ಗೌರಿಬಿದನೂರು: ವೇಮನ ನಮ್ಮ ನೆರೆಯ ಆಂಧ್ರದ ಕಡಪ ಜಿಲ್ಲೆಯಲ್ಲಿ ಜನ್ಮ ತಾಳಿದರೂ ಅವರು ಬರದ ವಚನಗಳು ಮನುಕುಲಕ್ಕೆ ಆದರ್ಶವಾಗಿದೆ ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.ಇವರು ಇಂದು ತಾಲೂಕು ಕಛೇರಿಯ ಸಭಾಂಗಣದಲ್ಲಿ ಸರ್ಕಾರದಿಂದ ನಡೆದ ಯೋಗಿ ವೇಮನರ 612 ನೇ ಜಯಂತಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ,
ವೇಮನರ ವಚನಗಳಲ್ಲಿ ಅಂದಿನ ಕಾಲಘಟ್ಟದಲ್ಲಿ ನಡೆದ ಸಾಮಾಜಿಕ ಪಿಡಿಗುಗಳ ಬಗ್ಗೆ ತಿಳಿಸಿದ್ದಾರೆ. ಯೋಗಿ ಯಾಗಿ ಪರಿವರ್ತನೆ ಯಾಗಿ
ಊರೂರು ಅಲೆದಾಟ ಮಾಡಿ ತಮ್ಮ ವಚನಗಳನ್ನು ಬರೆದಿದ್ದಾರೆ. ಅವರ ವಚನಗಳಲ್ಲಿ ಮೌಢ್ಯತೆ, ಜಾತಿ ಪದ್ದತಿ, ಮುಂತಾದ ಸಮಾಜಿಕ ವಿಷಯಗಳಲ್ಲಿ ಮಾನವರನ್ನು ಎಚ್ಚರಿಸಿದ್ದಾರೆ.ಇವರ ಜೀವನದಲ್ಲಿ ಇಂದಿನ ಯುವಪೀಳಿಗೆ ಆಚರಿಸಬಹುದಾದ ಹೆಚ್ಚಿನ ವಿಷಯಗಳಿವೆ.ಸರಳ ತೆಲುಗು ಭಾಷೆಯಲ್ಲಿ ಇವರು ವಚನಗಳನ್ನು ನಮಗೆ ನೀಡಿದ್ದಾರೆ ಎಂದರು.
ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಮಾತನಾಡಿ ರೆಡ್ಡಿ ಸಮುದಾಯ ಮೂಲತಃ ಅಂಧ್ರ ಪ್ರದೇಶದಿಂದ ಬಂದ ಜನಾಂಗ,ರೆಡ್ಡಿ ಎಂದರೆ ಕೂಲಿ ಕಾರ್ಮಿಕರಿಗೆ ಪೋಷಣೆ ಮಾಡಿದ ಕೀರ್ತಿ ಈ ಸಮುದಾಯಕ್ಕೆ ಸೇರುತ್ತದೆ.ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಒಗ್ಗಟ್ಟು ಮೂಡಿರುವುದು ಸಂತಸದ ವಿಷಯವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮರಳೂರು ಹನುಮಂತರೆಡ್ಡಿ,ಮಾತನಾಡಿ ಯೋಗಿ ವೇಮನ ಅವರ ವಚನಗಳು ಅಂದಿನ ಕಾಲಘಟ್ಟದ ಪೋರೊಹಿತ ಶಾಹಿಗಳಿಗೆ ನುಂಗಲಾರದ ತುತ್ತಾಗಿದ್ದು ವ್ಯಕ್ತಿ ಪೂಜೆ ಮೂರ್ತಿ ಪೂಜೆಗಳು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದ ವೇಮನ ತಮ್ಮ ಹರಿತವಾದ ಮಾತುಗಳು ಪುರೋಹಿತ ವರ್ಗಗಳಿಗೆ ವಿರೋಧವಾಗಿತ್ತು, ಎಂದರು.
ವೇಮನರ ಜನಪ್ರೀಯ ವಚನಗಳಾದ “ಎಕ್ಕೆದಿ ರಾಯಿ,ತೊಕ್ಕೆದಿ ರಾಯಿ ಮೊಕ್ಕೆದಿ ರಾಯಿ’’ಮೂರ್ತಿ ಪೂಜೆ ಬಗ್ಗೆ ಕಟುವಾಗಿ ವಿರೋಧ ಮಾಡುತ್ತಿದ್ದರು.“ಒಬ್ಬ ಬ್ರಾಹ್ಮಣಕ್ಕಿಂತ ಕೋಳಿ ಮೇಲು,ಕೋಳಿ ಮುಂಜಾನೆ ಕೂಗಿ ಮನುಷ್ಯನ್ನು ಜಾಗೃತಿ ಮಾಡುತ್ತದೆ ಎಂಬ ಕಟುಸತ್ಯ ಲೋಕಕ್ಕೆ ಸಾರಿದ. ತಹಸೀಲ್ದಾರ್ ಮಹೇಶ್ ಪತ್ರಿ ಮಾತನಾಡಿ ವೇಮನ ಜೀವನ ಸಭೆಗೆ ತಿಳಿಸಿದರು
ಕಾರ್ಯಕ್ರಮದಲ್ಲಿ ರೆಡ್ಡಿ ಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ, ವೆಂಕಟರಾಮರೆಡ್ಡಿ, ಬೊಮ್ಮಣ್ಣ, ರಾಮಚಂದ್ರಾರೆಡ್ಡಿ, ರಾಮಕೃಷ್ಣಾರೆಡ್ಡಿ, ಪ್ರಗತಿ ಪರ ರೈತ ಡಾ.ಜಿ.ಆರ್.ಗೋವಿಂದರೆಡ್ಡಿ ರೆಡ್ಡಿ, ಪತ್ರಕರ್ತ ಜಗನ್ನಾಥರೆಡ್ಡಿ. ಬೊಮ್ಮಣ್ಣ, ರಾಮಚಂದ್ರರೆಡ್ಡಿ, ಸಮುದಾಯದವರು ಭಾಗವಹಿಸಿದ್ದರು.