ಮಂಗಳೂರು: ನಾಳೆ ನೂತನವಾಗಿ ಅಸ್ವಿತ್ವಕ್ಕೆ ಬರುವ ಸರ್ಕಾರದ ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಬಹುಮತ ಸಾಭೀತು ಪಡಿಸುವ ಅವಶ್ಯಕತೆ ಬಂದಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ದವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಒಂದು ವೇಳೆ ಅಗತ್ಯಬಿದ್ದರೆ ಬಹುಮತ ಸಾಭಿತುಪಡಿಸಲಾಗುವುದು. ಇದುವರೆಗೂ ಅಂತಹ ಪರಿಸ್ಥಿತಿ ಎದುರಾಗಿಲ್ಲ. ಯಾರಾದರೂ ತಕರಾರು ತೆಗೆದರೆ ಆ ಬಗ್ಗೆ ಚಿಂತಿಸಲಾಗುವುದು. ಇದುವರೆಗೂ ಅದರ ಅವಶ್ಯಕತೆ ಎದುರಾಗಿಲ್ಲ ಎಂದು ಹೇಳಿದ್ದಾರೆ.
ಬಹುತೇಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಚಿವರಾಗುತ್ತಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿದ್ದು, ಇಂದು ಸಂಜೆ ಅವರು ಮಂಗಳೂರಿನಿಂದ ಬೆಂಗಳೂರಿಗೆ ಧಾವಿಸಲಿದ್ದಾರೆ.
ಸಂಭವೀಯ ಸಚಿವರ ಪಟ್ಟಿಯಲ್ಲಿ ಅವರ ಹೆಸರಿದ್ದರೆ ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ನಾಳೆ ಬೆಳಿಗ್ಗೆ ರಾಜೀನಾಮೆ ನೀಡಿ ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದು ನಂತರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
`ಅಗತ್ಯ ಬಿದ್ದರೆ ಬಹುಮತ ಸಾಬೀತು’



