ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳAಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ನಗರದ ಹಲವೆಡೆ ಶೀತ ಗಾಳಿ ಜೊತೆ ಮಳೆ ಆರಂಭವಾಗಿದ್ದು, ನಗರಾದ್ಯAತ ಮೋಡ ಕವಿದ ವಾತಾವರಣವಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವವರಿಗೆ ಮಳೆ ಸಾಥ್ ಕೊಟ್ಟಿದೆ. ಇಂದೂ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ೧೩ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆ ಅಲರ್ಟ್ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಇನ್ನು ಜಿಟಿಜಿಟಿ ಮಳೆಗೆ ಬೆಂಗಳೂರು ಮಲೆನಾಡಿನಂತೆ ಆಗಿದೆ. ಬೆಳ್ಳಗೆಯಿಂದಲೂ ತುಂತುರು ಮಳೆ ಬಿಟ್ಟುಬಿಡದೇ ಸುರಿಯುತ್ತಿದೆ. ಚುಮುಚುಮು ಚಳಿ ಹಾಗೂ ಜಿಟಿಜಿಟಿ ಮಳೆಯೊಂದಿಗೆ ಊಟಿ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮುಂದಿನ ಮೂರು ದಿನಗಳವರೆಗೆ ಇದೇ ವಾತವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.