LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆ

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ 10 ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ. ಈ ಹತ್ತು ತಂಡಗಳಲ್ಲಿ 8 ತಂಡಗಳು ಐಸಿಸಿ ಏಕದಿನ ಶ್ರೇಯಾಂಕದ ಆಧಾರದ ಮೇಲೆ ನೇರವಾಗಿ ಅರ್ಹತೆ ಪಡೆದರೆ, ಉಳಿದ 2 ತಂಡಗಳು ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಆತಿಥೇಯ ರಾಷ್ಟ್ರಗಳಾಗಿ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಇನ್ನುಳಿದ 4 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಅಲ್ಲಿಂದ ಒಟ್ಟು ನಾಲ್ಕು ತಂಡಗಳು ವಿಶ್ವಕಪ್ ಮುಖ್ಯ ಟೂರ್ನಿಗೆ ಲಗ್ಗೆ ಇಡಲಿವೆ. ಆ ಬಳಿಕ ಆರಂಭವಾಗುವ ವಿಶ್ವಕಪ್‌ನ ಒಟ್ಟು 14 ತಂಡಗಳಲ್ಲಿ, ಕೊನೆಯ 3 ಶ್ರೇಯಾಂಕದ ತಂಡಗಳು ಮಾತ್ರ ಮೊದಲ ಹಂತದಲ್ಲಿ 'ಸೂಪರ್ ಸಿರೀಸ್' ಪಂದ್ಯಗಳನ್ನಾಡಲಿವೆ. ಇವುಗಳಲ್ಲಿ 2 ತಂಡಗಳು ಹೊರಬಿದ್ದು, ಅಗ್ರಸ್ಥಾನ ಪಡೆಯುವ ಕೇವಲ 1 ತಂಡ ಮಾತ್ರ ಮುಂದಿನ ಮುಖ್ಯ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಇದಾದ ಬಳಿಕ ಒಟ್ಟು 12 ತಂಡಗಳ ನಡುವಣ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇನ್ನು ವಿಶ್ವಕಪ್ ಗೆ ನೇರ ಅರ್ಹತೆ ಪಡೆದಿರುವ 10 ತಂಡಗಳ ಪಟ್ಟಿ ಈ ಕೆಳಗಿನಂತಿದೆ.ಭಾರತ: ಐಸಿಸಿ ಏಕದಿನ ತಂಡಗಳ ರ‍್ಯಾಂಕಿಂಗ್ ನಲ್ಲಿ ನಂಬರ್ 1 ತಂಡವಾಗಿರುವ ಟೀಮ್ ಇಂಡಿಯಾ 2027ರ ಏಕದಿನ ವಿಶ್ವಕಪ್ ಗೆ ನೇರ ಅರ್ಹತೆ ಪಡೆದ ಮೊದಲ ತಂಡವಾಗಿದೆ. ನ್ಯೂಝಿಲೆಂಡ್: ಐಸಿಸಿ ಟೂರ್ನಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ `ಬ್ಲಾಕ್‌ಕ್ಯಾಪ್ಸ್' ಪಡೆ, ಭಾರತದ ಬೆನ್ನಿಗೇ ಎರಡನೇ ಸ್ಥಾನದಲ್ಲಿದ್ದು ಸುಲಭವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಆಸ್ಟ್ರೇಲಿಯಾ: ವಿಶ್ವಕಪ್ ಇತಿಹಾಸದ ಅತ್ಯಂತ ಯಶಸ್ವಿ ತಂಡ ಹಾಗೂ ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ, ತನ್ನ ಬಲಿಷ್ಠ ಶ್ರೇಯಾಂಕದ ಬಲದೊಂದಿಗೆ ನೇರ ಪ್ರವೇಶ ಪಡೆದಿದೆ.
ಸೌತ್ ಆಫ್ರಿಕಾ: ಈ ತಂಡವು ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದರ ಜೊತೆಗೆ 2027ರ ವಿಶ್ವಕಪ್‌ನ ಮುಖ್ಯ ಜಂಟಿ ಆತಿಥೇಯ ರಾಷ್ಟ್ರವಾಗಿರುವುದರಿಂದ ಆತಿಥ್ಯದ ಹಕ್ಕಿನ ಅಡಿಯಲ್ಲೂ ಸೌತ್ ಆಫ್ರಿಕಾ ನೇರ ಅರ್ಹತೆ ಪಡೆದಿದೆ.
ಪಾಕಿಸ್ತಾನ್: ಏಕದಿನ ಕ್ರಿಕೆಟ್‌ನ ಮತ್ತೊಂದು ಬಲಿಷ್ಠ ತಂಡವಾದ ಪಾಕಿಸ್ತಾನ್, ಅಗ್ರ 5 ರ ಶ್ರೇಯಾಂಕದೊಳಗಿದ್ದು 2027ರ ವಿಶ್ವಕಪ್‌ಗೆ ನೇರವಾಗಿ ಲಗ್ಗೆ ಇಟ್ಟಿದೆ.
ಶ್ರೀಲಂಕಾ: ಮಾಜಿ ವಿಶ್ವ ಚಾಂಪಿಯನ್ಸ್ ಶ್ರೀಲಂಕಾ ತಂಡವು ಇತ್ತೀಚಿನ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಶ್ರೇಯಾಂಕ ಸುಧಾರಿಸಿಕೊಂಡಿದ್ದು, 6ನೇ ಸ್ಥಾನದೊಂದಿಗೆ ಅರ್ಹತೆ ಖಚಿತಪಡಿಸಿದೆ.
ಇಂಗ್ಲೆಂಡ್: ಆಧುನಿಕ ಆಕ್ರಮಣಕಾರಿ ಕ್ರಿಕೆಟ್‌ಗೆ ಹೆಸರಾಗಿರುವ ಇಂಗ್ಲೆAಡ್, 7ನೇ ಶ್ರೇಯಾಂಕದ ಆಧಾರದ ಮೇಲೆ ವಿಶ್ವಕಪ್‌ನ ರೇಸ್‌ಗೆ ನೇರ ಎಂಟ್ರಿ ಕೊಟ್ಟಿದೆ.
ಅಫ್ಘಾನಿಸ್ತಾನ್: ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನ್ ಪಡೆ, ಬಲಿಷ್ಠ ತಂಡಗಳನ್ನು ಹಿಂದಿಕ್ಕಿ 8ನೇ ರ‍್ಯಾಂಕ್ ಪಡೆಯುವ ಮೂಲಕ ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡಿದೆ.
ಬಾಂಗ್ಲಾದೇಶ್: ಬಾಂಗ್ಲಾದೇಶ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಏಕದಿನ ಶ್ರೇಯಾಂಕದಲ್ಲಿ 9ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಾಂಗ್ಲಾದೇಶ ತಂಡ ಕೂಡ ವಿಶ್ವಕಪ್ ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ.
ಝಿಂಬಾಬ್ವೆ: ಪ್ರಸ್ತುತ ಟಾಪ್-10 ಶ್ರೇಯಾಂಕದಿAದ ಹೊರಗಿದ್ದರೂ (11ನೇ ಸ್ಥಾನ), 2027ರ ವಿಶ್ವಕಪ್‌ನ ಜಂಟಿ ಆತಿಥೇಯ ರಾಷ್ಟ್ರವಾಗಿರುವುದರಿಂದ ಆತಿಥ್ಯದ ವಿಶೇಷ ಕೋಟಾದಡಿ ಝಿಂಬಾಬ್ವೆ ನೇರ ಅರ್ಹತೆ ಪಡೆದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು