ಬೆಂಗಳೂರು: ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ‘ಕುಲಕರ್ಣಿ ಮೆಡ್ ಜೋನ್’ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಉಚಿತ ಡಯಾಬಿಟಿಸ್ ಹಾಗೂ ಹೃದಯ ತಪಾಸಣಾ ಶಿಬಿರ ನಡೆಯಿತು.
ರಾಷ್ಟ್ರೀಯ ಮಧುಮೇಹ ಜಾಗ್ರತಿ ಸಂಸ್ಥೆ ಅಧ್ಯಕ್ಷ ಡಾ.ಮನೋಹರ್ ಕೆ ಎನ್, ಕಾರ್ಯದರ್ಶಿ ಡಾ.ವಿಜಯಕುಮಾರ್ ಹಾಗೂ ಕುಲಕರ್ಣಿ ಮೆಡ್ ಜೋನ್’ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀಹರಿ ಕುಲಕರ್ಣಿ ಈ ವೇಳೆ ಉಪಸ್ಥಿತರಿದ್ದರು.
ಡಯಾಬಿಟಿಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ಹಾಗೂ ಮುಂಜಾಗ್ರತಾ ಕ್ರಮ ಅನುಸರಿಸಿದಲ್ಲಿ , ಮಧುಮೇಹ ತಡೆಯಬಹುದು ಎಂದು ಅತಿಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತರ ಹನುಮೇಶ ಕೆ ಯಾವಗಲ್ಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು