ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ಸಂಸ್ಥೆಯವರು ತಾಲ್ಲೂಕಿನ ತಿರ್ನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗೆ ವರ್ಲಿ ಚಿತ್ರ ಬಿಡಿಸಲಾಯಿತು. ಹಸಿರು ಸ್ವಯಂ ಸೇವಾ ಸಂಸ್ಥೆ ವತಿಯಿಂದ 11ನೇ ಶಾಲೆ ಇದಾಗಿದೆ.
ಇದೇ ವೇಳೆ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರುಣ ಕುಮಾರಿ ಅವರು ಮಾತನಾಡಿ, ನಿಜಕ್ಕೂ ಇಂಥ ಒಂದು ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ಸಂತೋಷದ ವಿಷಯವಾಗಿದೆ.
ಈ ಹಸಿರು ತಂಡದವರು ಸಾಮಾಜಿಕ ಕಳಕಳಿ ಹೊಂದಿ, ಸಮಾಜಕ್ಕೆ ಇವರ ಕೊಡುಗೆ ಅಪಾರ, ನಾನು ನನ್ನ ಕುಟುಂಬ ಎನ್ನುವ ಈ ಕಾಲದಲ್ಲಿ, ಇವರ ಸೇವೆ ಶ್ಲಾಘನೀಯ ಎಂದರು. ಇನ್ನಷ್ಟು ಸೇವೆ ಸರಕಾರಿ ಶಾಲೆಗಳಿಗೆ ಇವರಿಂದ ಸಿಗಲಿ ಎಂದು ಶುಭ ಹಾರೈಸಿದರು.
ಸಿ.ಆರ್.ಪಿ ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಶಾಲೆ ಉಳಿಸಿ ಬೆಳೆಸಿ ಕಾರ್ಯಕ್ರಮ ಅಡಿಯಲ್ಲಿ ಇಂದು ಮತ್ತು ನಿನ್ನೆ ಎರಡು ದಿನಗಳ ಕಾಲ ಹಸಿರು ಸ್ವಯಂ ಸೇವಾ ಸಂಸ್ಥೆಯವರು ಶಾಲೆಯ ಕಂಪೌಂಡನ್ನು ಸ್ವಚ್ಛಗೊಳಿಸಿ ಸರ್ಕಾರಿ ಶಾಲೆಗೆ ಮತ್ತಷ್ಟು ಅಂದವನ್ನು ಹೆಚ್ಚಿಸಿದ್ದಾರೆ ಎಂದು ವರ್ಣಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಮಂಜುಳ, ವಕೀಲರಾದ ಸೌಜನ್ಯ ಗಾಂಧಿ, ಶಿಕ್ಷಕ ಮಹಾಂತೇಶ, ಅಧ್ಯಕ್ಷ ಮಧು, ರಂಜಿತ್, ಕಿಶೋರ್ ಕುಮಾರ್, ಶಮಂತ್, ಹೇಮಂತ್ , ಭಾನುಶ್ರೀ, ಕುಮಾರ್, ಹರ್ಷ, ವಿಕಾಸ್, ಆಕಾಶ್, ಅಶೋಕ್, ಎಸ್ಡಿಎಂಸಿ ರವರು, ಊರಿನ ಪ್ರಮುಖರು, ಆಶಾ ಕಾರ್ಯಕರ್ತಿರು, ಇನ್ನು ಇತರರು ಕಾರ್ಯಕ್ರಮದಲ್ಲಿ ಇದ್ದರು.