ಬೆಳಗಾವಿ: 55 ವರ್ಷದ ಹಿಂದೆ ನಮ್ಮ ತಂದೆ ಕೊಟ್ಟ ಪ್ರಾಪರ್ಟಿ, ಅದು ಮುನ್ಸಿಪಾಲಿಟಿ ಲೀಸ್ ಪ್ರಾಪರ್ಟಿ. ಅಲ್ಲಿ ವ್ಯವಹಾರ ನಡೆಸುತ್ತಿರುವ ಕುಟುಂಬಕ್ಕೂ ಮೌಲ್ವಿಗೂ ಸಂಬಂಧ ಇಲ್ಲಾ. ಅವರಿಗೂ ಇವರಿಗೂ ಸಾಕಷ್ಟು ಡಿಫರೆನ್ಸ್ ಇದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಾನು ಅವರ ಜೊತೆ ಪಾರ್ಟನರ್ಶಿಪ್ ಬ್ಯುಸಿನೆಸ್ ಮಾಡ್ತಿದ್ದೀನಿ ಎನ್ನುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿ ವಿಪಕ್ಷ ನಾಯಕರ ವಿರುದ್ಧ ಅಸಮಾಧಾನ ಇದೇ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ, ವಿಪಕ್ಷ ನಾಯಕರು ಹೇಳಿದ್ದಂತೆ ಶಾಸಕರು ಕೇಳಬೇಕು. ಸಭಾತ್ಯಾಗ, ಧರಣಿ ಮಾಡುವ ಬಗ್ಗೆ ವಿಪಕ್ಷ ನಾಯಕರು ತೀರ್ಮಾನ ಮಾಡ್ತಾರೆ.
ಸಭಾತ್ಯಾಗ ಮಾಡಿ ಎಂದು ಹೇಳಿದ್ದರು ಆದ್ದರಿಂದ ಸಭಾತ್ಯಾಗ ಮಾಡಿದ್ದೇವೆ ಎಂದರು.ಹೊಂದಾಣಿಕೆ ರಾಜಕೀಯ ಬಗ್ಗೆ ಹಿಂದೆಯೂ ಹೇಳಿದ್ದೇನೆ. ಪುನರ್ ಉಚ್ಚಾರಣೆ ಮಾಡುವ ಅವಶ್ಯಕತೆ ಇಲ್ಲ.ಹೊಂದಾಣಿಕೆ ರಾಜಕೀಯ ಇಲ್ಲ ಎಂದು ನಾನು ನಿರಾಕರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ವಿಪಕ್ಷಗಳು ವಿಫಲ ಎಂಬ ಪ್ರಶ್ನೆಗೆ ಉತ್ತರಿಸಿ, ಹೊಂದಾಣಿಕೆ ಹಂತ ಹಂತವಾಗಿ ಆಗುತ್ತಿದೆ. ಆದಷ್ಟು ಬೇಗ ಹೊಂದಾಣಿಕೆ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.