ಅರೆ ಸರಕಾರಿ ಸಂಸ್ಥೆಗಳು ಎಂದರೆ ಸರಕಾರದಿಂದ ಧನ ಸಹಾಯ ಪಡೆದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸರಕಾರವನ್ನು ಪ್ರತಿನಿಧಿಸುತ್ತಾ ಸಾಮಾಜಿಕ ಕಾರ್ಯಗಳನ್ನು ಮಾಡುವವರು ಆಗಿದ್ದಾರೆ. ಕೇವಲ ಲಾಭಾಪೇಕ್ಷೆಯಿಂದ ಹಣಕ್ಕಾಗಿಯೇ ಕೆಲಸ ಮಾಡುವ ಇಂದಿನ ಕಾಲದಲ್ಲಿ ಕೆಲವು ಅರೆಸರಕಾರಿ ಸಂಸ್ಥೆಗಳು ಸಾಮಾಜಿಕ ಕಾರ್ಯಗಳನ್ನು ಬಹಳ ಶ್ರದ್ದಧೆಯಿಂದ ಮಾಡುತ್ತಲಿದ್ದಾರೆ.
ವತಿಯಿಂದ ಎಲ್ಲ ಸಾಮಾಜಿಕ ಕಾರ್ಯಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲು ಸಾಧ್ಯವಾಗದೇ ಇರುವ ಕಾರಣ ಉತ್ತಮವಾದ ಯೋಜನೆಗಳೊಂದಿಗೆ ಬರುವ ಅರೆಸರಕಾರಿ ಸಂಸ್ಥೆಗಳಿಗೆ ಸರಕಾರವು ಅನುದಾನವನ್ನು ನೀಡಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಸಹಾಯ ಮಾಡುತ್ತದೆ ಇಂತಹ ಅರೆಸರಕಾರಿ ಸಂಸ್ಥೆಗಳು ಸಾಮಾಜಿಕ ಬೆಳವಣಿಗೆಯಲ್ಲಿ ಕುಪದ್ಧತಿಗಳನ್ನು ಓಡಿಸುವುದರಲ್ಲಿ, ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸುವಲ್ಲಿ, ಬಹಃಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ವಿಶ್ವದಾದ್ಯಂತ 10 ಮಿಲಿಯನ್ಗಳಿಗಿಂತಲೂ ಹೆಚ್ಚು ಅರೆ ಸರಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಮೂಲಭೂತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ಸಿಗಲೀ ಎಂದು ಪ್ರಯತ್ನಿಸುತ್ತಿರುವ ಈ ಸಂಸ್ಥೆಗಳಿಗೆ ಒಂದು ದಿನವನ್ನು ಸಮರ್ಪಿಸುವ ಸಲುವಾಗಿ ಫೆಬ್ರವರಿ 27ನೇ ತಾರೀಖಿನಂದು ವಿಶ್ವ ಅರೆಸರಕಾರಿ ಸಂಸ್ಥೆಗಳದಿನವನ್ನು ವಿಶ್ವದಾದ್ಯಂತ 6 ಖಂಡಗಳಲ್ಲಿನ 89 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.
ವಿಶ್ವದಲ್ಲಿ ಮೊದಲ ಎನ್ಜಿಒ 1839ರಲ್ಲಿ ಅಂತಾರಾಷ್ಟ್ರೀಯವಾಗಿ ಕಟ್ಟಲಾಯಿತು ಆ ಸಂಸ್ಥೆಯ ಹೆಸರು ದಿ ಆಂಟಿ ಸ್ಲೇವರಿ ಸೊಸೈಟಿ ಎಂಬುದಾಗಿತ್ತು. 1945ರಲ್ಲಿ ಇಂತಹದೇ ಸಾಮಾನ್ಯ ಉದ್ಧೇಶಗಳಿಗಾಗಿ ಸಮಾಜದ ಒಳಿತಿಗಾಗಿ ಕೆಲಸಗಳನ್ನು ಮಾಡಲು ವಿಶ್ವ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆಗ ಈ ಅರೆಸಕಾರಿ ಸಂಸ್ಥೆ ಅಥವಾ ಎನ್ಜಿಒ ಎಂಬ ಪದವನ್ನು ವಿಶ್ವ ಸಂಸ್ಥೆಯ ಯುನೈಟಿಡ್ ನೇಷನ್ ಕಾರ್ಟರ್ನ 71ನೇ ಆರ್ಟಿಕಲ್ ನ 10ನೇ ಅಧ್ಯಾಯದಲ್ಲಿ ಬಳಸಲಾಯಿತು.
