LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಶ್ರೀ ಜಾಲಾರಿ ಗಂಗಮಾಂಭ ದೇವಾಲಯದ ಧರ್ಮರಾಯರ ಹೂವಿನ ಕರಗ ಮಹೋತ್ಸವ

ಚಿಕ್ಕಬಳ್ಳಾಪುರ: ನಾಡಹಬ್ಬವೆಂದೇ ಖ್ಯಾತಿಯನ್ನು ಹೊಂದಿರುವ ನಗರದ ಶ್ರೀ ಜಾಲಾರಿ ಗಂಗಮಾಂಭ ದೇವಾಲಯದ ಧರ್ಮರಾಯರ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೆ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ನೆರವೇರಿತು.

ಕರಗದ ಪ್ರಯುಕ್ತ ಶನಿವಾರ ಗಂಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು, ಭಕ್ತರು ಧರ್ಮರಾಯರ ಹಾಗೂ ದ್ರೌಪತಮ್ಮನವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ಮೇಲೂರಿನ ಕೆ.ಧಮೇರ್‍ಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ನಗರದ ವಿವಿಧ ಬಡವಾಣೆಗಳ ಜನರು ರಾತ್ರಿಯಿಡೀ ಸಂಚರಿಸಿದ ಕರಗವನ್ನು ಕಣ್ತುಂಬಿಕೊಂಡರು.

ಕರಗ ವೀಕ್ಷಿಸಲು ಜಿಲ್ಲೆ ಸೇರಿ ಇತರೆ ಜಿಲ್ಲೆಗಳಿಂದ ಸಹಸ್ತ್ರಾರು ಭಕ್ತರು ಆಗಮಿಸಿದ್ದರು.ಕರಗದ ಮೆರವಣಿಗೆಯಲ್ಲಿ ಇಡೀ ರಾತ್ರಿ ಸಂಚರಿಸಿದ ಭಕ್ತರು ನಾಡಿಗೆ ಯಾವುದೇ ರೀತಿ ಕೇಡು ಉಂಟಾಗದಂತೆ, ಶಾಂತಿ ಸಮೃದ್ಧಿಯಿಂದ ತುಂಬಿರಲಿ, ಪ್ರಸ್ತತ ಕಾಡುತ್ತಿರುವ ಬರದಿಂದ ಮುಕ್ತಿ ಪಡೆದು ಜನಜಾನುವಾರು ಮಳೆ ಬೆಳೆಯೊಂದಿಗೆ ಸಮೃದ್ಧವಾದ ಜೀವನ ನಡೆಸಲೆಂದು ಹಾರೈಸಿ ಗ್ರಾಮ ದೇವತೆಯನ್ನು ಪ್ರಾರ್ಥಿಸಿದರು.

ಕರಗದ ಅಂಗವಾಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳನ್ನು ವಿದ್ಯುತ್ ದೀಪಾಂಲಕಾರದಿಂದ ಸಿಂಗಾರಗೊಳಿಸಲಾಗಿತ್ತು. ನಗರವಿಡೀ ಹಬ್ಬದ ವಾತಾವರಣದೊಂದಿಗೆ ನಾನಾ ಕಡೆಗಳಲ್ಲಿ ಆಯೋಜಿಸಿದ್ದ ವಾದ್ಯಗೋಷ್ಠಿ, ಸಂಗೀತ ಕಾರ್ಯಕ್ರಮಗಳು ಸಾಂಸ್ಕøತಿಕ ಲೋಕವನ್ನೇ ಸೃಷ್ಠಿಸಿದಂತಿತ್ತು. ನಗರದ ವಿವಿಧೆಡೆ ಕರಗ ಕುಣಿತಕ್ಕೆ ವಿಶೇಷ ವೇದಿಕೆ ಸಜ್ಜುಗೊಳಿಸಲಾಗಿತ್ತು.ಕರಗ ಕುಣಿತವನ್ನು ಅನೇಕ ಭಕ್ತರು ತಮ್ಮ ಮೊಬೈಲ್ ನ್‍ಗಳಲ್ಲಿ ಸೆರೆ ಹಿಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು