ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ದಿನಾಂಕ 08,09,15,16 ಜೂನ್ 2024 ಆನ್ಲೈನ್ ನಲ್ಲಿ ನಡೆದ 8ನೇ ಫೆಡರೇಷನ್ ಯೋಗ ಸ್ಪೋರ್ಟ್ಸ್ ಕಪ್ -2024 ಯೋಗ ಚಾಂಪಿಯನ್ಷಿಪ್ ನಲ್ಲಿ ದೊಡ್ಡ ಬಳ್ಳಾಪುರದ ನಿಸರ್ಗ ಯೋಗ ಕೇಂದ್ರ (ರಿ), ಯೋಗಪಟುಗಳಾದ ಎನ್ ಖುಷಿಪ್ರಿಯ (ಆದಿತ್ಯ ಪಬ್ಲಿಕ್ ಸ್ಕೂಲ್) ಮತ್ತು ಹಿತಶ್ರೀ ಕೆ.ಎಂ (ನಳಂದ ಹೈ ಸ್ಕೂಲ್) ರವರು ಬಾಲಕಿಯರ ರಿದಮಿಕ್ ಪೇರ್ ಯೋಗದಲ್ಲಿ ಬೆಳ್ಳಿಯ ಪದಕ ಪಡೆದರೆ ಬಾಲಕರ ವಿಭಾಗದಲ್ಲಿ ಲಿಟ್ಸ್ ಏಂಜಲ್ ಶಾಲೆಯ ಜೆ.ಸಿ.ಪ್ರಥಮಶೆಟ್ಟಿ ಮತ್ತು ಸರಸ್ವತಿ ಶಾಲೆಯ ಎ.ಹಿತೇಶ್ ರಿದಮಿಕ್ ಪೇರ್ಯೋಗ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದಾರೆ.
ಸಂಪ್ರದಾಯಿಕ ಯೋಗದಲ್ಲಿ ನಾಗಾರ್ಜುನ ಪಿಯು ಕಾಲೇಜಿನ ಎಮ್.ಆರ್.ಜಾನ್ಹವಿ 6 ನೇ ಸ್ಥಾನವನ್ನು ಪಡೆದರೆ ನಳಂದ ಹೈ ಸ್ಕೂಲಿನ ಎಲ್.ನೀರಜ್ 6 ನೇ ಸ್ಥಾನ ಪಡೆದರೆ ವಿಶ್ವವಿದ್ಯಾ ಪೀಠದ ಎಸ್.ಆವಿಷ ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲಿನ ಮಧುಶಾಲಿನಿ.ಡಿ.ಎಸ್ ಭಾಗವಹಿಸಿದ್ದರು, ಇವರಿಗೆ ನಿಸರ್ಗ ಯೋಗ ಕೇಂದ್ರದ ತರಬೇತಿದಾರರು, ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭ ಹಾರೈಸಿದ್ದಾರೆ.