ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಕಲಚೇತನರ ವ್ಯಾಜ್ಯಗಳನ್ನ ಶೀಘ್ರವಿಲೇವಾರಿ ಮಾಡಲಿಕ್ಕಾಗಿ ಮೂರನೇ ಅಡಿಷನಲ್ ಕೋರ್ಟ ತರೆವಂತೆ ಆದೇಶವಾಗಿದ್ದು ಆದಷ್ಟು ಬೇಗ ನ್ಯಾಯಾಲಯ ಓಪನ್ ಮಾಡಲಾಗುವುದು ಆಗ ವಿಕಲಚೇತನರಿಗೆ ಸಂಬಂದ ಪಟ್ಟ ದಾವೆಗಳು,ಕಡಿಮೆ ಶುಲ್ಕದಲ್ಲಿ ಇತ್ಯರ್ಥ ಪಡಿಸಲಾಗುವುದು ಇದರಿಂದ ವಿಶೇಷ ಚೇತನರು ವರ್ಷಾನುಗಟ್ಟಲೆ ನ್ಯಾಯಾಲಯಗಳಿಗೆ ಅಲೆದಾಡುವುದನ್ನ ತಪ್ಪಿಸಿದಂತಾಗುತ್ತದೆಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರುಣಕುಮಾರಿ ತಿಳಿಸಿದರು.
ನಗರದ ಸಿ.ಎಸ್.ಐ ಚರ್ಚ ಹಿಂಬಾಗದ ಸಭಾಂಗಣದಲ್ಲಿ ಕರ್ನಾಟಕ ವಿಕಲಚೇತನ ಸಂಸ್ಥೆಯಿಂದ ವಿಶ್ವ ವಿಕಲಚೇತನ ದಿನಾಚರಣೆ ಹಾಗು ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನ ಕಾನೂನು ಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಅರುಣಕುಮಾರಿ.ಎ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಯುವ ಮುಖಂಡ ಎಸ್ ಪಿ ಶ್ರೀನಿವಾಸ್ ಸಿಡಿಪಿಒ ಗಂಗಾದರಯ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅರುಣಕುಮಾರಿ ವಿಕಲಚೇತನರನ್ನ ವಿಷೇಶ ಚೇತನರೆಂದು ಕರೆಯಬೇಕು ಪೋಕ್ಸೋ ಕಾಯಿದೆಯಡಿ ಧಾಖಲಗಾತ್ತಿರುವ ಪ್ರಕರಣಗಳಲ್ಲಿ ವಿಷೇಶ ಚೇತನ ಮಕ್ಕಳು ಹೆಚ್ಚಾಗುತಿದ್ದಾರೆ ಕಣ್ಣು ಕಾಣದ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಮಕ್ಕಳಿಗೆ ಪರಿಹಾರ ಸಿಗಲಿದೆ ಕಾನೂನು ಸೇವೆಗಳಲ್ಲಿ ವಿಕಲಚೇತನರು ಸೇರಿದ್ದಾರೆ ಅವರಿಗೂ ಶುಲ್ಕ ರಹಿತ ಸೇವೆ ಸಿಗಲಿದೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ ವಿಕಲ ಚೇತನರು ಯಾರಿಗೂ ಕಡಿಮೆ ಇಲ್ಲ ವಿಕಲ ಚೇತನರು ಕೂಡ ಉನ್ನತ ಶಿಕ್ಷಣಪಡೆದು ಐ ಎ ಎಸ್ ಮಾಡಿ ಡಿಸಿಗಳಾಗಿದ್ದಾರೆ ಎಂ ಬಿ ಬಿಎಸ್ ಮಾಡಿ ವೈದ್ಯರಾಗಿದ್ದಾರೆ ಕ್ರೀಡ ಚಟುವಟಿಕೆಗಳಲ್ಲಿ ಉನ್ನತ ಸಾದನೆ ಮಾಡಿದ್ದಾರೆ ಸಮಾಜದ ಏಳಿಗೆಯಲ್ಲಿ ತಮ್ಮ ಪಾತ್ರವನ್ನು ಸಾಬೀತು ಪಡಿಸಿಕೊಂಡಿರುವ ಕರ್ನಾಟಕ ವಿಕಲಚೇತನರ ಸಂಸ್ತೆ ಕಾರ್ಯಕರ್ತರು ನೀರಾವರಿ ಹೋರಾಟಗಳಲ್ಲಿ,ಬಾಷೆ ನೆಲ ಜಲ ರಕ್ಷಣೆಯಲ್ಲೂ ಬಾಗವಹಿಸಿ ಸಾಮಾನ್ಯರಿಗಿಂತ ನಾವೇನು ಕಡಿಮೆ ಇಲ್ಲಾ ಅನ್ನೊದನ್ನ ತೋರಿಸಿಕೊಟ್ಟಿದ್ದಾರೆ ವಿಕಲಚೇತನರ ಸಂಸ್ಥೆ ಯಾವುದೆ ಕಾರ್ಯಕ್ರಮಗಳು ಕೈಗೊಂಡರು ನಾನು ಎಲ್ಲ ಕಡೆ ಬಾಗವಹಿಸಿ ಅವರ ಕುಟುಂಬಲ್ಲೊಬ್ಬನಾಗಿ ಸಹಾಯ ಮಾಡುತ್ತೇನೆ ಎಂದರು.
ಇದೆ ಕಾರ್ಯಕ್ರಮದಲ್ಲಿ ನೂತನವಾಗಿ ಮದುವೆಯಾದ ನವಜೋಡಿಗಳು,ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ,ಪಂಚಾಯಿತಿ ಕೇಂದ್ರಗಳಲ್ಲಿ ವಿಕಲಚೇತನರ ಪರ ಕೆಲಸ ಮಾಡುತ್ತಿರುವ ಡಿ ಪಿ ಎಸ್ ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ತಾಯಂದಿರಿಗೆ ಅಂಗವಿಕಲ ಮಕ್ಕಳ ತಾಯಂದರಿಗೆ ರೇಷನ್ ಕಿಟ್ ವಿತರಿಸಿದರು.
ಇದೆ ವೇಳೆ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಶಿಬಿರ ಹಮ್ಮಿಕೊಂಡು ಉಚಿತ ಔಷದಿಗಳ ವಿತರಣೆ ಮಾಡಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕೆ ವಿ ಎಸ್ ಅಧ್ಯಕ್ಷ ಸುಬ್ರಮಣಿ ವಹಿಸಿದ್ರು ವೇದಿಕೆಯಲ್ಲಿ ಕಾರ್ಯದರ್ಶಿ ಕಿರಣ್ ನಾಯಕ್,ಸಿಡಿಪಿಒ ಗಂಗಾದರಯ್ಯ,ಮಹಿಳಾ ವಿಕಲಚೇತನರ ಪರ ಸಂಘಟನೆಗಳ ಮುಖ್ಯಸ್ಥರು,ಎಸ್ ಪಿ ಶ್ರೀನಿವಾಸ್ ಮತ್ತು ಇತರರು ಇದ್ದರು.