ಮೈಸೂರು: ಇಂದು ಬೆಳ್ಳಂಬೆಳಗ್ಗೆಯೇ ಅವರು ನಗರದ ಕುಕ್ಕರಹಳ್ಳಿ ಕೆರೆ ಪ್ರದೇಶದದಲ್ಲಿ ಮತಬೇಟೆಗೆ ಇಳಿದಿದ್ದಾರೆ.ಈ ವೇಳೆ ಮಾಧ್ಯಮ ಪ್ರತಿನಿಧಿ ಯೊಬ್ಬರೊಂದಿಗೆ ಮಾತನಾಡಿರುವ ಅವರು, ಜನರಿಂದ ತಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳುವ ಯದುವೀರ್ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಅಭಿವೃದ್ಧಿಗೆ ನೀಲಿನಕ್ಷೆ ಕೂಡ ತಯಾರು ಮಾಡಿಕೊಂಡಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಬಹುಸಂಖ್ಯಾತ ಜನ ಬೇಸಾಯವನ್ನು ಅವಲಂಬಿಸಿರುವುದರಿಂದ ರೈತರ ಯೋಗಕ್ಷೇಮದ ಕಡೆ ಹೆಚ್ಚು ಒತ್ತು ಕೊಡಬೇಕಿದೆ ಎಂದು ಅವರು ಹೇಳುತ್ತಾರೆ. ಹಾಗೆಯೇ, ಎರಡೂ ಜಿಲ್ಲೆಗಳಲ್ಲಿ ಪ್ರವಾಸೋದ್ಯಮನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಅವರಿಗಿದೆ.ಯದುವೀರ್ ತಾನೊಬ್ಬ ಜನಸಾಮಾನ್ಯ ಅಂತ ಕ್ಷೇತ್ರದಲ್ಲಿ ಓಡಾಡುತ್ತಿದ್ದರೂ ಜನ ತನ್ನನ್ನು ಮಹಾರಾಜಾ ಎಂದುಪರಿಗಣಿಸುತ್ತಿರುವುದು ಹಿಂದಿನ ಒಡೆಯರ್ ಅರಸರು ಮಾಡಿದ ಉತ್ತಮ ಕೆಲಸಗಳ ಫಲ ಎಂದು ಅವರು ಹೇಳುತ್ತಾರೆ.