ಬೆಂಗಳೂರು/ದೆಹಲಿ; ರಾಜ್ಯ ನೂತನ ಸರ್ಕಾರದಲ್ಲಿ ಉದ್ಭವಿಸಿರುವ ಸಚಿವರಿಗೆ ಖಾತೆ ಗೊಂದಲ ಇದೀಗ ದೆಹಲಿಯಲ್ಲಿ ಪಕ್ಷದ ವರಿಷ್ಠರಿಗೆ ದೂರುಕೊಡುವ ತನಕ ಹೋಗಿದೆ.
ತಮಗೆ ನೀಡಿರುವ ಖಾತೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬಿಎಂಆರ್ಡಿಎ ಹೊರತುಪಡಿಸಿ ನೀಡುತ್ತಿರುವ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಸಚಿವ ಕೃಷ್ಣಬೈರೇಗೌಡ ಅವರು ಇಂದು ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಲು ತೆರಳಿದ್ದಾರೆ.
ಅತ್ತ ಕೃಷ್ಣಬೈರೇಗೌಡರು ದೆಹಲಿಗೆ ತೆರಳಿದ್ದರೆ, ಪಕ್ಷದ ಮುಖಂಡರಾದ ಲೋಕಸಭಾ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ ಹಾಗೂ ಮುಖಂಡರಾದ ಸುರ್ಜೇವಾಲಾ ಮತ್ತು ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ ನಿಧನರಾಗಿರುವ ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗಡೆ ಅವರ ಅಂತಿಮ ದರ್ಶನ ಪಡೆಯಲು ರಾಹುಲ್ ಮತ್ತಿತರರು ಆಗಮಿಸಿದ್ದಾರೆ.
ದೆಹಲಿ ತಲುಪಿದ ಖಾತೆ ಗೊಂದಲ ವರಿಷ್ಠರಿಗೆ ಅಸಮಾಧಾನ ತೋಡಿಕೊಳ್ಳಲು ಮುಂದಾದ ಕೃಷ್ಣಭೈರೇಗೌಡ



