ್ನು ಫೆಬ್ರವರಿ 4ರಂದು ನಿರ್ಣಯಿಸಲಾದ ಕಾರಣ ಅಂದೇ ಆಚರಿಸುತ್ತಾರೆ. ಈ ಬಾರಿ ವಿಶ್ವ ಕ್ಯಾನ್ಸರ್ ದಿನದ ಥೀಮ್ “ರೋಗಿಗಳು ಮತ್ತು ಚಿಕಿತ್ಸೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು” ಈ ಬಾರಿಯ ಥೀಮ್ ನ ಉದ್ದೇಶ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಕುಂದು ಕೊರತೆಗಳನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯವಾಗಿದೆ.

ಕ್ಯಾನ್ಸರ್ ಎಂದರೆ ನಮ್ಮ ದೇಹದ ಭಾಗಗಳಲ್ಲಿ ಅಸಾಮಾನ್ಯವಾದ ಕೋಶಗಳ ಬೆಳವಣಿಗೆ ಇಂತಹ ಕೋಶಗಳು ಸೋಂಕು ಕಾರಕವಾಗಿದ್ದು ದೇಹದಲ್ಲಿ ಎಲ್ಲೆಡೆ ಹಬ್ಬುವ ಅಥವಾ ಆವರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಗಂಟಿನ ಮೂಲಕ ಆರಂಭವಾಗುವ ಈ ಕಾಯಿಲೆಯ ಲಕ್ಷಣಗಳು ಅಸಾಮಾನ್ಯ ರಕ್ತ ಸ್ರಾವ, ದೇಹದ ಭಾಗಗಳಲ್ಲಿ ಗಂಟುಗಳು ಅಥವಾ ಗೆಡ್ಡೆಯಂತೆ ಭಾಸವಾಗುವುದು, ಬಹಳ ಕಾಲದ ಕೆಮ್ಮು, ಅತೀ ವೇಗವಾಗವಾಗಿ ಕಾರಣವಿಲ್ಲದೇ ತೂಕದಲ್ಲಿ ಇಳಿಕೆ, ಜೀರ್ಣಕ್ರಿಯೆ ಮತ್ತು ಮಲ ವಿಸರ್ಜನೆಯ ಸಮಸ್ಯೆಗಳು ಲಕ್ಷಣಗಳಾದರೆ, 100 ವಿಧದ ಕ್ಯಾನ್ಸರ್‍ಗಳಮನ್ನು ಕಾಣ ಬಹುದಾಗಿದೆ.

ಕ್ಯಾನ್ಸರ್ ಉಂಟಾಗಲು ಪ್ರಮುಖ ಕಾರಣಗಳೆಂದರೆ ಅತೀಯಾದ ತಂಬಾಕು ಸೇವನೆ, ಮದ್ಯಪಾನ, ಅಪಥ್ಯ, ದೇಹಕ್ಕೆ ಸರಿಯಾದ ಪ್ರಮಾಣದ ವ್ಯಾಯಾಮ ಇಲ್ಲದಿರುವಿಕೆ ಕೆಲವು ಸೊಂಕುಗಳು ಕಾರಣವಾಗ ಬಹುದಾಗಿದೆ. ಇತ್ತೀಚಿಗೆ ಪ್ರತಿ ವರ್ಷವೂ 10 ಮಿಲಿಯನ್ ಜನರು ಕ್ಯಾನ್ಸರ್ ನಿಂದ ಸಾಯುತ್ತಿರುವುದನ್ನು ಗುರುತಿಸಲಾಗಿದೆ. ಪ್ರತಿ 6 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಂಡು ಬರುತ್ತಿದೆ. 70% ಕ್ಯಾನ್ಸರ್ ಅಭಿವೃದ್ಧಿ ಹೊಂದದುತ್ತಿರುವ ಹಾಗೂ ಮಧ್ಯಮ ವರ್ಗೀಯರು ಹೆಚ್ಚಾಗಿರುವ ದೇಶಗಳನಲ್ಲಿ ಕಂಡು ಬರುತ್ತಿದೆ. ಪುರುಷರಲ್ಲಿ ಶ್ವಾಸಕೋಶದ, ಪ್ರೋಟ್ರೇಟ್, ಕೋಲೋರೆಕ್ಟರಲ್ ಮತ್ತು ಸ್ಟಮಕ್ ಕ್ಯಾನ್ಸರ್‍ಗಳು ಹೆಚ್ಚಾದರೆ ಮಹಿಳೆಯರಲ್ಲಿ ಬ್ರೆಸ್ಟ್, ಕೋಲೋರೆಕ್ಟರಲ್, ಶ್ವಾಸಕೋಶದ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ.

