ಪೀಣ್ಯ ದಾಸರಹಳ್ಳಿ: ಮಹಿಳೆಯರ ಸಾಧನೆಗೆ ಸಂಬಂಧಿಸಿದಂತೆ ಸಾಹಿತ್ಯ, ರಕ್ಷಣೆ, ಶಿಕ್ಷಣ, ಸಿನಿಮಾ ನಿರ್ದೇಶಕಿಯರು, ಸಮಾನ ವೇತನ ಪಡೆಯುತ್ತಿರುವುದು, ವಿಜ್ಞಾನ ಕ್ಷೇತ್ರದ ಸಾಧನೆ ಮತ್ತು ಪ್ರಶಸ್ತಿಗಳು, ಸರ್ಕಾರಿ ವಲಯಗಳಲ್ಲಿ ಮೇಲಾಧಿಕಾರಿಗಳಾಗಿರುವುದು ಪೋಲಿಸ್ ಇಲಾಖೆ, ಹೀಗೆ ಹಲವು ಸಾಧಕರನ್ನು ಸಾಧನೆಯಲ್ಲಿ ಸಮಾನತೆ ತೋರಿಸುವುದು ಉತ್ಸಾಹದಾಯಕ ವಿಷಯ’ ಎಂದು ಸಮ್ಮೇಳನ ಅಧ್ಯಕ್ಷೆ ಹಾಗೂ ಕಾದಂಬರಿಗಾರ್ತಿ ಕಮಲಾ ರಾಜೇಶ್ ಅಭಿಪ್ರಾಯ ಪಟ್ಟರು.
ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕನ್ನಡ ಪ್ರಥಮ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಮಾತನಾಡಿದರು.’ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ’ ಎಂದರು.
’18ಮತ್ತು 19ನೆಯ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರ್ಕಾರಿ ವಲಯದಲ್ಲಿಯೂ ‘ ಜೆಂಡರ್ ಪೇ ಗ್ಯಾಪ್ ‘ ಬಗ್ಗೆ ಧ್ವನಿ ಎತ್ತಲಾಗಿದೆ.ಸಮಾನತೆಗಾಗಿ ಹಲವು ಮಹಿಳಾವಾದಿಗಳು 1970- 80ರ ದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ:ಎಂದು ಅಭಿಪ್ರಾಯಪಟ್ಟರು.
‘ಮಹಿಳಾ ದಿನಾಚರಣೆಯನ್ನು ಮಾಡುವ ದೇಶಗಳು ಸಮಾಜಕ್ಕೆ ಮಾದರಿಯಾದ ಮಹಿಳೆಯರನ್ನು ನೆನೆದು ಗೌರವಿಸುತ್ತದೆ’ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರನ್ನು ನೆನೆಯಲು ಅವರ ಸಾಧನೆಯನ್ನು ಸಾರಲು ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ಪಠ್ಯಕ್ರಮ ಅಳವಡಿಸಿವೆ.ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತಾ ಮುನಿರಾಜು ಮಾತನಾಡಿ’ ಮಹಿಳೆಯರೂ ಕೂಡ ಶಿಕ್ಷಣ ಕಲಿತು ಸಮಾಜದಲ್ಲಿ ವಿವಿಧ ಆಯಾಮಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಿದ್ದಾಳೆ. ಈ ಕಾಲಘಟ್ಟದಲ್ಲಿ ಎಲ್ಲಾ ರಂಗದಲ್ಲೂ ದುಡಿಯುತ್ತಿರುವುದು ನಮ್ಮ ಕಣ್ಮುಂದೆ ಇದೆ’ ಎಂದರು.
