ಬೆಂಗಳೂರು: ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣ ಯಾವತ್ತೂ ಮರೆಯೋಕಾಗಲ್ಲ ಎಂದು ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ನೆನೆದು ಬಿಗ್ಬಾಸ್ ೧೧ರ ವಿನ್ನರ್ ಹನುಮಂತು ಭಾವುಕರಾಗಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಅಂದು ಸರಿಗಮಪ ಸೀಸನ್ ೧೨ರಲ್ಲಿ ನಾನು ರನ್ನರ್ ಅಪ್ ಆಗಿದ್ದಾಗ, ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್ಬಾಸ್ ಸೀಸನ್ ೧೧ರಲ್ಲಿ ನಾನು ಗೆದ್ದಾಗ ನನಗೆ ಪ್ರೀತಿಯಿಂದ ಹಣ ಕೊಡುವುದರ ಮೂಲಕ ಸಂಭ್ರಮಿಸಿದ್ದೀರಿ. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಬರೆದುಕೊಂಡಿದ್ದಾರೆ.
ಸಿಜೆ ರಾಯ್ ಅವರು ಸರಿಗಮಪ ಸೀಸನ್ ೧೨ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಬಹುಮಾನದ ಹಣ ನೀಡಿದ್ದರು. ಬಳಿಕ ಬಿಗ್ಬಾಸ್ ಸೀಸನ್ ೧೧ರಲ್ಲಿಯೂ ಗೆದ್ದಾಗ ಕೂಡ ಅವರೇ ಗೆದ್ದ ಹಣವನ್ನು ನೀ ಡಿದ್ದರು. ಹನುಮಂತು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಣವನ್ನು ನೀಡಿದ್ದ ವಿಡಿಯೋವನ್ನು ಹಂಚಿಕೊAಡಿದ್ದಾರೆ.
ನಿಮ್ಮ ಋಣ ಯಾವತ್ತೂ ಮರೆಯೋಕಾಗಲ್ಲ ಬಿಗ್ಬಾಸ್ ೧೧ರ ವಿಜೇತ ಹನುಮಂತು ಭಾವುಕ



