ಶಿಡ್ಲಘಟ್ಟ ಗ್ರಾಮಾಂತರ: ಯುವಜನರು, ಧಾರ್ಮಿಕ ಕಾರ್ಯಗಳತ್ತ ಸಾಗಬೇಕು. ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಸಮಾಜ ಸೇವೆ ಹೊಸಪೇಟೆ ಹೆಚ್.ವಿ.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ, ತಿರುಮಲ ದೇವಾಲಯದಲ್ಲಿ ನಡೆಯಲಿರುವ ೨ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವರಿಗೆ ತಾಳಿಗಳು, ಸೀರೆ, ಕುಬುಸ ವಿತರಣೆ ಮಾಡಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣದಿಂದಾಗಿ ಎಲ್ಲರಲ್ಲೂ ಸಾಮರಸ್ಯ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಹಳ್ಳಿಗಳ ಹಿರಿಯರ ಮಾರ್ಗದರ್ಶನದಲ್ಲಿ ದೇವಾಲಯಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ, ಯುವಕರು ಶಾಲೆಗಳನ್ನು ಉನ್ನತೀಕರಣಗೊಳಿಸಬೇಕು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು. ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡುವ ಕಡೆಗೆ ಗಮನಹರಿಸಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಕೆ.ಮಂಜುನಾಥ್, ಮುನಿರೆಡ್ಡಿ, ಮಾರಪ್ಪ, ನಾರಾಯಣಸ್ವಾಮಿ, ಮುನಿಕೃಷ್ಣ, ಮಹೇಶ್, ಚೇತನ್, ಗಂಗಾಧರ್, ಹೆಚ್.ಎಂ.ಮುರಳಿ ಹಾಜರಿದ್ದರು.