ಬೆಂಗಳೂರು : ಒಂದು ಕಡೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಜಟಾಪಟಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇದರ ಮಧ್ಯ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರಿಗೆ ನಾಗಾಸಾದಿಗಳು ನೀನು ಮಂತ್ರಿ ಆಗುತ್ತಿಯಾ ಅಂತ ಆಶೀರ್ವಾದ ಮಾಡಿದ್ದಾರೆ.
ಹೌದು ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ನಿವಾಸಕ್ಕೆ ಇಂದು ನಾಗಾಸಾಧುಗಳು ಇಂದು ಭೇಟಿ ನೀಡಿದ್ದರು. ಉತ್ತರ ಪ್ರದೇಶದ ನಾಗ ಸಾಧುಗಳಿಂದ ಶಾಸಕ ಹೆಚ್. ಸಿ ಬಾಲಕೃಷ್ಣಗೆ ಆಶೀರ್ವಾದ ನೀಡಿದ್ದು ನೀನು ಮಂತ್ರಿ ಆಗುತ್ತೀಯ. ಮಂತ್ರಿ ಆಗುವ ಯೋಗ ನಿನಗೆ ಬಂದಿದೆ ಎಂದು ನಾಗಸಾಧುಗಳು ಆಶೀರ್ವದಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಶಾಸಕರ ನಿಯೋಗ ದೆಹಲಿಗೆ ಭೇಟಿ ನೀಡಿದ ವಿಚಾರವಾಗಿ ನನ್ನ ನೇತೃತ್ವದಲ್ಲಿ ಹೋಗಿಲ್ಲ. ಇಲ್ಲಿ ಯಾರ ನೇತೃತ್ವದ ಅವಶ್ಯಕತೆ ಇಲ್ಲ. ಡಿಕೆ ಶಿವಕುಮಾರ್ ಸಿಎಂ ಆಗಲು ಅವರದೇ ಆದ ಶಕ್ತಿ ಇದೆ. ಯಾರೋ ಹೋಗಿ ಸಿಎಂ ಮಾಡುತ್ತೇವೆ ಅಂತ ಅಥವಾ ನಾನೇ ಹೋಗಿ ಸಿಎಂ ಮಾಡ್ತೀನಿ ಅಂತ ಬಿಲ್ಡಪ್ ಕೊಡಕ್ಕಾಗಲ್ಲ.
ಇದರ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಪಕ್ಷಕ್ಕೆ ಮುಜುಗರ ಆಗದಂತೆ ಹೈಕಮಾಂಡ್ ಇದನ್ನು ಇತ್ಯರ್ಥ ಪಡಿಸಲಿ. ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ ಇಲ್ಲವಾದರೆ ಪಕ್ಷಕ್ಕೆ ಹಾನಿಯಾಗುತ್ತದೆ.ಈ ಬಗ್ಗೆ ರಾಜ್ಯದ ಜನರಿಗೆ ಹಾಗೂ ಶಾಸಕರಿಗೆ ಒಂದು ಕ್ಲಾರಿಟಿ ಸಿಗಬೇಕು ಕ್ಲಾರಿಟಿ ಸಿಗಬೇಕಾದರೆ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು ಇಲ್ಲವಾದರೆ ಪಕ್ಷಕ್ಕೆ ಹಾನಿಯಾಗಿ ಪಕ್ಷ ಹಂತ ಹಂತವಾಗಿ ಕ್ಷೀಣಿಸುತ್ತದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದರು.



