ಕನಕಪುರ:ರಾಮನಗರ ಜಿಲ್ಲಾ ಕುಸ್ತಿ ಸಂಘ (ರಿ) ದಲ್ಲಿ ತರಬೇತಿ ಪಡೆಯುತ್ತಿರುವ ನಮ್ಮ ತಾಲ್ಲೂಕಿನ ಮಕ್ಕಳು ಗಣನೀಯ ಸಾಧನೆ ಮಾಡುವ ಮೂಲಕ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಮೊದಲ, ದ್ವಿತೀಯ, ತೃತೀಯ ಸ್ಥಾನಗಳನ್ನು ಗಳಿಸಿ ತಾಲ್ಲೂಕಿಗೆ ಹಾಗೂ ನಮ್ಮ ಸಂಘಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ಸಂಘದ ಅಧ್ಯಕ್ಷ ತಾಮಸಂದ್ರ ಪ್ರಕಾಶ್ ತಿಳಿಸಿದರು.
ನಗರದ ಮಳಗಾಳು ಬಡಾವಣೆಯಲ್ಲಿರುವ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ,
ಅವರು ನಮ್ಮ ದೇಶದ ಪ್ರಾಚೀನ ಹಾಗೂ ಪಾರಂಪರಿಕ ಕುಸ್ತಿಯ ಮಹತ್ವ ವನ್ನು ಇಂದಿನ ಯುವಜನತೆಗೆ ತಿಳಿಸುವ ಮೂಲಕ ಅದನ್ನು ಉಳಿಸಿ- ಬೆಳಸುವ ಸದ್ದುದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಸಂಘ ವನ್ನು ಆರಂಭಿಸಿ ಮಕ್ಕಳಿಗೆ ವೈವಿಧ್ಯಮಯ ಕುಸ್ತಿ ವರಸೆಗಳನ್ನ ಕಲಿಸುತ್ತಾ ಬರಲಾಗುತ್ತಿದ್ದು ನಮ್ಮಲ್ಲಿ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಪ್ರೌಢಶಾಲಾ ಹಾಗೂ ಪದವಿ ಪೂರ್ವ ವಿಭಾಗದಲ್ಲಿ ಸುಮಾರು ಹತ್ತು ಮಕ್ಕಳು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಒಟ್ಟು ಒಂಬತ್ತು (9) ಚಿನ್ನ, ಆರು (6) ಬೆಳ್ಳಿ, ಏಳು (7) ಕಂಚಿನ ಪದಕಗಳನ್ನು ಗೆಲುವ ಮೂಲಕ ನಮ್ಮ ಸಂಘದ ಹಾಗೂ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯದ ಮಕ್ಕಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಇಂತಹ ಅದ್ಭುತ ಸಾಧನೆ ಮಾಡಿರುವ ಮಕ್ಕಳು ರಾಜ್ಯ ಮಟ್ಟದಿಂದ ರಾಷ್ಟ್ರೀಯ, ಅಂತ ರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾಗಿ ಅಲ್ಲಿಯೂ ಸಹ ನಮ್ಮ ತಾಲ್ಲೂಕು, ಜಿಲ್ಲೆ, ರಾಜ್ಯದ ಕೀರ್ತಿಯನ್ನು ಬೆಳಗಲಿ ಎಂದು ಹಾರೈಸಿದರು.ಸಂಘದ ಪದಾಧಿಕಾರಿ ಪೈಲ್ವಾನ್ ವೇಣು ಮಾತನಾಡಿ ನಮ್ಮ ದೇಶೀಯ ಆಟವಾದ ಕುಸ್ತಿ ಇಂದು ಕಣ್ಮರೆಯಾಗುತ್ತಿರುವುದು ಬೇಸರ ತರಿಸಿದ್ದು ನಮ್ಮದೇಶೀ ಕ್ರೀಡೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಮ್ಮ ಸಂಘದ ಅಧ್ಯಕ್ಷರು ತಮ್ಮ ಸ್ವಂತ ಹಣದಲ್ಲಿಮಕ್ಕಳಿಗೆ ಬೇಕಾದ ಪೌಷ್ಟಿಕ ಆಹಾರ ಹಾಗೂ ಕ್ರೀಡಾ
