This is the title of the web page
This is the title of the web page

ವಿಶ್ವ ನಿದ್ರೆ ದಿನ ನಿದ್ರೆ ಪದದ ಅರ್ಥಗಳು 1. ನಿದ್ದೆ, 2. ಆಲಸ್ಯ : ಸೋಮಾರಿತನ....

ಮನುಷ್ಯನ ದೇಹಕ್ಕೆ ಅವಶ್ಯಕತೆಯಿರುವ ವಿಶ್ರಾಂತಿ ನೀಡುವುದು ನಿದ್ರೆ. ನಿದ್ರೆಯಲ್ಲಿ ಮನುಷ್ಯ ತನ್ನ ಎಲ್ಲ ಚಟುವಟಿಕೆಗಳಿಂದ ಮುಕ್ತನಾಗಿ ವಿಶ್ರಾಂತಿ ಪಡೆಯುತ್ತಾನೆ. ಎಲ್ಲ ಜೀವಗಳಿಗೂ ಈ ವಿಶ್ರಾಂತಿ ರೂಪದ ನಿದ್ರೆ ಅತೀ ಅವಶ್ಯ. ಸಣ್ಣ ಮಕ್ಕಳು 10-12 ತಾಸು, ಯುವಕರು 7-8ತಾಸು, ನಡುವಯಸ್ಸಿನವರು ಮತ್ತು ಮುದುಕರು 6-7 ತಾಸುಗಳ ಸಾಮಾನ್ಯ ನಿದ್ರೆ ಅವಶ್ಯಕವಾಗಿದೆ.

ಆದರೆ ಇಂದಿನ ಸಮಾಜದಲ್ಲಿ ನಿದ್ರೆಯ ಕೊರತೆ ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಕ್ಕಳದ್ದು ಮತ್ತು ಮುದುಕರದ್ದು ಗಾಢ ನಿದ್ರೆ ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯ, ವಯಸ್ಕರದ್ದು ನಡುವಯಸ್ಸಿನವರಿಗೆ ನಿದ್ರೆ ಕಮ್ಮಿ. ಆದರೆ ಈಗೀಗ ಎಲ್ಲ ವಯೋಮಾನದವರಿಗೂ ನಿದ್ರೇಯೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಸಣ್ಣ ಮಕ್ಕಳೂ ಕೂಡಾ ಕೋಳಿಗಳ ನಿದ್ದೇಯಂತೆ ಕೆಲವೇ ನಿಮಿಷಗಳ ಕಾಲ ಮಲಗುತ್ತಾರೆ.
ನಿದ್ರೆಯ ಮಹತ್ವ ಹಾಗೂ ಅವಶ್ಯಕತೆಯನ್ನು ತಿಳಿಸಲು ಈ ವಿಶ್ವ ನಿದ್ರೆಯ ದಿನವನ್ನು ವಿಶ್ವ ನಿದ್ರಾ ಸಂಸ್ಥೆ 2008ರಿಂದ ಮಾರ್ಚ್ 17ನೇ ತಾರೀಖು ಆಚರಿಸಿಕೊಂಡು ಬರುತ್ತಿದ್ದಾರೆ.

ಇಂತಹ ದಿನ ಬೇಕೇ ಎಂಬುದು ಕೆಲವರ ಪ್ರಶ್ನೆಯಾಗಿರ ಬಹುದು. ಇತ್ತೀಚಿನ ಹಲವು ದಶಕಗಳ ಅತೀ ವೇಗದ ಜೀವನ ಶೈಲಿಯ ಕಾರಣ. 20ನೇ ಶತಮಾನದಲ್ಲಿ ಜೀವನ ಶೈಲಿಗೆ ನಿದ್ರೆ ದೊಡ್ಡ ಸಮಸ್ಯೆಯಾಗಿದೆ. ಹಗಲು ನಿದ್ರೆ ಬೊಜ್ಜು ಮೊದಲಾದ ಸಮಸ್ಯೆಗೆ ಕಾರಣ. ರಾತ್ರಿ ನಿದ್ರೆಯಿಂದ ಸಂಪೂರ್ಣ ವಿಶ್ರಾಂತಿ ಮತ್ತು ಆರೋಗ್ಯ ದೊರೆಯುತ್ತದೆ. ರಾತ್ರಿ ಪಾಳಿ ಹಾಗೂ ಅಮೇರಿಕಾ ಸಮಯಕ್ಕೆ ಕೆಲಸ ಮಾಡುವವರಿಗೆ ಹೀಗೆ ರಾತ್ರಿ ನಿದ್ದೆ ಕೆಡುವುದು ಅನಿವಾರ್ಯವಾಗುತ್ತದೆ. ಜೊತೆಗೆ ಹೀಗೆ ರಾತ್ರಿ ನಿದ್ದೆ ಕೆಡುವವರು ಇದೆ ಅಭ್ಯಾಸ ಮುಂದುವರೆಸಿಕೊಂಡು ಹಗಲು ಹೊತ್ತು ಮಲಗುವುದನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಆಯುರ್ವೇದ ಶಾಸ್ತ್ರದ ಪ್ರಕಾರ ಮಧ್ಯಾಹ್ನದ ನಿದ್ರೆ ಆರೋಗ್ಯಕ್ಕೆ ಹಾನಿಕರ ಆಲಸ್ಯ ಬೊಜ್ಜು ಮೊದಲಾದ ಸಮಸ್ಯೆಗಳನ್ನು ತರುತ್ತದೆ . ಆದರೆ ರಾತ್ರಿ ಸಮಯದ ನಿದ್ರೆ ಮನುಷ್ಯನಿಗೆ ಸಂಪೂರ್ಣವಾದ ವಿಶ್ರಾಂತಿ ನೀಡಿ ಅರೋಗ್ಯವಂತನನ್ನಾಗಿ ಇಡುತ್ತದೆ. ಹಿಂದೆ ದೈಹಿಕ ಶ್ರಮದ ಮತ್ತು ನಮ್ಮ ತಲೆ ಉಪಯೋಗ ಬಹಳ ಆಗುತ್ತಿದ್ದ ಕಾರಣ ಅನಾಯಸ ನಿದ್ರೆ ಬರುತ್ತಿತ್ತು. ಹರಟೆ ಮಾತ್ರ ಮನರಂಜನೆ ಆಗಿತ್ತು. ಆದರೆ ಈಗ ಆಯಾಸ ಕಮ್ಮಿ, ಎಲ್ಲಕ್ಕೂ ಹೆಚ್ಚಿಗೆ ಣv ಮತ್ತು ಇಂಟರ್ನೆಟ್ ಹಾವಳಿಯಿಂದ ನಿದ್ರೆಯ ಸಮಯದಲ್ಲಿ ಏರುಪೇರಾಗಿದೆ. ಈ ಕಾರಣದಿಂದ 2008ನೇ ಇಸವಿಯಿಂದ ವಿಶ್ವ ನಿದ್ರೆಯ ದಿನದ ಆಚರಣೆ ಆರಂಭವಾಯಿತು.

