This is the title of the web page
This is the title of the web page

ಪೋಲೆಂಡ್‍ಗೆ ಝೆಲೆನ್‍ಸ್ಕಿ ಭೇಟಿ

ವಾರ್ಸಾ, ಪೋಲೆಂಡ್: ರಷ್ಯಾ ಆಕ್ರಮಣದ ನಂತರ ಮೊದಲ ಬಾರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಬುಧವಾರ ಪೋಲೆಂಡ್‍ಗೆ ಭೇಟಿ ನೀಡಿದರು. ಈ ವೇಳೆ ಪ್ರಧಾನಿ ಮೇಟಸ್ಜ್ ಮೊರಾವಿಕಿ ಅವರೊಂದಿಗೆ ಮಾತುಕತೆ ನಡೆಸಿದರು.
ಯುದ್ಧದ ಆರಂಭದಿಂದ ಈವರೆಗೆ ನಮ್ಮ ಬೆಂಬಲಕ್ಕೆ ನಿಂತ ನೆರೆಯ ರಾಷ್ಟ್ರಕ್ಕೆ ಧನ್ಯವಾದ ತಿಳಿಸಿದರು.

ಇದೇ ವೇಳೆ ಪೋಲೆಂಡ್ ನಲ್ಲಿ ಆಶ್ರಯ ಪಡೆದಿರುವ ಕೆಲವು ಉಕ್ರೇನ್ ಪ್ರಜೆಗಳನ್ನು ಅವರು ಭೇಟಿಯಾಗಲಿದ್ದಾರೆ. ಇದಕ್ಕೂ ಮೊದಲು ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಬೆಲ್ಜಿಯಂಗೆ ಅವರು ಭೇಟಿ ನೀಡಿದ್ದರು. ಝೆಲೆನ್‍ಸ್ಕಿ ಅವರ ಪತ್ನಿ ಸಹ ಆಗಮಿಸಿದ್ದರು.