ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ಗೌಡ ಕೊಲೆ ಪ್ರಕರಣದ ತೀರ್ಪನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ನೀಡಬೇಕಾಗಿದ್ದ ತೀರ್ಪನ್ನು ಏ.15ಕ್ಕೆ ಮುಂದೂಡಿದೆ. ಶಾಸಕ ವಿನಯ್ಕುಲಕರ್ಣಿ ಅವರು ಯೋಗೇಶ್ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಇಂದಿಗೆ ತೀರ್ಪು ನಿಗಧಿಪಡಿಸಿದ್ದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಕಲಾಪ ಆರಂಭ ವಾಗುವ ವೇಳೆಗೆ ವಿನಯ್ಕುಲಕರ್ಣಿ ಅವರು ನ್ಯಾಯಾಲಯಕ್ಕೆ ಆಗಮಿಸಿದ್ದರು. ಆದರೆ ನ್ಯಾಯಾಲಯ ತೀರ್ಪನ್ನು ಮುಂದೂಡಿದೆ.



