ಏಪ್ರಿಲ್ 22ನೇ ತಾರೀಖು ವಿಶ್ವ ಭೂಮಿದಿನ. ಪ್ರತಿ ವರ್ಷವೂ ಏಪ್ರಿಲ್ 22ರಂದು ನಾವು ವಾಸಿಸುತ್ತಿರುವ ಗ್ರಹವಾದ ಭೂಮಿಯನ್ನು ಪರಿಸರವನ್ನು ಸಂಪನ್ಮೂಲಗಳನ್ನು ರಕ್ಷಿಸುವ ಹೊಣೆಗಾರಿಕೆ ಮತ್ತು ಮಹತ್ವವನ್ನು ಜನರಿಗೆ ತಿಳಿಸಲು ಈ ದಿನದ ಆಚರಣೆಯನ್ನು ಮಾಡಲಾಗುತ್ತದೆ.
2024ರ ಭೂಮಿ ದಿನದ ಥೀಮ್ ಪ್ಲಾನೆಟ್ ವರ್ಸಸ ಪ್ಲಾಸ್ಟಿಕ್ ಎಂಬುದಾಗಿದೆ. ಇಂದಿನ ದಿನಮಾನದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಭೂಮಿಯು ತನ್ನ ಸತ್ವವನ್ನು ಕಳೆದು ಕೊಳ್ಳುತ್ತಿದೆ. ಬಳಸಲು ಸುಲಭ ಹಾಗೂ ಕಡಿಮೆ ದರವೆಂದು ನಾವು ಬಳಸುತ್ತಿರುವ ಪ್ಲಾಸ್ಟಿಕ್ ನಿಂದ ಉಂಟಾಗುವ ಹಾನಿ ಮತ್ತು ಸಮಸ್ಯೆಗಳ ಬಗೆಗೆ ವಿಸ್ತೃತವಾಗಿ ಜನರಿಗೆ ತಿಳಿಸುತ್ತಾ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಡಿದಲ್ಲಿ ನಮ್ಮ ಭೂಮಿಯ ಸಂರಕ್ಷಣೆ ಸುಲಭ ಎಂಬುದನ್ನು ಮನದಟ್ಟು ಮಾಡಿಸುವುದೇ ಈ ಬಾರಿಯ ಥೀಮ್ ಆಗಿದೆ.
ಭೂಮಿಯಲ್ಲಿ ಪ್ಲಾಸ್ಟಿಕ್ ಬಳಕೆ ಅನೇಕ ಸಮಸ್ಯೆ ರೋಗಗಳನ್ನು ಬಿತ್ತಿ ಸಾಲದ್ದಕ್ಕೆ ನೀರನ್ನು ಕಲುಷಿತಗೊಳಿಸುತ್ತಿದೆ. ಪ್ಲಾಸ್ಟಿಕ್ ರಸಾಯನಿಕ ಪದಾರ್ಥಗಳಿಂದ ತಯಾರುವುದರಿಂದ ಭೂಮಿಯಲ್ಲಿ ಒಂದಾಗುವ ಗುಣ ಇರುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್ ಎನ್ನುವುದು ಸಾರ್ವಕಾಲಿಕ ಹಾನಿಯನ್ನೇ ಉಂಟು ಮಾಡುತ್ತದೆ. ಭೂಮಿಯ ಫಲವತ್ತೆಯನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಮೊದಲಾದ ರೋಗಗಳಿಗೆ ಮೂಲವಾಗುತ್ತದೆ.
ಹೀಗಾಗಿ ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಬೇಕೆನ್ನುವುದೇ ಈ ಬಾರಿಯ ಭೂಮಿದಿನದ ಥೀಮ್ ಆಗಿದೆ. ಎಲ್ಲರೂ ನಮ್ಮ ಮಟ್ಟಿಗೆ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಡಿ ಭೂಮಿಯನ್ನು ರಕ್ಷಿಸುವಲ್ಲಿ ನಮ್ಮ ಕೊಡುಗೆಯನ್ನು ಕೊಡೋಣ.
ನಾವು ಸ್ವತಃ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಲ್ಲದೆ ಜನರಲ್ಲಿ ಪ್ಲಾಸ್ಟಿಕ್ ಬಳಕೆಯ ಹಾನಿಯನ್ನು ಅದರಿಂದ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಮುಂದೆ ಪ್ಲಾಸ್ಟಿಕ್ ಹೀಗೆ ಪರಿಸರ ನಾಶ ಮಾಡುತ್ತದೆ.
ಸುಡುವುದರಿಂದ ವಾಯು ಮಾಲಿನ್ಯ, ನೀರಿನಲ್ಲಿ ವಿಸರ್ಜಿಸುವುದರಿಂದ ಜಲಚರಗಳ ನಾಶ ಹಾಗೂ ನೀರು ಕಲುಷಿತವಾಗುವುದು ಎಲ್ಲಕ್ಕೂ ಹೆಚ್ಚು ಭೂಮಿಯೂ ಸತ್ವ ಕಳೆದುಕೊಂಡು ಅನ್ನ ಆಹಾರ ಬೆಳೆಯಲು ಸಮಸ್ಯೆ ಗಿಡಮರಗಳ ಬೆಳವಣಿಗೆ ಕುಂಠಿ ತವಾಗಿ ಆಮ್ಲ ಜನಕದ ಕೊರತೆ ಕೂಡ ಉಂಟಾಗಬಹುದು ಎಂಬ ವಾಸ್ತವಿಕ ಭಯ ಕಾಡುವುದನ್ನು ತಪ್ಪಿಸಲು. ಪ್ಲಾಸ್ಟಿಕ್ ಮುಕ್ತ ಭೂಮಿಯನ್ನು ಮಾಡುವ ನಿಟ್ಟಿನಲ್ಲಿ ಕೆಲ್ಸಗಳನ್ನು ಮಾಡಬೇಕು.