ವೆಚ್ಚವನ್ನು ಭರಿಸುತ್ತಾ ಬರಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಪ್ರೋತ್ಸಾಹಿಸುತ್ತಿ ರುವುದು ಹೆಮ್ಮೆಯ ವಿಷಯವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರೀಡೆಗೆ ಹೆಚ್ಚಿನ ನೆರವು ನೀಡಿದರೆ ಇಂದಿನ ಯುವಜನತೆಗೆ ಬೇಕಾದಂತಹ ಆರೋಗ್ಯ ವಂತ ದೇಹವನ್ನು ಕಾಪಾಡಿಕೊಳ್ಳಬಹುದಾಗಿದೆ, ವಿಶೇಷವಾಗಿ ಹೆಣ್ಣು ಮಕ್ಕಳು ಕತ್ತಿ ವರಸೆ, ಜೋಡೋ ಸೇರಿದಂತೆ ಕುಸ್ತಿ ಪಟ್ಟುಗಳನ್ನು ಕಲಿಯುವುದರಿಂದ ಅವರ ಸ್ವಯಂ ರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪದಕ ವಿಜೇತರು: ಫ್ರೌಢ ಶಾಲಾ ವಿಭಾಗದ ಕುಸ್ತಿ ಪಂದ್ಯಾವಳಿ ಯಲ್ಲಿ ವಿದ್ಯಾರ್ಥಿನಿ ಸುಜಾತಾ ದ್ವಿತೀಯ,ಅಂಬಿಕಾ ತೃತೀಯ ಸ್ಥಾನ ಪದವಿಪೂರ್ವ ವಿಭಾಗದಲ್ಲಿ ನಮ್ಮ ಸಂಘದ ಐದು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅದರಲ್ಲಿ ರೇವತಿ ಎಂಬ ವಿದ್ಯಾರ್ಥಿನಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಬೆಲ್ಟ್ ಕುಸ್ತಿ ವಿಭಾಗದಲ್ಲಿ ಸಹರಾ ಮತ್ತು ವಿದ್ಯಾಶ್ರೀ ಎಂಬ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತೃತೀಯ ಸ್ಥಾನ ಪಡೆದಿದ್ದಾರೆ, ಜೋಡೋ ಕ್ರೀಡೆಯುಲ್ಲಿ ಒಟ್ಟು ನಾಲ್ಕು ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದಿದ್ದಾರೆ.
ಇದೇ ಮೊಟ್ಟ ಮೊದಲ ಬಾರಿಗೆ ರಾಮನಗರ ಜಿಲ್ಲೆಯಿಂದ ದಸರಾ ಕ್ರೀಡಾಕೂಟದ ಸಿ.ಎಂ ಕಪ್ ನ 62 ಕೆಜಿ ವಿಭಾಗದಲ್ಲಿ ಕಾವ್ಯಬಾಯಿ ಎಂಬ ವಿದ್ಯಾರ್ಥಿನಿಯು ಮೊದಲ ಸ್ಥಾನ ಹಾಗೂ ಶ್ರೀರಕ್ಷಾ ಕೆ.ಆರ್.ತೃತೀಯ ಸ್ಥಾನ ಪಡೆದಿದ್ದಾರೆ.
ಸಂಘದ ಪದಾಧಿಕಾರಿಗಳಾದ ಪೈಲ್ವಾನ್ ದ್ಯಾಪನೇಗೌಡನ ದೊಡ್ಡಿ ದೇವರಾಜು, ರವಿ, ಸ್ವರೂಪ್ ಗೌಡ, ದಿಲೀಪ್, ನಾಗಣ್ಣ ಕೋಟೆ ದೇವರಾಜು, ಪ್ರಕಾಶ್ ಸೇರಿದಂತೆ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು.