ರೆಸ್ಲಿಂಗ್ ನಲ್ಲಿ ಬಹುದೊಡ್ಡ ಹೆಸರು ಜಾನ್ ಸೆನಾ. ೧೭ ಬಾರಿಯ ವಿಶ್ವ ಚಾಂಪಿಯನ್, ಡಿಸೆಂಬರ್ ೧೩ ರಂದು ನಡೆಯಲಿರುವ `ಸ್ಯಾಟರ್ಡೇ ನೈಟ್ಸ್ ಮೈನ್ ಈವೆಂಟ್’ (Saturday Night’s Main Event) ನಲ್ಲಿ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ತಮ್ಮ ನಿವೃತ್ತಿ ಪಂದ್ಯದಲ್ಲಿ, ಅವರು `ಲಾಸ್ಟ್ ಟೈಂ ಇಸ್ ನೌ’ ( Last Time Is Now) ಟೂರ್ನಿಯ
ವಿಜೇತರನ್ನು ಎದುರಿಸಲಿದ್ದಾರೆ. ನಿವೃತ್ತಿಯ ಪಂದ್ಯಕ್ಕೂ ಮುನ್ನ ಅವರು ಭಾರತದ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳುಹಿಸಿದ್ದು, ೨೩ ವರ್ಷಗಳಿಂದ ನೀಡುತ್ತಿರುವ ಬೆಂಬಲಕ್ಕೆ
“ಕೃತಜ್ಞತೆ” ಸಲ್ಲಿಸಿದ್ದಾರೆ.
೨೦೦೨ ರಲ್ಲಿ ವರ್ಲ್್ಡ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ ( WWಇ) ಕಣಕ್ಕೆ ಗೆ ಪದಾರ್ಪಣೆ ಮಾಡಿದ್ದ ಅಮೆರಿಕದಾ ಜಾನ್ ಸೆನಾ ಅವರು ತಮ್ಮ ಭಾರತದ ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ವೀಡಿಯೊ ಸಂದೇಶದಲ್ಲಿ, “ಸುಮಾರು ಕಾಲು ಶತಮಾನಗಳ ಕಾಲ ಭಾರತದ ಎಲ್ಲಾ WWE ಅಭಿಮಾನಿಗಳು ನನಗೆ ಅದ್ಭುತ ಬೆಂಬಲ ನೀಡಿದ್ದಾರೆ, ನೀವಿಲ್ಲದೆ ನಾನು ಇಲ್ಲಿರಲು ಸಾಧ್ಯವಿಲ್ಲ.ಈ ಅಧ್ಯಾಯದ ಬಾಗಿಲನ್ನು ಮುಚ್ಚುವಾಗ ನೀವು ನನ್ನ ಜೊತೆಗಿದ್ದಿದ್ದಕ್ಕೆ ಬಹಳ ಕೃತಜ್ಞನಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಧನ್ಯವಾದಗಳು.” ಎಂದಿದ್ದಾರೆ.ಈ ಹಿಂದೆ ೨೦೧೪ರಲ್ಲಿ “ಭಾರತದ ನನ್ನ ಎಲ್ಲಾ WWE ಅಭಿಮಾನಿಗಳೇ. ಜಾನ್ ಸೆನಾ ಇಲ್ಲಿ, ನಿಮ್ಮ ೨೩ ವರ್ಷಗಳ ಬೆಂಬಲಕ್ಕೆ ನಾನೆಷ್ಟು ಕೃತಜ್ಞನಾಗಿದ್ದೇನೆ ಎಂಬ ವಿಚಾರವನ್ನು ಹಂಚಿಕೊಳ್ಳಲು ಒಂದು ಕ್ಷಣ ತೆಗೆದುಕೊಳ್ಳುತ್ತಿದ್ದೇನೆ. ಏಕೆಂದರೆ’the last time is now’ ನಾನು ಇನ್ನು ಕಾಣಿಸಿಕೊಳ್ಳುವುದಿಲ್ಲ.
ಇದು ನನ್ನ ವಿದಾಯದ ಪಂದ್ಯವಾಗಿದೆ. ನಿಮ್ಮ ಬೆಂಬಲವಿಲ್ಲದೆ ನಾನು ಬಲಶಾಲಿಯಾಗಿಲ್ಲ ಎಂದು ಈ ಕ್ಷಣ ನಾನು ಹೇಳುತ್ತಿದ್ದೇನೆ” ಎಂದು WWE ಇಂಡಿಯಾ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಜಾನ್ ಸೆನಾ ತಿಳಿಸಿದ್ದಾರೆ.೩ ಬಾರಿ ಭಾರತಕ್ಕೆ ಬಂದಿದ್ದ ಜಾನ್ ಸೆನಾ ಜಾನ್ ಸೆನಾ WWE ಯ ಅತ್ಯಂತ ಜನಪ್ರಿಯ ಸೂಪರ್ಸ್ಟಾರ್ಗಳಲ್ಲಿ ಒಬ್ಬರು. ಭಾರತದಲ್ಲಿ
ಅವರಿಹೆ ಬಹಳ ದೊಡ್ಡ ಅಭಿಮಾನಿ ಬಳಗವಿದೆ. ೨೦೦೬ ರಲ್ಲಿ ಅವರು ಮೊದಲ ಬಾರಿಗೆ ಭಾರತಕ್ಕೆಭೇಟಿ ನೀಡಿದ್ದಾಗ ಅವರನ್ನು ಭಾರಿ ಜನಸ್ತೋಮ ಸ್ವಾಗತಿಸಿತ್ತು. ಮತ್ತೆ ೨೦೧೪ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು.
ಈ ವೇಳೆ ವಿಜಯ ಕರ್ನಾಟಕ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಅರಿಯದೆ ಕುಸ್ತಿಯ ಅನುಕರಣೆ ಬೇಡ ಎಂದು ಕಿವಿಮಾತು ಹೇಳಿದ್ದರು. ೨೦೨೩ ರ ಸೆಪ್ಟೆಂಬರ್ನಲ್ಲಿ ನಡೆದ ಲೈವ್ ಈವೆಂಟ್ನ ಮುಖ್ಯ ಪಂದ್ಯದಲ್ಲಿ, ಸೆನಾ ಸೆಥ್ ರೊಲಿನ್ಸ್ ಅವರೊಂದಿಗೆ ತಂಡವಾಗಿ ಭಾರತದಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲು ಮರಳಿದ್ದರು. ನಂತರ, ೨೦೨೪ ರ ಜುಲೈನಲ್ಲಿ, ಅವರು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮತ್ತೊಮ್ಮೆ ಭಾರತಕ್ಕೆ ಆಗಮಿಸಿದ್ದರು. ೨೦೨೩ ರಿಂದ WWE ಭಾರತದಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿಲ್ಲ.



