ಫೆಬ್ರವರಿ ನೇ 20ನೇ ತಾರೀಖಿನಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ನೇ ನವೆಂಬರ್ 26ನೇ ನಿರ್ಣಯಿಸಿ 2009ನೇ ಫೆಬ್ರವರಿ 20ನೇ ತಾರೀಖನ್ನು “ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲು ಆರಂಭಿಸಲಾಗಿದೆ.
ಅಂತರಾಷ್ಟ್ರೀಯವಾಗಿ ಸಮಾಜದಲ್ಲಿ ಬಡತನ, ಶಿಕ್ಷಣ, ಲಿಂಗ ಸಮಾನತೆ, ನಿರುದ್ಯೋಗ, ಮಾನವ ಹಕ್ಕುಗಲ್ಲಿ ಮತ್ತು ಸಾಮಾಜಿಕ ಸುರಕ್ಷತೆಯಲ್ಲಿ ಅಸಮಾನತೆಯನ್ನು ಹೊಡೆದೊಡಿಸಿ “ಸರ್ವರಿಗೂ ಸಮಬಾಳು ಸಮ ಪಾಲು” ಎಂಬ ವಿಚಾರದ ಆಧಾರದ ಮೇಲೆ ಜಾಗತಿಕವಾಗಿ “ವಿಶ್ವ ಸಾಮಾಜಿಕ ನ್ಯಾಯದಿನ” ವನ್ನು ಆಚರಿಸಲು ಆರಂಭಿಸಿದರು.
ಪ್ರತಿ ವರ್ಷವೂ ಒಂದು ವಿಶೇಷ ಥೀಮ್ ಹಾಗೂ ಘೋಷವಾಕ್ಯದೊಂದಿಗೆ ದಿನಾಚರಣೆಯನ್ನು ಆಚರಿಸಲಾಗುತತದೆ. 2024ನೇ ಇಸವಿಯ ಘೋಷ ವಾಕ್ಯ “ಅಂತರಗಳನ್ನು ಹೊಡೆದೊಡಿಸಿ ಸೇತುವೆಯನ್ನು ಕಟ್ಟುವುದು ಮತ್ತು ಮೈತ್ರಿಯನ್ನು ಬೆಳೆಸುವುದು” ಎಂಬುದಾಗಿದೆ.
ಸಮಾಜದಲ್ಲಿ ಲಿಂಗ, ಬಣ್ಣ, ಆರ್ಥಿಕ ಪರಿಸ್ಥಿತಿಯ ಅಸಮಾನತೆಯನ್ನು ಸದಾ ಕಾಣುತ್ತೇವೆ ಅದರಲ್ಲಿ ಭಾರತದಲ್ಲಿ ಇವುಗಳೆಲ್ಲದರ ಜೊತೆಗೆ ಜಾತಿ ಧರ್ಮದ ನಡುವೆಯೂ ಅಸಮಾನತೆಯಿದೆ. ಭಾರತದಲ್ಲಿ ಜಾತಿಯ ಅಸಮಾನತೆ ಕೆಲವು ಪ್ರದೇಶಗಳಲ್ಲಿ ಇನ್ನೂ ಇರುವುದು ವಿಷಾದನೀಯ. ಆರ್ಥಿಕ ಅಸಮಾನತೆಯಂತೂ ತಲೆತಲಾಂತರಗಳಿಂದ ನಡದೇ ಬಂದಿದೆ ಅದಕ್ಕೆ ಪರಿಹಾರ ಎಂದೋ ತಿಳಿದಿಲ್ಲ ಲಿಂಗದ ಅಸಮಾನತೆಯಂತೂ ಜಾಗತಿಕ ಸಮಸ್ಯೆಯೇ ಆಗಿದೆ.
ವಿರುದ್ಧ ಹೋರಾಡಲು ನಾವು ಸಿದ್ಧರಾಗಬೇಕು.ಭಾರತದಲ್ಲಿ ಸಾಮಾಜಿಕ ನ್ಯಾಯ ಭ್ರಷ್ಟಾಚಾರದ ವಿರುದ್ಧವೂ ಆಗಬೇಕಿದೆ. ಸರಕಾರವು ಸಾಮಾಜಿಕ ಅಸಮಾನತೆಗೆ ಅನೇಕ ಯೋಜನೆಗಳನ್ನು ರೂಪಿಸಿದರೂ ಅದು ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟುವವರೆಗೂ ಭ್ರಷ್ಟಾಚಾರ ಎಂಬ ಭೂತ ಕಡಲೆಕಾಳನ್ನು ಸಾಸಿವೆ ಕಾಳಾಗಿ ಮಾಡಿ ಪ್ರಯತ್ನವನ್ನು ನೀರಿನಲ್ಲಿ ಮಾಡಿದ ಹೋಮವನ್ನಾಗಿ ಮಾಡುತ್ತಿದೆ, ಆದ್ದರಿಂದ ಮೊದಲಿಗೆ ಭ್ರಷ್ಟಾಚಾರದ ವಿರುದ್ಧ ಧನಿಯನ್ನು ಎತ್ತಬೇಕು.
