ಬೆಂಗಳೂರು: ಇತ್ತೀಚೆಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನದಿಂದಾಗಿ ತೆರವಾಗಿರುವ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅಲಂಕರಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಬಿ.ಎಸ್.ಯಡಿಯೂರಪ್ಪಗೆ ಆ ದೊಡ್ಡ ಸ್ಥಾನ ಒಲಿದು ಬರುವ ಸಾಧ್ಯಸಾಧ್ಯತೆ ಬಗ್ಗೆ ತೆರೆಮರೆಯಲ್ಲಿ ಚರ್ಚೆ ಆರಂಭವಾಗಿದೆ.
ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅದಕ್ಕೆ ಮುಂದಿನ ೬ ತಿಂಗಳಲ್ಲಿ ಉಪ-ಚುನಾವಣೆ ನಡೆಯಲಿದೆ.
ಆದರೆ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯಾಧ್ಯಕ್ಷರು ಕೂಡ ಆಗಿದ್ದರು. ಆ ಸ್ಥಾನಕ್ಕೆ ಈಗ ಪೈಪೋಟಿ ಆರಂಭವಾಗಿದೆ. ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯಾಧ್ಯಕ್ಷ ಆಗಿದ್ದಾಗಲೂ, ರಾಜ್ಯದಲ್ಲಿ ಸಮುದಾಯದ ಪ್ರಶ್ನಾತೀತಾ ನಾಯಕರಾಗಿರಲಿಲ್ಲ. ಈಗ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತಾ ನಾಯಕರ ಪಟ್ಟಿಯಲ್ಲಿ ಮೊದಲಿಗರಾಗಿ ಬಿ. ಎಸ್.ಯಡಿಯೂರಪ್ಪ ಇದ್ದಾರೆ. ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸಾಕಷ್ಟು ಘಟಾನುಘಟಿ ನಾಯಕರಿದ್ದಾರೆ.
ಹೀಗಾಗಿ, ಸದ್ಯ ಬಿ.ಎಸ್. ಯಡಿಯೂರಪ್ಪರ ಹೆಸರು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟಿçÃಯಾಧ್ಯಕ್ಷರ ಸ್ಥಾನಕ್ಕೆ ಮುನ್ನೆಲೆಗೆ ಬಂದಿದೆ. ಇನ್ನು ಯಡಿಯೂರಪ್ಪರನ್ನು ಹೊರತುಪಡಿಸಿದರೆ, ಸಚಿವ ಈಶ್ವರ್ ಖಂಡ್ರೆ, ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಹೆಸರುಗಳು ಚರ್ಚೆಗೆ ಬಂದಿದೆ. ಇತ್ತ ಶಾಮನೂರು ಶಿವಶಂಕರಪ್ಪರ ಪುತ್ರ, ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ. ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದ ಹೆಸರು ಮಾಡಿ, ಸಚಿವರಾಗಿ, ಉಪ- ಮುಖ್ಯಮಂತ್ರಿಯಾಗಿ ಹಾಗೂ ೪ ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಯಡಿಯೂರಪ್ಪರಿಗೆ ಒಲಿದು ಬರುತ್ತಾ? ಕುತೂಹಲ ಕೆರಳಿಸಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪರ ಹೆಸರು ಮುನ್ನೆಲೆಗೆ



