ಟೆಸ್ಟ್ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಇದೀಗ ಹೊಸ ಕ್ರಮಕ್ಕೆ ಮುಂದಾಗಿದೆ.ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ೨೦೨೭-೨೦೨೯ ರ ಆವೃತ್ತಿಗೆ ಭಾಗವಹಿಸಲಿರುವ ತಂಡಗಳ ಸಂಖ್ಯೆಯನ್ನು ೯-೧೨ ಕ್ಕೆ ಏರಿಸಲು ನಿರ್ಧರಿಸಿದೆ. ಅಂದರೆ ಜಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಹೊಸದಾಗಿ ಸೇರ್ಪಡೆಯಾಗಲಿರುವ ೩ ತಂಡಗಳು.
ಈ ಮೊಡಲು WTCನಲ್ಲಿ ೧೨ ತಂಡಗಳನ್ನು (ಮುಂಬಡ್ತಿ) ಮತ್ತು ಡಿಮೋಷನ್ (ಹಿಂಬಡ್ತಿ) ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಈಗ ಆ ಯೋಜನೆಯನ್ನೇ ಕೈಬಿಡಲಾಗಿದೆ. ಬದಲಾಗಿ WTCಯಲ್ಲಿ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಲಾಗುತ್ತಿದೆ. ಮುಂದಿನ ಆವೃತ್ತಿಯಿಂದ ಅಂದರೆ ೨೦೨೭ ರಿಂದ ೨೦೨೯ ರ ಆವೃತ್ತಿಯಲ್ಲಿ ಇದು ಜಾರಿಗೆ ಬರಲಿದೆ. ಹೀಗಾಗಿ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ೯ಕ್ಕೆ ಬದಲಾಗಿ ೧೨ ತಂಡಗಳಿರಲಿವೆ. ಗೆದ್ದ ತಂಡಕ್ಕೆ ಬಹುಮಾನವಾಗಿ ಭಾರೀ ಮೊತ್ತವನ್ನೇ ಜೇಬಿಗಿಳಿಸಲಿದೆ. ಆದರೆ ಮುಂದಿನ ಆವೃತ್ತಿಗೆ ಎಷ್ಚು ಎಂದು ನಿಗದಿಯಾಗಿಲ್ಲ.
ಟೆಸ್ಟ್ ಮಾನ್ಯತೆಯಿರುವ ಎಲ್ಲ ತಂಡಗಳೂ ಕಣದಲ್ಲಿ: ಒಟ್ಟು ಟೆಸ್ಟ್ ಮಾನ್ಯತೆಯಿರುವ ತಂಡಗಳ ಸಂಖ್ಯೆ ೧೨ ಇದ್ದರೂ ಈವರೆಗಿನ WTCಯ ಮೊದಲ ನಾಲ್ಕು ಆವೃತ್ತಿಗಳಲ್ಲಿ ಕೇವಲ
ಒಂಬತ್ತು ತಂಡಗಳು ಮಾತ್ರ ಭಾಗವಹಿಸಿದ್ದವು. ಅವುಗಳೆಂದರೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್. ಐಸಿಸಿ ರ್ಯಾಕಿಂಗ್ ನಲ್ಲಿ ಕೊನೆಯ ೩ ಸ್ಥಾನಗಳಲ್ಲಿರುವ ತಂಡಗಳನ್ನು ಸ್ಪರ್ಧೆಯಲ್ಲಿ ಸೇರಿಸಿಕೊಳ್ಳಲಾಗುತ್ತಿರಲಿಲ್ಲ. ಇದೀಗ ೧೨ ತಂಡಗಳಿಗೆ ಅವಕಾಶ ಕಲ್ಪಿಸುತ್ತಿರುವುದರಿಂದ ಎಲ್ಲಾ ಟೆಸ್ಟ್ ಮಾನ್ಯತೆ ಇರುವ ದೇಶಗಳೂ ಭಾಗವಹಿಸಿದಂತಾಗಲಿದೆ.
ಈ ಹೊಸ ಬದಲಾವಣೆಗಳ ಬಗ್ಗೆ ನ್ಯೂಜಿಲೆಂಡ್ನ ಮಾಜಿ ಆಟಗಾರ ರೋಜರ್ ಟೋಸ್ ನೇತೃತ್ವದ ಕಾರ್ಯಕಾರಿ ಸಮಿತಿಯು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)
ಬೋರ್ಡ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಮಂಡಳಿಗೆ ದುಬೈನಲ್ಲಿ ನಡೆದ ಸಭೆಯಲ್ಲಿ ಶಿಫಾರಸು ಮಾಡಿದೆ. WTC ಆವೃತ್ತಿಯಲ್ಲಿ ಪ್ರತಿಯೊಂದು ತಂಡವೂ ಕನಿಷ್ಠ ಇಷ್ಟು ಟೆಸ್ಟ್
ಪಂದ್ಯಗಳನ್ನು ಆಡಲೇಬೇಕು ಎಂಬ ನಿಯಮವೂ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ. ಕಳೆದಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಹೆಚ್ಚು ಪಂದ್ಯಗಳನ್ನು ಆಡಿರದಿದ್ದರೂ ಅಂಕಗಳ ಆಧಾರದಲ್ಲಿ ಫೈನಲ್ ಪ್ರವೇಶಿಸಿತ್ತು.
WTCಯಲ್ಲಿ ಎರಡು-ಶ್ರೇಣಿಯ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆದಿತ್ತು. ಇದರಿಂದ ಉತ್ತಮ ತಂಡಗಳ ನಡುವೆ ಹೆಚ್ಚು ಸ್ಪರ್ಧಾತ್ಮಕ ಪಂದ್ಯಗಳು ನಡೆಯುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜುಲೈನಲ್ಲಿ ನಡೆದ ICCವಾರ್ಷಿಕ ಸಮ್ಮೇಳನದಲ್ಲಿ ಈ ಕಲ್ಪನೆಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ನಂತಹ ದೇಶಗಳು ಈ ವ್ಯವಸ್ಥೆಯನ್ನು ವಿರೋಧಿಸಿದ್ದವು. ಏಕೆಂದರೆ ಇದರಿಂದ ಅವರು ದೊಡ್ಡ ತಂಡಗಳೊಂದಿಗೆ ಆಡುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ
ಎಂಬುದೇ ಇದಕ್ಕೆ ಕಾರಣವಾಗಿತ್ತು.