ಬಹಳಷ್ಟು ಪ್ರಮಾಣದಲ್ಲಿ ಕ್ಯಾನ್ಸರ್ ಆಗಲು ಪ್ರಮುಖ ಕಾರಣಗಳು ತಂಬಾಕು ಸೇವನೆ ಧೂಮ್ರಪಾನ ಆಥವಾ ತಂಬಾಕು ನೇರ ಸೇವನೆ , ಅತೀ ತೂಕ, ವಿಪರೀಪ ಮದ್ಯಪಾನ, ಹಣ್ಣು ಮತ್ತು ತರಕಾರಿಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಥವಾ ಸೇವಿಸದೇ ಇರುವುದು ಜೊತೆಗೆ ಯಾವುದೇ ದೇಹಕ್ಕೆ ಚಟುವಟಿಕೆ ಇಲ್ಲದೇ ಸುಮ್ಮನೆ ಕುಳಿತಿರುವುದು

ಕ್ಯಾನ್ಸರ್ ಆಗದೇ ಇರಲು ನಾವು ಅನುಸರಿಸಬೇಕಾದ ವಿಧಾನಗಳು ತಂಬಾಕು ಸೇವನೆ ಮಾಡದೇ ಇರುವುದು, ಆರೋಗ್ಯಕರವಾಗಿರಲು ನಮ್ಮ ಎತ್ತರ ಮತ್ತು ವಯಸ್ಸಿಗೆ ತಕ್ಕಂತೆ ದೇಹದ ತೂಕವನ್ನು ಕಾಪಾಡಿಕೊಳ್ಳುವುದು, ಆರೋಗ್ಯಕರವಾದ ಪಥ್ಯದವನ್ನು ಅನುಸರಿಸುತ್ತಾ ಅವಶ್ಯಕವಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು, ದೇಹವನ್ನು ಸದಾಕಾಲ ವಿಶ್ರಾಂತಿಯಲ್ಲಿಡದೇ ಚಟುವಟಿಕೆಗಳಲ್ಲಿ ಕ್ರಿಯಾನಿರತರಾಗಿರುವುದು ಕೆಲಸ ಕಾರ್ಯಗಳನ್ನು ಮಾಡದೇ ಹೋದರು ವ್ಯಾಯಾಮ ಅಥವಾ ನಡೆದಾಡುವುದ ಅಭ್ಯಸಿಸಿಕೊಳ್ಳುವುದು, ಮದ್ಯಪಾನವನ್ನು ಮಾಡದೇ ಇರುವುದು ಈಗಾಗಲೇ ಮದ್ಯ ವ್ಯಸನಿಗಳಾಗಿದ್ದರೆ ಅದರ ಪ್ರಮಾಣವನ್ನು ಕಡಿಮೆ ಮಾಡುವುದು ಟಎಚ್‍ಪಿವಿ ಮತ್ತು ಹೆಪಟೈಟಿಸ್ ಬಿಗಳ ಲಸಿಕೆಯನ್ನು ಪಡೆಯುವುದು, ಸೂರ್ಯನ ತೀವ್ರತರವಾದ ಕಿರಣಗಳಿಗೆ ಅಥವಾ ರೇಡಿಯಷನ್ ಗೆ ಉಂಟಾಗದೇ ಇರುವುದು, ಯಾವುದೇ ಸ್ಥಳದಲ್ಲಿ ಹೆಚ್ಚು ರೇಡಿಯಷನ್ ಇರುಇವಲ್ಲಿ ಹೆಚ್ಚು ಸಮಯವನ್ನು ಕಳೆಯದೇ ಇರುವುದು.
ಆರೋಗ್ಯಕರವಾದ ಅಭ್ಯಾಸಗಳನ್ನು ಮಾಡಿಕೊಂಡು ಕ್ಯಾನ್ಸರ್‍ನ್ನು ತಡೆಗಟ್ಟಬಹುದಾಗಿದೆ. ಯಾವುದೇ ರೀತಿಯ ಅನಾರೋಗ್ಯಗಳು ಉಂಟಾದಾಗ ಬೇಗ ವೈದ್ಯರ ಬಳಿ ತಪಾಸಣೆಗೆ ಹೋಗಿ ಆರೋಗಯವನ್ನು ಕಾಪಾಡಿಕೊಳ್ಳಬೇಕು.

ಮಾಧುರಿ ದೇಶಪಾಂಡೆ,
ಬೆಂಗಳೂರು