`ಭೂಮಿಕ ನೆಸ್ಟ್ ‘ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರ, ದೀಪಾಂಜಲಿ ನಗರ, ಕಳೆದ 14 ವರ್ಷಗಳಿಂದ ಸಮಾಜಪರ ಸೇವೆ ಸಲ್ಲಿಸುತ್ತಿದ್ದು, ಇಂದು 10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಯೋಗ ತರಬೇತಿ, ಯೋಗ ಶಿಬಿರ ಮತ್ತು ಆರೋಗ್ಯ ತಪಾಸಣೆ ಶಿಬಿರದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ದೇವಗೆರೆ, ಕುಂಬಳಗೊಡು ನಮ್ಮೂರ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ, ಪ್ರಜಾಕಿರಣ ಸೇವ ಚಾರಿಟಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿ, ಶಾಲಾ ಮಕ್ಕಳು ಆಗೂ ಸುತ್ತಮುತ್ತಲಿನ ಗ್ರಾಮಸ್ತರಲ್ಲಿ ಯೋಗದ ಅರಿವು ಮೂಡಿಸಿದೆ.
ಖ್ಯಾತ ಯೋಗ ತರಬೇತುದಾರರಾದ ಡಾ. ಬಿ ಪ್ರಕಾಶ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಪ್ರಜಾಕಿರಣ ಸೇವ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರು ರಾಹುಲ್ ಗಾಳಿ, ಗ್ರಾಮದ ಹಿರಿಯರಾದ ಮಂಜುಳ ರುದ್ರಮೋರ್ತಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಪ್ರೇಮಾ ಕಾರ್ಯಕ್ರಮದ ಅತಿಥಿಯಾಗಿದ್ದರು.