ವಿಶ್ವದಾದ್ಯಂತ ಅನೇಕ ದೇಶಗಳ ಜನರು ಬಡತನ ನಿವಾರಣೆಗೆ ಅಬಹಳ ಕಾರ್ಯಕ್ರಮಗಳನ್ನು ಮಾಡಿರುತ್ತಾರೆ. ವಿದೇಶಗಳಲ್ಲಿ ಭಿಕ್ಷುಕರ ಸಂಖ್ಯೆ ಬಡತನ ರೇಖೆಯ ಜನರ ಸಂಖ್ಯೆ ಕಡಿಮೆ ಇದೆ ಆದರೆ ಭಾರತೀಯರಲ್ಲಿ ಬಡತನ ರೇಖೆ ಇನ್ನು ಸರಿಯಾಗಿ ಆಗದಿರುವ ಕಾರಣ ಸರಕಾರಿ ಯೋಜನೆಗಳ ದುರ್ಬಳಕೆಯನ್ನು ಜಾತಿಯ ಆಧಾರದ ಮೇಲೆ ಮತ್ತು ಸುಳ್ಳು ಮಾಹಿತಿಗಳನ್ನು ನೀಡುವುದರ ಮೂಲಕ ಆಗುತ್ತಿರುವುದರಿಂದ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರತಿ ಬಾರಿಯೂ ಹೊಸ ಮಾರ್ಗಗಳನ್ನು ಹುಡುಕುವ ಅವಶ್ಯಕತೆ ಬಂಧಿದೆ.
ಜಾತಿ ಪ್ರಮಾಣ ಪತ್ರದ ಆದಾರದ ಮೇಲೆ ಲಕ್ಷಾನುಪಟ್ಟಲೇ ಆಸ್ತಿ ಇರುವವರೂ ಕೂಡ ಮಕ್ಕಳನ್ನು ಆರ್ಟಿಇ ಸೀಟಿನಲ್ಲಿ ಓದಿಸುವುದು, ತಮ್ಮ ಬಳಿ ಕಾರ್ ಇದ್ದರೂ ಬಿಪಿಎಲ್ ಕಾರ್ಡಿನ ದವಸ ಧಾನ್ಯ ಲಾಭ ಮೆಡಿಕಲ್ ಫಿಸಿಲಿಟಿಗಳನ್ನು ಪಡೆಯುವುದು. ಸರಕಾರಿ ದಾಖಲಾತಿಗಳನ್ನು ಲಂಚದ ಹಣ ಕೊಟ್ಟು ಬಡವರು ಯಾವುದೇ ಸವಲತ್ತು ಪಡೆಯಲು ಆಗದ ಜನರು ಇನ್ನೂ ಅವರಿಗಾಗಿ ಯೋಜಿಸಿದ ಸೌಕರ್ಯಗಳಿಂದ ವಂಚಿತರಾಗಿರುವುದನ್ನು ತೋರಿಸುತ್ತದೆ.
ಬಡವರು ಬಡವಾರಾಗಿಯೇ ಇದ್ದಾರೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಾರೆ. ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿರುವ ಜನ ಮಧ್ಯಮ ವರ್ಗದವರಾಗಿದ್ದಾರೆ. ಹೀಗಾಗಿ ಹೆಸರಿಗೆ ಸಾಮಾಜಿಕ ನ್ಯಾಯದ ಹೋರಾಟ ಆದರೆ ಸಮಾಜದಲ್ಲಿ ಅಸಮಾನತೆ ಹೋಗುತ್ತಿಲ್ಲ.
ಇಂದಿನ ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಾವು ಕೂಡ ನಮ್ಮ ಹಕ್ಕಿಗಾಗಿ ದನಿಯೆತ್ತಬೇಕು. ಸರಕಾರವು ನಮಗೆ ಕೊಡುವ ಸೌಕರ್ಯಗಳನ್ನು ನಾವೇ ಪಡೆಯುವತ್ತ ಧೈರ್ಯದಿಂದ ಮುನ್ನುಗ್ಗಬೇಕು.
ಒಂದು ಗಾದೆ ಮಾತಿದೆ “ಸ್ವತಃ ಸಾಯುವರೆಗೆ ಸ್ವರ್ಗ ಸಿಗುವುದಿಲ್ಲ” ಎಂದು ಆದ್ದರಿಂದ ಸಿಗುವ ಅವಕಾಶದ ಸದುಪಯೋಗ ಮಡಿಕೊಳ್ಳುವದರ ಜೊತೆಗೆ ದುರ್ಬಳಕೆ ಮಾಡುತತಿರುವವರ ವಿರುದ್ಧವೂ ನಾವು ಹೋರಾಡ ಮಾಡಿದಾಗ `ಸಾಮಾಜಿಕ ನ್ಯಾಯ” ಪರಿಕಲ್ಪನೆಗೆ ಮಹತ್ವ ದೊರೆಯುತ್ತದೆ. ಈ ರೀತಿ ನಾವು ಸಕ್ರಿಯವಾಗಿ ಸಾಮಾಜಿಕ ನ್ಯಾಯವನ್ನು ಪಡೆಯುವಲ್ಲಿ ಭಾಗವಹಿಸಿದಾಗ ಮಾಡುವ ದಿನಾಚರಣೆ ಸಾರ್ಥಕವಾಗುತ್ತದೆ.
ಮಾಧುರಿ ದೇಶಪಾಂಡೆ, ಬೆಂಗಳೂರು