ಮೈಸೂರು: ಬಿಜೆಪಿಯ ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ವಿಜಯ ಸಂಕಲ್ಪ ಸಮಾವೇಶ ನಡೆದ ಜಾಗದಲ್ಲಿ ಕಸ ತೆಗೆದಿದ್ದಾರೆ.
ಭಾನುವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ನ ಸುಮಾರು 60 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಯದುವೀರ್ ಒಡೆಯರ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪ್ರಚಾರ ನಡೆಸಿದ್ದರು.
ಇಂದು ಬೆಳಗ್ಗೆ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಯದುವೀರ್ ಹಾಗೂ ಪತ್ನಿ ತ್ರಿಷಿಕಾ ಅವರು ಮಾಸ್ಕ್ ಧರಿಸಿ ಬಿದ್ದಿದ್ದ ಕಸವನ್ನು ತೆಗೆದಿದ್ದಾರೆ. ಈ ಮೂಲಕ ನಾನು ಮಹಾರಾಜ ಅಲ್ಲ ಸಾಮಾನ್ಯ ಪ್ರಜೆ ಎಂಬುದನ್ನು ಸಾಬೀತು ಪಡಿಸಿದರು. ಯದುವೀರ್ಗೆ ಸ್ಥಳೀಯರು ಸಾಥ್ ನೀಡಿದರು.