ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸಭೆಗೆ ಅಯ್ಕೆಯಾಗಿರುವ ಡಾ ಸಯ್ಯದ್ ನಾಸೀರ್ ಹುಸ್ಸೇನ್ ಮತ್ತು ನಿನ್ನೆ ವಿಧಾನಸೌಧದಲ್ಲಿ ನಡೆದಿರುವ ಘಟನೆಗೆ ಸಂಬಂಧಪಟ್ಟಂತೆ ಅವರ ಬೆಂಬಲಿಗರ ವಿರುದ್ಧ ಬೆಂಕಿಯುಗುಳಿದರು.
ಇಂದು ಬೆಳಗ್ಗೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್, ನಿನ್ನೆ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆ ಆಯ್ಕೆಯಾಗಿರುವ ನಾಸೀರ್ ಹುಸ್ಸೇನ್, ತನ್ನ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಅವರ ಬೆಂಬಲಕ್ಕೆ ನಿಂತು ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾನೆ.
ಇಂಥ ದೇಶ ವಿರೋಧಿ ಮತ್ತು ದೇಶದ್ರೋಹಿಗಳನ್ನೇ ಕಾಂಗ್ರೆಸ್ ಆಯ್ಕೆ ಮಾಡಿ ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ಕಳಿಸುತ್ತದೆ ಎಂದು ಯತ್ನಾಳ್ ಹೇಳಿದರು.ಹಿಂದೆ ಭಾರತದ ಉಪ ರಾಷ್ಟ್ರಪತಿಯಾದವನೊಬ್ಬ ಪಾಕಿಸ್ತಾನದ ಏಜೆಂಟ್ ಹಾಗೆ ವರ್ತಿಸುತ್ತಿದ್ದ.
ಕರ್ನಾಟಕದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಇಂಥ ದುಷ್ಕೃತ್ಯಗಳು ನಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪರ ನಿಂತುಕೊಳ್ಳುವುದೇ ಕಾರಣ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.