ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಹಲಸೂರಿನಲ್ಲಿ ಕರ್ನಾಟಕ ಸಂರಕ್ಷಣಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಕರ್ತವ್ಯ ಪ್ರತಿಷ್ಠಾನ” ತಂಡದ ಪ್ರಕಾಶನದಲ್ಲಿ, ಮನೋಜ್ ನಂದೀಶಪ್ಪ ಅವರ ಚೊಚ್ಚಲ ಕವನ ಸಂಕಲನ `ಮೌನದ ಸಿರಿ’ ಲೋಕಾರ್ಪಣೆಗೊಂಡಿತು. ಕರ್ತವ್ಯ ಪ್ರತಿಷ್ಠಾನ (ರಿ.) ವತಿಯಿಂದ ಪ್ರಕಟಗೊಂಡಿರುವ ಮೂರನೇ ಪುಸ್ತಕ ಈ ಕವನ ಸಂಕಲನವನ್ನು ಕನ್ನಡಾಭಿಮಾನ ಹಾಗೂ ಸಾಹಿತ್ಯಾಸಕ್ತಿಯ ಸಂಕೇತವಾಗಿ ರಾಜ್ಯೋತ್ಸವದ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.ಮುಖ್ಯ ಅತಿಥಿಗಳಾದ ರಾಮಕೃಷ್ಣಾಶ್ರಮದ ಪರಮ ಪೂಜ್ಯರು, ನಿವೃತ್ತ ಐ.ಪಿ.ಎಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ, ಕರ್ನಾಟಕ ಸಂರಕ್ಷಣಾ ಸಂಘದ ಅಧ್ಯಕ್ಷರಾದ ಶ್ರೀ ಕನ್ನಡ ಮಂಜು, ಸಾಹಿತಿಗಳಾದ ಸಮನ್ವಯ ಕಾಶಿ, ಗಂಡಸೀ ಸಧಾನಂದ, ಡಾಕ್ಟರ್ ಮಮತಾ, ಸಮಾಜ ಸೇವಕರು ಶಶಿ, ರಜನಿ ಸಂತೋಷ್ ಹಾಗೂ ಅನೇಕ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಇದು ನೆರವೇರಿತು. ಈ ಸುಂದರ ಅವಕಾಶವನ್ನು ಕಲ್ಪಿಸಿಕೊಟ್ಟು, ಕನ್ನಡ ಸಾಹಿತ್ಯ ಹಾಗೂ ಕನ್ನಡಿಗರ ಪ್ರತಿಭೆಗೆ ವೇದಿಕೆ ಒದಗಿಸಿದ ಕರ್ನಾಟಕ ಸಂರಕ್ಷಣಾ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಕನ್ನಡ ಸೋಮು ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕöÈತಿಯ ಬೆಳವಣಿಗೆಗೆ ಇಂತಹ ವೇದಿಕೆಗಳು ಮತ್ತಷ್ಟು ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮವು ಕನ್ನಡಾಭಿಮಾನದ ಸಂಭ್ರಮಕ್ಕೆ ಸಾಕ್ಷಿಯಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ತವ್ಯ ಪ್ರತಿಷ್ಠಾನದ ಸಂಸ್ಥಕ ವಿನೋದ್ ಕರ್ತವ್ಯ ಅವರು ನಮ್ಮ ಕನ್ನಡ ಉಳಿಯಬೇಕಾದರೆ ಕನ್ನಡದ ಬರಹಗಾರರು ಉಳಿಯಬೇಕು, ಆಗ ಮಾತ್ರ ನಮ್ಮ ಭಾಷೆ ಉಳಿಯುವುದು, ಯಾಕೆಂದರೆ ಕನ್ನಡ ಅಕ್ಷರಗಳು ಉಳಿದರೆ ಭಾಷೆ ಉಳಿದೀತು ಹಾಗಾಗಿ ಕನ್ನಡಿಗರು ಮತ್ತಷ್ಟು ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ನಾಡಿಗೆ ಕೊಡುಗೆ ನೀಡಿ ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸಂತೋಷ್, ಖಜಾಂಚಿ ರಕ್ವೀಬ್, ವಕೀಲರಾದ ಜಯಶ್ರೀ ರಟ್ಟಿಹಳ್ಳಿ, ಕಾರ್ಯದರ್ಶಿ ಮನೋಜ್, ರೇಣುಕಾ, ಭುವಿ, ಲಿಖಿತ್, ಭರತ್, ಪ್ರವೀಣ್, ಪ್ರೇಮ್ ಹಾಗೂ ಪವಿತ್ರ ಉಪಸ್ತಿತರಿದ್ದರು.