ಜೀವ ಭಾವದ ಕೊಳಲು ಕವನ ಸಂಕಲನ ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತಾ ಮುನಿರಾಜು ಪುಸ್ತಕ ಬಿಡುಗಡೆ ಗೊಳಿಸಿದರು ಪುಸ್ತಕ ಪರಿಚಯ ಪರಿಚಯವನ್ನು ಜಯಲಕ್ಷ್ಮಿ ಕೆ ಮಡಿಕೇರಿ ಮಾತುನಾಡುತಬದುಕಿನ ವಿವಿಧ ಆಯಾಮಗಳಲ್ಲಿ ಅವರ ಜೀವನಾನುಭವದ ಅಭಿವ್ಯಕ್ತಿಯೇ ಇಲ್ಲಿನ ಕವನಗಳು ಎಂದೆಸುವುದು. ಯಾವಾಗ ಕವನಗಳಲ್ಲಿ ವ್ಯಕ್ತಗೊಳ್ಳುವ ಅನುಭವಗಳು ಸಾರ್ವತ್ರಿಕ ಅನುಭವಗಳೆಂದು ಭಾಸವಾಗುವುದೋ ಅಂಥ ಕವನಗಳ ಓದುಗರ ಹೃದಯವನ್ನು ಗೆಲ್ಲುತ್ತವೆ. ಆ ಶಕ್ತಿ ಶ್ರೀಯುತ ರವೀಶ್ ರವರ ಕವನಗಳಲ್ಲಿದೆ.
ಎಂದು ಅಭಿಪ್ರಾಯಪಟ್ಟರುಸಮಾರಂಭದಲ್ಲಿ ಸಾಹಿತಿ ವೈ.ಬಿ.ಎಚ್ ಜಯದೇವ್ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕವನ ವಾಚಸಿದರು. ವಿಚಾರಗೋಷ್ಠಿ ಅಧ್ಯಕ್ಷತೆಯಲ್ಲಿ ಕಾದಂಬರಿಗಾರ್ತಿ ಸಿ .ನಂದನಿ ಪ್ರಶಸ್ತಿ ಪ್ರಧಾನದಲ್ಲಿ ಶ್ರೀ ಮತಿ ಶ್ವೇತ ಪ್ರಕಾಶ್ ಶ್ರೀಮತಿ ಎಸ್ ಜಲ ಜಾಕ್ಷಿ ಡಾ ವಿಜಯ ಲಕ್ಷ್ಮಿ ಸತ್ಯ ಮೂರ್ತಿ ಶ್ರೀ ಮತಿ ಭಾಗ್ಯ ಲಕ್ಷ್ಮಿ ಮಗ್ಗೆ ಶ್ರೀ ಮತಿ ಪಾರ್ವತಮ್ಮ ಮಂಜಣ್ಣ ಶ್ರೀ ಮತಿ ಸುರುಭಿ ಲತಾ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರ ನಗುವಿನಿಂದಲೇ ತುಂಬಿತ್ತು ಸಭಾಂಗಣವು..!
ಪ್ರಶಸ್ತಿ ಪತ್ರ..ಪ್ರಮಾಣ ಪತ್ರ..ಕಾರ್ಯಕ್ರಮದ ಸವಿ ನೆನಪಿಗಾಗಿ ಸುಂದರ ನೆನಪಿನ ಸ್ಮರಣಿಕೆಯು.. ತವರಿಗೋದ ಹೆಣ್ಣುಮಗಳಿಗೆ ಮಡಿಲ ತುಂಬುವಂತೆ
ಚಂದದ ಸೀರೆ ತೆಂಗಿನಕಾಯಿ ಮಡಿಲಕ್ಕಿ ಜೊತೆಗೆ ಅರಿಶಿನ ಕುಂಕುಮದ ಸಂಗಮದ ಬಾಗಿನವು.. ಈ ಹಿಂದೆ ಯಾರೂ ಮಾಡಿರದ ರೀತಿಯಲ್ಲಿ ವಿಶೇಷ ಕೊಡುಗೆ ಆತ್ಮೀಯತೆಯ ಉಡುಗೊರೆಯು..! ಈ ಸಂಸ್ಥೆಯ ವಿಶೇಷವಾಗಿತ್ತು.
ಹಗಲಿನಿಂದ ಸಂಜೆಯವರೆಗೂ ಸರಿದದ್ದೇ ತಿಳಿಯಲಿಲ್ಲ ಸಮಯವು.ಸಂಸ್ಥೆಯ ಅಧ್ಯಕ್ಷ ಈ. ರವೀಶ, ಗೌರವಾಧ್ಯಕ್ಷೆ ಆರ್. ಶೈಲಜಾ ಬಾಬು, ಖಜಾಂಚಿ ಬಿ. ಟಿ. ಸವಿತಾ, ಉಪಾಧ್ಯಕ್ಷ ಬಿ ಈ ರಮೇಶ್, ಭೂಮಿಕಾ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ ಮುಂತಾದವರಿದ್ದರು.