ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 300 ರನ್ಗಳ ಬೃಹತ್ ಅಂತರದ ಜಯ ಸಾಧಿಸುವ ಮೂಲಕ ಶುಭಮನ್ ಗಿಲ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ದಾಖಲಿಸಿದ ಅತಿ ದೊಡ್ಡ ವಿಜಯವಾಗಿದೆ. ಹೀಗಾಗಿ ವಿಕಾಟ್ ಕೊಹ್ಲಿ ಪಡೆಯು 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ದಾಖಲಿಸಿದ್ದ ಇನ್ನಿಂಗ್ಸ್ ಮತ್ತು 272 ರನ್ ಗಳ ಅಂತರದ ಗೆಲುವೇ ಅತಿ ದೊಡ್ಡ ವಿಜಯವಾಗಿತ್ತು. ಇದನ್ನು ಈಗ ಶುಭಮನ್ ಗಿಲ್ ನನೇತೃತ್ವದ ತಂಡ ಮೆಟ್ಟಿ ನಿಂತಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾ
ಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನವಾದ ಜೂನ್ 8ರ ಸೋಮವಾರದಂದೇ ಪಂದ್ಯ ಮುಕ್ತಾಯಗೊಂಡಿದ್ದು, ಆತಿಥೇಯ ಭಾರತ ತಂಡ ಆರಂಭದಿAದ ಕೊನೆಯವರೆಗೂ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಮೊದಲ ದಿನದಂದು ಟಾಸ್ ಗೆದ್ದ ಗಿಲ್ ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರ ಅಮೋಘ ಶತಕಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 564 ರನ್ಗಳ ದೂಡ್ಡ ಮೊತ್ತ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕೆ.ಎಲ್. ರಾಹುಲ್ ಭರ್ತಿ 100 ಗಳಿಸಿದರೆ, ಶುಭಮನ್ ಗಿಲ್ ಅವರು 126 ರನ್ ಗಳಿಸಿ ಔಟಾದರು. ಆ ಬಳಿಕ ಸಾಯಿ ಸುದರ್ಶನ್(81) ರಿಷಭ್ ಪಂತ್ (81) ಮತ್ತು ವಾಷಿಂಗ್ಟನ್ ಸುಂದರ್ (51) ಅರ್ಧಶತಕ ಗಳಿಸಿ ಬೃಹತ್ ಮೊತ್ತಕ್ಕೆ ಯೋಗದಾನ ನೀಡಿದರು.
ತದನಂತರ ಮೊದಲ ಇನಿಂಗ್ಸ್ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ, ಪದಾರ್ಪಣೆ ಪಂದ್ಯವಾಡಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಅವರ 6 ವಿಕೆಟ್ಗಳ ಮಾರಕ ದಾಳಿಗೆ ಸಿಲುಕಿ ಕೇವಲ 152 ರನ್ಗಳಿಗೆ ಆಲೌಟ್ ಆಯಿತು. ಕನ್ನಡಿಗ ಪ್ರಸಿದ್ಧ ಕೃಷ್ಣ ಸಹ 3 ವಿಕೆಟ್ ಗಳಿಸಿದರು. 412 ರನ್ ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಗೆ ಗುರಿಯಾದ ಅಫ್ಘಾನಿಸ್ತಾನ ತಂಡ ಅದಕ್ಕಿಂತಲೂ ಕಡಿಮೆ ಮೊತ್ತಕ್ಕೆ ಅಂದರೆ 112 ರನ್ ಗಳಿಗೆ ಆಲೌಟ್ ಆಯಿತು. ಪದಾರ್ಪಣೆ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಮಿಂಚಿದ ಮಾನವ ಸುತಾರ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಬೃಹತ್ ಗೆಲುವು



