ಇದೇ ಫೆಬ್ರವರಿ 23 ರಿಂದ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗುತ್ತಿದ್ದು, ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಐದು ತಂಡಗಳು ತಮ್ಮ ತವರು ಕ್ರೀಡಾಂಗಣಗಳಲ್ಲಿ ಅಭ್ಯಾಸ ಆರಂಭಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಫೋಟೋಶೂಟ್ ಮಾಡಿಸಿದ್ದು, ತನ್ನ ಸೋಶಿಯಲ್ ಮೀಡಿಯಾ ಘಿ ಖಾತೆಯಲ್ಲಿ ಹಂಚಿಕೊಂಡಿದೆ.
ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನಾ, ಕನ್ನಡತಿ ಶ್ರೇಯಾಂಕ ಪಾಟೀಲ್, ಸ್ಫೋಟಕ ಆಟಗಾರ್ತಿ ಸೋಫಿ ಡಿವೈನ್ ಸೇರಿದಂತೆ ಅನೇಕರುಫೋಟೋ ಶೂಟ್ನಲ್ಲಿ ಮಿಂಚಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಆರ್ಸಿಬಿ ಅಭಿಮಾನಿಗಳು ಜಾಲತಾಣದಲ್ಲಿ `ಈ ಸಲ ಕಪ್ ನಮ್ದೆ’ ಟ್ರೆಂಡ್ ಶುರು ಮಾಡಿದ್ದಾರೆ.