ಆನೇಕಲ್ : ಬೆಂಗಳೂರು ನಗರದ ಬಿ.ಎಂ.ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಶಾಲೆಯಲ್ಲಿ ಇತ್ತೀಚೆಗೆ ಶ್ರೀ ಮಾರುತಿ ಚಾರಿಟೇಬಲ್ ಟ್ರಸ್ಟ್ ಮತ್ತು ವಿಶ್ವ ಮಾನವ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಶಿಪ್ ಮತ್ತು ಅಂತರರಾಷ್ಟ್ರೀಯ ಯೋಗ ಆಯ್ಕೆ ೨೦೨೫ ಮತ್ತು ಶ್ರೀಕಲ್ಪ ಸಮೂಹ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ವೆಲ್ ಸ್ಪ್ರಿಂಗ್ ಅಕಾಡಮಿ ಶಾಲೆಯ ಸುಮಾರು ೧೭ ಮಂದಿ ವಿದ್ಯಾರ್ಥಿಗಳು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೩ಮಂದಿ ವಿದ್ಯಾರ್ಥಿ ಗಳಿಗೆ ಯೋಗ ಶಿಲ್ಪಾ ಆವಾರ್ಡ್ ನೀಡಿ ಗೌರವಿಸಿದ್ದಾರೆ.
ವೆಲ್ ಸ್ಪ್ರಿಂಗ್ ಅಕಾಡಮಿಯ ನಿರ್ದೇಶಕರಾದ ಅಕಿಲೇಶ್ವರ್ ರೆಡ್ಡಿ ಮಾತನಾಡಿ, ದೇಶದ ವಿವಿಧ ರಾಜ್ಯಗಳಿಂದ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆ ತರುವ ವಿಚಾರವಾಗಿದ್ದು ಇವರು ಮುಂಬರುವ ದಿನಗಳಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ದೇಶಕ್ಕೆ ಪದಕ ತರುವ ವಿಶ್ವಾಸವಿದೆ ಎಂದರು.
ವೆಲ್ ಸ್ಪ್ರಿಂಗ್ ಅಕಾಡಮಿಯ ನಿರ್ದೇಶಕರಾದ ದಿನೇಶ್ ರೆಡ್ಡಿ ಮಾತನಾಡಿ, ಯೋಗವು ಕೇವಲ ಕ್ರೀಡೆ ಮಾತ್ರವಲ್ಲ, ಅದು ಮನಸ್ಸು ಮತ್ತು ದೇಹದ ಶಿಸ್ತು ಹಾಗೂ ಏಕಾಗ್ರತೆಯನ್ನು ಕಲಿಸುತ್ತದೆ. ನಮ್ಮ ವಿದ್ಯಾರ್ಥಿಗಳು ರಾಷ್ಟç ಮಟ್ಟದಲ್ಲಿ ಮೆರೆದಿದ್ದು, ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲೂ ಸಹ ಭಾರತದ ಹೆಮ್ಮೆ ಹೆಚ್ಚಿಸಲಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ವೆಲ್ ಸ್ಪ್ರಿಂಗ್ ಅಕಾಡಮಿಯ ಚೇರ್ ಮೆನ್ ಪ್ರಸಾದ್ ರೆಡ್ಡಿ, ವ್ಯವಸ್ಥಪಕರಾದ ಸಂಜಯ್ಯ ರೆಡ್ಡಿ, ದೈಹಿಕ ಶಿಕ್ಷಕ ಶಶಿಕಾಂತ್ ರಾಜ್ ಅರಸ್, ಕೋಚ್ ವಿಶಾಲ್ ಗೌಡ ಹಾಗೂ ಮತ್ತಿತ್ತರರು ಹಾಜರಿದ್ದರು. ಆಯ್ಕೆಯಾದ ವಿದ್ಯಾರ್ಥಿಗಳು : ನಯಾರ ಶೆಟ್ಟಿ, ವೈಷ್ಣವಿ, ಯಾತ್ರ, ದೇವಿಕಾ, ತನ್ವೀತಾ, ವ್ಯಾಸ, ಹನಿಕ, ಇವಾ ಪ್ರಖ್, ಕೈರವಿ, ತುಷಾರ, ಎಂಜಲ್, ವೇದಶ್ರೀ, ಅದೀರಾ, ಮೈರಾ, ನಿಹರಿಕ, ಶುಭ, ಅನುಮಿತ, ನಿಶ್ಚಿತ್, ಪ್ರಣವಿ, ಇ ಶಂಖ.



