ಅಹಮದಾಬಾದ್: ನಗರದ ಏಕಾ ಅರೆನಾದಲ್ಲಿ ನಡೆದ ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಆತಿಥೇಯ ಭಾರತ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಸೋಮವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಭಾರತವು 102 ಚಿನ್ನದ ಪದಕಗಳೊಂದಿಗೆ ಒಟ್ಟು 114 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಭರ್ಜರಿ ಪ್ರದರ್ಶನ ನೀಡಿದೆ.
ಜಪಾನ್ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಅರ್ಜೆಂಟೀನಾದ ಕ್ರೀಡಾಪಟು ನಬೀಲಾ ರ್ರಾಜಾ ಅವರು ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ದೇಶವನ್ನು ಮೂರನೇ ಸ್ಥಾನದಲ್ಲಿ ನಿಲ್ಲಿಸಿದರು.ಪಕ್ಕದ ರಾಷ್ಟ್ರ ನೇಪಾಳವು ಒಂದು ಚಿನ್ನ, 36 ಬೆಳ್ಳಿ ಮತ್ತು 15 ಕಂಚಿನ ಪದಕಗಳೊಂದಿಗೆ ಒಟ್ಟು 52 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿತು. ಉಜ್ಬೇಕಿಸ್ತಾನ್ ಒಂದು ಚಿನ್ನ, 13 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಒಟ್ಟು 25 ಪದಕಗಳನ್ನು ಗಳಿಸಿತು.ಈ ಚಾಂಪಿಯನ್ಶಿಪ್ನಲ್ಲಿ 79 ದೇಶಗಳ ಒಟ್ಟು 522 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ 31 ದೇಶಗಳ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು ಮತ್ತು ಹತ್ತು ದೇಶಗಳು ಕನಿಷ್ಠ ಒಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡವು.ಇದು ಐತಿಹಾಸಿಕ ಘಟ್ಟ 2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲಿರುವ ಅಹಮದಾಬಾದ್ನಲ್ಲಿ ನಡೆದ ಈ ಚಾಂಪಿಯನ್ಶಿಪ್, ಪ್ರಾಚೀನ ಭಾರತೀಯ ಕಲೆಯಾದ ಯೋಗಾಸನವನ್ನು ಜಾಗತಿಕ ಸ್ಪರ್ಧಾತ್ಮಕ ಕ್ರೀಡೆಯಾಗಿ ಪರಿವರ್ತಿಸುವಲ್ಲಿ ಮತ್ತು ಅದನ್ನು ಒಲಿಂಪಿಕ್ ಕ್ರೀಡಾಕೂಟದತ್ತ ಕೊಂಡೊ
ಯ್ಯುವಲ್ಲಿ ಒಂದು ಐತಿಹಾಸಿಕ ಘಟ್ಟವಾಗಿದೆ.ಜಾಗತಿಕ ಚಳವಳಿಯ ಆರಂಭ ವೀಡಿಯೊ ಸಂದೇಶವೊAದರಲ್ಲಿ ಮಾತನಾಡಿದ ವಿಶ್ವ ಯೋಗಾಸನದ ಅಧ್ಯಕ್ಷ ಯೋಗಋಷಿ ಸ್ವಾಮಿ ರಾಮದೇವ್ ಜಿ ಮಹಾರಾಜ್, “ವಿಶ್ವ ಯೋಗಾಸನ ಚಾಂಪಿಯನ್ಶಿಪ್ ಕೇವಲ ಒಂದು ಗಮ್ಯಸ್ಥಾನವಲ್ಲ; ಇದು ಜಾಗತಿಕ ಚಳವಳಿಯ ಆರಂಭವಾಗಿದೆ. ಯೋಗವು ಕೇವಲ ಕ್ರೀಡೆಯಲ್ಲ?ಅದು ಜೀವನಶೈಲಿ, ಆರೋಗ್ಯ, ಸಾಮರಸ್ಯ, ಶಾಂತಿ ಮತ್ತು ಮಾನವ ಐಕ್ಯತೆಯ ಮಾರ್ಗವಾಗಿದೆ” ಎಂದು ತಿಳಿಸಿದರು.
ಫಲಿತಾಂಶಗಳ ಪ್ರಕಾರ, ಆರ್ಟಿಸ್ಟಿಕ್ ಪೇರ್ ಸಬ್-ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾರತದ ಇಶಿಕಾ ಗುಚೈತ್ ಮತ್ತು ಇಶಾನ್ವಿ (90.89) ಚಿನ್ನದ ಪದಕ ಗೆದ್ದರೆ, ಜಾಂಬಿಯಾದ ನಿಯಾ ವಿಜಯ್ವರ್ಗೀಯ ಮತ್ತು ಆರೋಹಿ ಲೋಖಂಡೆ (82.38) ಬೆಳ್ಳಿ ಹಾಗೂ ಜಪಾನ್ನ ರೆಂಕಾ ಅಯೋಕಿ ಮತ್ತು ಇಚಿಕಾ ಶಿಮಿಜು (60.34) ಕಂಚಿನ ಪದಕ ಪಡೆದರು. ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾರತದ ದೀಪಾ ಲೋಧಿ ಮತ್ತು ಸಿಮಾ ನಿಯೋಪಾನೆ (90.42) ಚಿನ್ನ, ನೇಪಾಳದ ಸ್ವೀಕ್ಷ÷್ಯ ಥಾಪಾ ಮತ್ತು ಪ್ರಜ್ಞಾ ಗೌತಮ್ (56.39) ಬೆಳ್ಳಿ ಹಾಗೂ ಜಾಂಬಿಯಾದ ಟಸಿಲಾ ಬ್ಲೆಸ್ಸಿಂಗ್ಸ್ ಫಿರಿ ಮತ್ತು ಡೆಬೊರಾ (41.30) ಕಂಚಿನ ಪದಕಗಳನ್ನು ಗೆದ್ದುಕೊಂಡರು.
ಭಾರತಕ್ಕೆ 104 ಸ್ವರ್ಣ!: ಹೊಸ ಇತಿಹಾಸ ನಿರ್ಮಾಣ



