ಬೆಳಗಾವಿ: ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ.
ಯತ್ನಾಳ್ ಆರೋಪ ಮಾಡಿರುವಂತೆ ಐಸಿಸ್ ನಂಟು ಹೊಂದಿದ್ದಾರೆ ಎನ್ನಲಾದ ಸಯ್ಯದ್ ತನ್ವೀರ್ ಮಹಮ್ಮದ್ ಹಾಷ್ಮಿ ಅವರು ನನಗೆ ಬಹಳ ಹಿಂದಿನಿಂದಲೂ ಪರಿಚಯವಿದೆ.
ಯತ್ನಾಳ್ ಅವರನ್ನು ಪಕ್ಷದ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರನ್ನಾಗಿ ಮಾಡದಿರುವುದಕ್ಕೆ ಹತಾಶೆಗೊಂಡು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಬೇಕಾದರೆ ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ತನಿಖೆ ನಡೆಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ದ್ವೇಷದ ರಾಜಕಾರಣ ಮಾಡುವುದೇ ಯತ್ನಾಳ್ ಕೆಲಸ ಎಂದು ಅವರು ಕಿಡಿಕಾರಿದ್ದಾರೆ.