ಚಿಕ್ಕಬಳ್ಳಾಪುರ: ಹೆಣ್ಣು ಜೀವನ ಪೂರ್ತಿ ತಮ್ಮ ಸಂಸಾರಕ್ಕಾಗಿ ಮೀಸಲಿಡುತ್ತಾಳೆ, ತಾಯಿಯಾಗಿ ತಂಗಿಯಾಗಿ, ಹೆಂಡತಿಯಾಗಿ ತನ್ನ ಮೇಲಿರುವ ಜವಾಬ್ದಾರಿಯನ್ನ ಚಾಚು ತಪ್ಪದೆ ಎಷ್ಟೇ ಕಷ್ಟಇರಳಿ ಒತ್ತಡಗಳ ನಡುವೆಯೂ ತನ್ನ ಜವಾಬ್ದಾರಿ ಪಾಲಿಸುತ್ತಾ ಜೀವನ ಸಾಗಿಸುತ್ತಾಳೆ.
ಹೆಣ್ಣು ಹುಟ್ಟಿನಿಂದ ಹಿಡಿದು ತನ್ನ ಜೀವನದ ಕೊನೆ ವರೆಗೂ ಹೆಣ್ಣಿನ ಸೇವೆ ಅಪಾರ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಯಾಸ್ಮಿನ್ ತಾಜ್ ಹೇಳಿದರು.ಅವರು ಶುಕ್ರವಾರ ತಾಲ್ಲೂಕಿನ ಸುಲ್ತಾನ್ ಪೇಟೆಯಲ್ಲಿರುವ ಶ್ರೀ ಸಾಯಿ ದ್ವಾರಕಮಾಯಿ ವೃದ್ಧಾಶ್ರಮದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಶ್ರಮದಲ್ಲಿ ವೃದ್ಧರೊಂದಿಗೆ ಕೇಕ್ ಕತ್ತರಿಸಿ ಮೂಲಕ ವೃದ್ಧರಿಗೆ ಹಣ್ಣು ಹಂಪಲು ವಿತರಿಸಿ ಆಚರಿಸಿದರು.
ಈ ವೇಳೆ ಮಾತನಾಡಿದ ಯಾಸ್ಮಿನ್ ತಾಜ್ ಇಂದಿನ ಯುಗದಲ್ಲಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದು ಸಮಾಜಕ್ಕಾಗಿ ಕೊಡ ಮಹೀಳೆಯರ ಕೊಡುಗೆ ಅಪಾರ,ಕೆಟ್ಟ ದಾರಿ ಹಿಡಿದಿರುವ ಒಬ್ಬ ಮನುಷ್ಯನಿಗೆ ತಿದ್ದಿ ಅವನಿಗೆ ಮತ್ತೆ ಒಳ್ಳೆಯ ಮನುಷ್ಯ ಮಾಡುವ ಶಕ್ತಿ ಮಹಿಳೆಯರಿಗೆ ಇದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷೆ ವೆಂಕಟಲಕ್ಷ್ಮೀ, ಜಿಲ್ಲಾ ಉಪಾಧ್ಯಕ್ಷೆ ವೆಂಕಟರತ್ನ, ಜಿಲ್ಲಾ ಕಾರ್ಯದರ್ಶಿ ಹಸೀನಾ, ಸರೋಜ, ಮಂಜುಳಾ, ಇರ್ಫಾನಾ, ಯಶೋದಾ, ಧನಲಕ್ಷ್ಮಿ ಮತ್ತು ಇತರರು ಉಪಸ್ಥಿತರಿದ್ದರು.