Early to bed and early to rise ಎಂದು ಆಂಗ್ಲದಲ್ಲಿಯೇ ನುಡಿಮುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಎಷ್ಟು ತಡವಾಗಿ ಮಲಗುತ್ತೇವೆಯೋ ಅಷ್ಟು ಬುದ್ಧಿವಂತರು, ಕೆಲಸವಂತರು ಎಂದೆಲ್ಲ ಭಾವನೆ ಬೆಳೆದು ಬಿಟ್ಟಿದೆ. ಕೆಲಸ ಪ್ರಯಾಣ ಮೊದಲಾದ ಕಾರಣಗಳಲ್ಲಿ ಸಣ್ಣ ವಯಸ್ಸಿನ ಯುವಕರು ಯುವತಿಯರು ಬೇರೆಲ್ಲ ಕೆಲಸ ಮುಗಿಸಿ ನಿದ್ರೆಯಲ್ಲಿ ಕಡಿತ ಮಾಡಿಕೊಂಡು ಜೀವನ ಸಾಗಿಸುವ ಕಾರಣ. ವಿವಿಧ ರೀತಿಯ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಕಾಯಿಲೆಗೆ ಔಷಧಿಗಳಿಗೆ ಕೊಡುವ ಗುಳಿಗೆಗಳಿಂದ ನಿದ್ರೆ ಬರುತ್ತದೆ. ಅರ್ಥವೆನೆಂದರೆ ವಿಶ್ರಾಂತಿ ಅಗತ್ಯ ಎಂದು.

ಇಂತಹ ಆಚರಣೆ ಎಂದು ನಾವು ಮಲಗುವ ಅಗತ್ಯತೆ ಅನಿವಾರ್ಯತೆ ತಿಳಿಯವುದಕ್ಕಿಂತ ನಮ್ಮ ಅರೋಗ್ಯದ ಸಲುವಾಗಿ ಉತ್ತಮ ನಿದ್ರೆ ಮಾಡಬೇಕು. ನಮ್ಮ ಜೀವನ ಶೈಲಿ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು. ಏಕೆಂದರೆ ನಮ್ಮ ಮಕ್ಕಳು ನಮ್ಮ ಮಾತು ಕೇಳುವುದಕ್ಕೂ ಹೆಚ್ಚಾಗಿ ನಮ್ಮನ್ನು ನೋಡಿ ಕಲಿಯುತ್ತಿರುತ್ತಾರೆ.

ಸಂಪೂರ್ಣವಾದ ನಿದ್ರೆಯನ್ನು ಅನುಭವಿಸಿದವನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಸನ್ನ ಚಿತ್ತವಾಗಿರುತ್ತದೆ. ನಿದ್ರೆ ಸರಿಯಾಗಿ ಆಗದವನ ಮನ ಅಶಾಂತ ಹಾಗೂ ದೇಹಕ್ಕೆ ಆಲಸ್ಯ ಕಾಣುತ್ತದೆ. ಮನುಷ್ಯ ನಿರ್ಮಿತ ಯಂತ್ರಗಳಿಗೆ ವಿಶ್ರಾಂತಿಯ ಅವಶ್ಯಕತೆ ಇರುವಾಗ ಜೀವ ಮನಸ್ಸು ಇರುವ ಮನುಷ್ಯನಿಗೆ ನಿದ್ರೆ ಅತೀ ಅವಶ್ಯಕ.

ಮನದ ದುಗುಡ ದೇಹದ ಆಯಾಸ ಎಲ್ಲವುದರ ಪರಿಹಾರ ಮತ್ತು ಮುಂದೆ ಅದನ್ನು ಎದುರಿಸುವ ಚೈತನ್ಯ ನೀಡುವುದು ನಿದ್ರೇಯೇ. ಸಣ್ಣ ಮಕ್ಕಳ ಬೆಳವಣಿಗೆ ಮತ್ತು ವಿಕಾಸ ನಿದ್ರಾ ಸಮಯದಲ್ಲಿಯೇ ಆಗುವುದರಿಂದ ಅವರನ್ನು ಮಲಗಿದ ಸಮಯದಲ್ಲಿ ಎಬ್ಬಿಸಬಾರದೆಂದು ಹೇಳುತ್ತಾರೆ. ನಿದ್ರೆಯ ಮಹತ್ವ ಅರಿತು ಸಮಯ ಸಮಯಕ್ಕೆ ನಿದ್ರೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

ಮಾಧುರಿ ದೇಶಪಾಂಡೆ, ಬೆಂಗಳೂರು