ದೇವನಹಳ್ಳಿ: ಗ್ರಾಮಸ್ಥರ ಅನುಕೂಲಕ್ಕಾಗಿ ಮೀಸಲಿ ಟ್ಟಿದ್ದ ಸರ್ಕಾರಿ ಸ್ವತ್ತು ಸುಮಾರು 4.15 ಕೋಟಿ ರೂ ಬೆಲೆ ಬಾಳುವ ಗ್ರಾಮಠಾಣಾ ಸ್ವತ್ತು ಆಗಿರುವ ತಿಪ್ಪೆಹಳ್ಳ ಜಾಗವನ್ನು ಕಾರಹಳ್ಳಿ ಪಂಚಾಯಿತಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಖಾತೆ ಮಾಡಿಕೊ ಟ್ಟಿದ್ದನ್ನು ಖಂಡಿಸಿ ಮೂಡಗಾನಹಳ್ಳಿ ಗ್ರಾಮಸ್ಥ ಮಂಜುನಾಥ್ ಅವರು ಪಂಚಾಯಿತಿ ಅದಿಕಾರಿಗಳ ವಿರುದ್ದ ಆರೋಪಿಸಿದರು.
ತಾಲ್ಲೂಕಿನ ಕಾರಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಮೂಡಗಾನಹಳ್ಳಿ ಗ್ರಾಮಠಾಣಾ ಸ್ವತ್ತು ಆಗಿರುವ ಸುಮಾರು 150*218 ಅಡಿ ಜಾಗವನ್ನು ಭ್ರಷ್ಟ ಜನಪ್ರತಿನಿಧಿಗಳ ಜತೆ ಅದಿಕಾರಿಗಳು ಶಾಮಿಲಾಗಿ ಅಕ್ರಮ ಈ ಸ್ವತ್ತು ಮಾಡಿಕೊಟ್ಟಿದ್ದರೆಂದು ಆರೋಪಿಸಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕೆರೆ, ಕುಂಟೆ, ರಾಜಕಾಲುವೆ, ಸರ್ಕಾರಿ ಗುಂಡು ತೋಪು, ಓಣ , ಕಾಲುದಾರಿ, ಬಂಡಿದಾರಿ, ದೇವಸ್ಥಾನಗಳ ಮಾನ್ಯವು ಸ್ವತ್ತುಗಳನ್ನು ಒಳಗೊಂಡಂತೆ ಸರ್ಕಾರಿ ಸ್ವತ್ತುಗಳಿಗೆ ಅಕ್ರಮದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರ ಲಂಚ ದಾಸೆಗೆ ಸರ್ಕಾರಿ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾಡಿಕೊಡುವ ಸ್ಥಿತಿ ನಿರ್ಮಾಣವಾಗಿದೆ.
ಮೂಡಗಾನಹಳ್ಳಿ ಗ್ರಾಮದಲ್ಲಿ 450 ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಿದ್ದಾರೆ. ನಮ್ಮ ಪೂರ್ವಜ್ಜರ ಹೇಳುವ ಪ್ರಕಾರ ಸುಮಾರು 65 ವರ್ಷಗಳ ಹಿಂದಿನಿಂದಲು ತಿಪ್ಪೆಹಳ್ಳವಾಗಿತ್ತು. ಅಕ್ರಮವಾಗಿ ಕಬಳಿಸುವ ಮುನ್ಸೂಚೆಯಿಂದ ಪಂಚಾಯಿತಿಯಲ್ಲಿ ತಿಪ್ಪೆಹಳ್ಳಿದ ಜಾಗದ ಖಾತೆ ಕೂಡ ದಾಖಲಾಗಿರುತ್ತದೆ. ಈ ಸ್ವತ್ತಿನಲ್ಲಿ ಪ್ರಸ್ತುತ ನೀರಿನ ಟ್ಯಾಂಕ್, ದೇವಸ್ಥಾನವಿದೆ ಅದನ್ನು ಕಬಳಿಸಿ ಅಕ್ರಮ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ, ಮಳೆ ನೀರು ತಿಪ್ಪೆಹಳ್ಳಿದಲ್ಲಿ ಸಂಗ್ರಹ ವಾಗುತಿತ್ತು. ಜಾನುವಾರುಗಳಿಗೆ ನೀರು ಕುಡಿಸಲು ಗ್ರಾಮಸ್ಥರಿಗೆ ಅನುಕೂಲ ವಾಗುತಿತ್ತು.
