ದೊಡ್ಡಬಳ್ಳಾಪುರ: ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಶಾಲೆಮತ್ತು ತಾಲೂಕಿಗೆ ಕೀರ್ತಿ ತಂದಿರುವುದು ಸಂತಸದ ವಿಚಾರ ಎಂದು ದೇವಾಂಗ ಮಂಡಳಿ ಅದ್ಯಕ್ಷ ಎಂ.ಜಿ.ಶ್ರೀನಿವಾಸ್ ಅವರು ಪದಕ ವಿಜೇತ ಪವನ್ ಕುಮಾರ್ ಅವರನ್ನ ಅಭಿನಂದಿಸಿದರು.
ಕರ್ನಾಟಕ ರಾಜ್ಯ ಯೋಗ ಅಸೋಸಿಯೇಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ 42ನೇ ಕರ್ನಾಟಕ ರಾಜ್ಯ ಯೋಗಾ
ಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದಶ್ರೀ ದೇವಲ ಮಹರ್ಷಿ ಆಂಗ್ಲ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್ ಕುಮಾರ್ ಬಿ.ಆರ್ 14 ರಿಂದ 18 ವರ್ಷದ ವಯೋಮಿತಿ ವಿಭಾಗದಲ್ಲಿ ಭಾಗವಹಿಸಿ.
ಚಿನ್ನದ ಪದಕ ಗಳಿಸಿರುತ್ತಾರೆ ಹಾಗೂ 29ನೇ ಕರ್ನಾಟಕ ರಾಜ್ಯವವಿಜೇಯತರರ ಯೋಗ ಸ್ಪರ್ಧೆಯಲ್ಲಿ ರಜತ ಪದಕ ಸಹ ಗಳಿಸಿರುವುದನ್ನ ದೇವಾಂಗ ಮಂಡಳಿ ಅದ್ಯಕ್ಷ ಎಂ.ಜಿ.ಶ್ರೀನಿವಾಸ್, ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಕಾರ್ಯನಿರ್ವಾಹಕರು/ ಕಾರ್ಯಕಾರಿ ಮಂಡಳಿಯ ಸದಸ್ಯರು, ಶ್ರೀ ದೇವಲ ಮಹರ್ಷಿ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ.ಬಿ.ಎಲ್ ಹಾಗೂ ಶಿಕ್ಷಕ ವೃಂದವತಿಯಿಂದ ಅಭಿನಂದಿಸಿದರು.