ಶಿಡ್ಲಘಟ್ಟ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹಾಗೂ ಮಾಜಿ ಶಾಸಕ ಸೇರಿದಂತೆ ಹಲವಾರು ಮುಖಂಡರು ಯೋಗಾಭ್ಯಾಸ ಮಾಡಿದರು.
ಯೋಗಭ್ಯಾಸ ಹಾಗೂ ಧ್ಯಾನ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಒತ್ತಡ ಮತ್ತು ಮಾನಸಿಕ ಅಸಮತೋಲನ ತಡೆಗಟ್ಟುವಲ್ಲಿ ಧ್ಯಾನ ಮತ್ತು ಯೋಗ ಅತ್ಯಮೂಲ್ಯ ಎಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಸೀಕಲ್ ರಾಮ ಚಂದ್ರಗೌಡ ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಶಾಸಕರು ಮತ್ತು ತಾಲ್ಲೂಕು ಬಿಜೆಪಿ ಅಧ್ಯಕ್ಷ ಸೇರಿದಂತೆ ಹಿರಿಯ ಬಿಜೆಪಿ ಕಾರ್ಯ ಕರ್ತರಾದ ತಾತಹಳ್ಳಿ ಕನಕಪ್ರಸಾದ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸೀಕಲ್ ಆನಂದ ಗೌಡ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು,ಯೋಗಪಟುಗಳೊಂದಿಗೆ ಯೋಗಾಭ್ಯಾಸ ಮಾಡಿದರು. ಪತಂಜಲಿ ಯೋಗ ಸಮಿತಿ ಸದಸ್ಯರು ಮತ್ತು ಯೋಗ ಗುರುಗಳಾದ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.