ಅದನ್ನು ಸಂಪೂರ್ಣ ಮಣ್ಣು ತುಂಬಿ ಸಮದಟ್ಟು ಮಾಡಿದ್ದಾರೆ. ಚರಂಡಿಗಳು ಕಿತ್ತು ಹಾಕಿ ಕೊಳಚೆ ನೀರು ಹರಿಯದೇ ಜನವಸತಿ ಪ್ರದೇಶದಲ್ಲಿ ಸಂಜೆ ಕಳೆಯುತಿದ್ದಂತೆ ಸುಳ್ಳೆಕಾಟ ಹೇಳತೀರದಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಇಲ್ಲಿನ ಗ್ರಾಮಸ್ಥರು ಎದುರಿಸುವಂತಾಗಿದೆ. ನಮ್ಮಲ್ಲಿ ಬಡವರೆ ಹೆಚ್ಚಾಗಿ ವಾಸ ಮಾಡುತ್ತಿದ್ದು, ಮನೆ ಇಲ್ಲದವರನ್ನು ಗುರ್ತಿಸಿ 20*30 ರಂತೆ ಖಾಲಿ ನಿವೇಶ ಕಾಯ್ದಿರಿ, ಇಲ್ಲವೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ಆಟದ ಮೈಧಾನ ಮೀಸಲಿಡಿ ಅದು ಆಗದಿದ್ದಲ್ಲಿ ಗ್ರಾಮಸ್ಥರ ಇನ್ನಿತರ ಚುಟವಟಿಕೆಗಳಿಗೆ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಸಮುದಾಯ ಭವನ ಮೀಸಲಿಡಬೇಕು.
ಅಕ್ರಮ ಖಾತೆ ಮಾಡಿದವರ ಮೇಲೆ ತನಿಕೆಯಾಗಬೇಕು. ನಂದಿ ಬೆಟ್ಟಕ್ಕೆ ಹಾದು ಹೋಗುವ ಪ್ರಮುಖ ರಸ್ತೆ ಪಕ್ಕದಲ್ಲಿ ಹಾದು ಹೋಗುವ ಸ್ವತ್ತಾಗಿದೆ. ಸರ್ಕಾರಿ ಆಸ್ತಿ ರಕ್ಷಣೆಗಾಗಿ ಕಳೆದ 2 ವರ್ಷಗಳಿಂದ ಸಂಬಂಧಪಟ್ಟ ಅದಿಕಾರಿಗಳಿಗೆ ಅರ್ಜಿ ಸಲ್ಲಿಸಿದರು ಆರಿಕೆ ಉತ್ತರ ನೀಡಿ ಅದಿಕಾರಿಗಳು ಜಾರಿಕೊಳ್ಳುತಿದ್ದಾರೆ. ಅಕ್ರಮ ಖಾತೆ ವಜಾಗೊಳಿಸ ದಿದ್ದರೆ ಮೂಡಗಾನಹಳ್ಳಿ ನೂರಾರು ಗ್ರಾಮಸ್ಥರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಛೇರಿ ಹಾಗೂ ವಿಧಾನಸೌಧ ಮುಂಬಾಗದಲ್ಲಿ ಅನಿರ್ದಿಷ್ಟವದಿ ಹೋರಾಟ ನಡೆಸಲು ಸಜ್ಜುಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮೂಡಗಾನಹಳ್ಳಿ ಗ್ರಾಮಸ್ಥರಾದ ವಿ.ಮಂಜುನಾಥ್, ಪ್ರಸನ್ನಕುಮಾರ್, ಚಂದ್ರಶೇಖರ್, ಸಂಜಯ್ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.