ಬೆಂಗಳೂರು: ಪರಂಪರಾ ಕಲ್ಚರಲ್ ಫೌಂಡೇಶನ್ (ರಿ)ಎರಡನೇ ಹಂತ, ಬಿಟಿಎಂ ಬಡಾವಣೆ, ಬೆಂಗಳೂರು ವತಿಯಿಂದ ಇದೇ ಶುಭ ಶುಕ್ರವಾರ ಮಾರ್ಚ್ 29 ರಂದು ಸಂಜೆ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ , ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಪರಂಪರಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪರಂಪರಾ ಪುರಸ್ಕಾರ, ನೃತ್ಯ ವೈವಿಧ್ಯ, ನಗೆನಾಟಕ ಹಾಗೂ ಗಾಜಿನ ಕಲಾ ಪ್ರದರ್ಶನ ಏರ್ಪಡಿಸಲಾಗಿದೆರಂಗಪೋಷಕ, ಸಮಾಜ ಸೇವಕ ಹಾಗೂ ಜನಪದರು ಸಾಂಸೃತಿಕ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಫ( ಪಾಪಣ್ಣ) ಹಾಗೂ ರಂಗಸಜ್ಜಕೆ ಕಲಾವಿದ, ಕಲಾ ಪೋಷಕ ಎಸ್. ಆರ್. ಚಿದಾನಂದ ಅವರಿಗೆ ಪರಂಪರಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಗುವುದು.
ಪರಂಪರಾ ಪುರಸ್ಕಾರ ಪ್ರದಾನ ಸಮಾರಂಭಕ್ಕೆ ಹೆಚ್.ಎ.ಎಲ್ ನ ಅಪರ ಮಹಾ ವ್ಯವಸ್ಥಾಪಕರಾದ ಟಿ.ಹೆಚ್. ರಘುರಾಜ್ ಚಾಲನೆ ನೀಡುವರು, ನಾಟಕಕಾರ,ನಿರ್ದೇಶಕರಾದ ಎಂ.ಬೈರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸುವರು . ಹೆಚ್.ಎ.ಎಲ್ ನೌಕರರ ಸಂಘದ ಅಧ್ಯಕ್ಷ ಮಹೇಶ್ ಅಂಗಡಿ ಮತ್ತು ಎ.ಇ.ಸಿ.ಸಿ.ಎಸ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಟಿ.ಮಹೇಶ್ ಕುಮಾರ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಪರಂಪರಾ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಜಿ ಪಿ ರಾಮಣ್ಣ ಉಪಸ್ಥಿತರಿರುವರು.
ಕಾರ್ಯಕ್ರಮದ ಅರಂಭಕ್ಕೆ ವಿದುಷಿ ವಸುಂಧರಾ ದೇವರಾಜ್ ಸಾರಥ್ಯದ ರಾಜರಾಜೇಶ್ವರಿ ನಾಟ್ಯಶಾಲೆಯ ವಿಧ್ಯಾರ್ಥಿಗಳಿಂದ ನೃತ್ಯವೈಭವ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದ ನಂತರ ವಿ.ಸಿ.ಮಧು ರವರ ನಿರ್ಮಾಣದ ಹೆಚ್.ಎ.ಎಲ್ ನ ಎಂ.ಮುನಿರಾಜು ರವರ ನಿರ್ದೇಶನದಲ್ಲಿ ಇರು ದಾಸಯ್ಯ ಬರ್ಲಿ ಎನ್ನುವ ನಗೆ ನಾಟಕದ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಎಸ್.ಸುಧಾಕರ್ ಪ್ರಸ್ತುತಪಡಿಸುವರು, ಎಂ.ಶಶಿಧರ ಹೆಬ್ಸೂರ್, ಜಿ.ಮಧುಸೂದನ ನಾಯಕ, ಏಣಗಿ ಪ್ರಭಾಕರ್,ಟಿ.ಆರ್ . ರಮೇಶ್, ಯು.ಬಿ. ಗಿರೀಶ್ ಮತ್ತು ಪಿ.ಎಲ್ . ರಮೇಶ್ ಕಾರ್ಯಕ್ರಮ ನಿರ್ವಹಿಸುವರು.
ಇದೇ ಸಂದರ್ಭದಲ್ಲಿ ಗಾಜಿನ ಕಲೆಯಲ್ಲಿ ನಿಪುಣರಾದ ಹನುಮಂತಪ್ಪ ಕಮ್ಮಾರ್ ಗಾಜಿನ ಕಲೆಯ ಪ್ರದರ್ಶನ ನೀಡುವರು ಎಂದು ಪರಂಪರಾ ಅಧ್ಯಕ್ಷ ಜಿ ಪಿ ರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.