2010ರಲ್ಲಿ ಮಾರ್ಸಿಸ್ ಸ್ಕಡಮಿನಿಸ್ ಮೊದಲ ಬಾರಿಗೆ ವಿಶ್ವ ಅರೆಸಕಾರಿ ದಿನದ ವಿಚಾರವನ್ನು ಪ್ರಸ್ತಾಪಿಸಿದರು ಮತ್ತು 2012ರಿಂದ ಈ ದಿನದ ಆಚರಣೆಯನ್ನು ವಿದ್ಯುಕ್ತವಾಗಿ ಆರಂಭಿಸಿದರು. 2024ರ ವಿಶ್ವ ಅರೆಸರಕಾರಿ ದಿನದ ಘೋಷವಾಕ್ಯ “ಸದೃಢವಾದ ಭವಿಷ್ಯವನ್ನು ಕಟ್ಟುವುದು : ಅರೆಸರಕಾರಿ ಸಂಸ್ಥೆಗಳ ಗುರಿ ಸದೃಢವಾದ ಬೆಳವಣಿಗೆಯೊಂದಿಗೆ ಗುರಿಗಳನ್ನು ಮುಟ್ಟುವುದಾಗಿದೆ”
ಅರೆ ಸರಕಾರಿ ಸಂಸ್ಥೆಗಳು ಸಾಮಾಜಿಕ ಕಾರ್ಯಗಳನ್ನು ಮಾಡುವದರಿಂದ ದೇಶದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗೆ ಕಾರಣವಾಗುವುದರ ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಉತ್ತಮ ಉದ್ಯೋಗ ಸೃಷ್ಟಿಯನ್ನು ಕೂಡ ಮಾಡುವುದರಿಂದ ಇಂದಿನ ಸಮಯದಲ್ಲಿ ಎನ್ಜಿಒಗಳು ಕಾರ್ಪೊರೇಟ್ ಉದ್ಯಮಗಳಂತೆಯೇ ದೊಡ್ಡ ಪ್ರಮಾಣದ ಉದ್ಯಮಗಳಾಗಿಯೇ ಉತ್ತಮ ಕಾರಣಕ್ಕಾಗಿ ಸ್ವಂತ ಬೆಳವಣಿಗೆಯೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಬಯಲುವವರಿಗೆ ಉತ್ತಮ ಮಾಧ್ಯಮವಾಗಿದೆ. ಹೀಗಾಗಿ ಎನ್ ಜಿ ಒಗಳಲ್ಲಿ ಕೆಲಸ ಮಾಡುವವರು ತಮ್ಮ ಉದ್ಯೋಗದ ಜೊತೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿ ಕೊಂಡಿರುತ್ತಾರೆ.
ಇತ್ತೀಚಿಗೆ ಎಲ್ಲ ಕಡೆಯೂ ಭ್ರಷ್ಟಾಚಾರ ಮತ್ತು ದುರುಪಯೋಗಗಳು ನಡೆಯುವಂತೆ ಹಲವು ಕ್ಷೇತ್ರಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೇವಲ ಲಾಭ ಪಡೆಯುವ ನಕಲಿ ಎನ್ ಜಿ ಒಗಳು ಕೂಡ ಇರುತ್ತವೆ, ಹೀಗಾಗಿ ನಾವು ಯಾವುದೇ ಎನ್ ಜಿ ಒ ಅಥವಾ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿ ಕೊಳ್ಳುವಾಗ ಯೋಚಿಸಿ ಪರಿಶೀಲಿಸಿ ತೊಡಗಿಸಿ ಕೊಳ್ಳಬೇಕು. ಹಣ ಸಹಾಯ ಅಥವಾ ನಮ್ಮ ಸಕ್ರಿಯತೆಯನ್ನು ಕೂಡ ಸರಿಯಾಗಿ ನಡೆಯುತ್ತಿರುವ ಸಂಸ್ಥೆಯಲ್ಲಿರಬೇಕು.
-ಮಾಧುರಿ ದೇಶಪಾಂಡೆ, ಬೆಂಗಳೂರು