LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಗತವೈಭವದ ಘಮ ಹೊಂದಿರೋ 

`ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!


ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ಎದ್ದಿದೆ. ಹೈ5 ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಮತ್ತು ಆರ್‌ಡಿ ಫಿಲ್ಮ್ಸ್ ಅಂಡ್ ಮೀಡಿಯಾ ನಿರ್ಮಾಣದ ಮೈಸೂರ್ ಸ್ಟುಡಿಯೋಸ್ ಆ ಅಲೆಗೆ ಮತ್ತಷ್ಟು ಚೈತನ್ಯ ತುಂಬುವ ಭರವಸೆ ಮೂಡಿಸಿದೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್, ಮೈಸೂರು ಮಹಾರಾಜರ ಕಾಲದ ನಂಟಿರುವ ಕಥೆಯ ಕುತೂಹಲಕಾರಿ ಝಲಕ್ ಅನ್ನು ತೆರೆದಿಟ್ಟಂತಿದೆ. ಛಾಯಾಗ್ರಾಹಕರಾಗಿ ತಮ್ಮ ಕೆಲಸದ ಮೂಲಕ ಗುರುತಿಸಿಕೊಂಡು, ಮೆಚ್ಚುಗೆ ಗಳಿಸಿರುವ ಪ್ರವೀಣ್ ಎಂ. ಪ್ರಭು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.ನೂರೈವತ್ತು ವರ್ಷಗಳ ಹಿಂದೆ ಮೈಸೂರು ಮಹಾರಾಜರಿಂದ ಕುಟುಂಬವೊAದಕ್ಕೆ ಉಡುಗೊ ರೆಯಾಗಿ ಸಿಕ್ಕ ಅಪರೂಪದ ಕ್ಯಾಮೆರಾ, ಅದಕ್ಕಂ ಟಿಕೊಂಡೇ ನಾಲಕ್ಕು ತಲೆಮಾರುಗಳನ್ನು ಬಳಸಿ ಬಂದ ನೆನಪುಗಳು ಮತ್ತು ಹೊಸಾ ತಲೆಮಾರಿನ ಹತ್ತು ವರ್ಷದ ಹುಡುಗನ ಮನಸಲ್ಲಿ ಟಿಸಿಲೊಡೆಯುವ ಹಂಬಲ. ಸಾಮಾನ್ಯವಾಗಿ ಫೋಟೋಗಳ ನೆನಪುಗಳನ್ನು ಕಾಯ್ದಿಟ್ಟುಕೊಳ್ಳುತ್ತವೆ. ಅಂಥಾ ಕೆಲ ನೆನಪುಗಳು ಕೆಲ ಅಚ್ಚರಿಗಳಿಗೂ ಕಾರಣವಾಗುತ್ತವೆ. ಹಲವಾರು ತಲೆಮಾರುಗಳ ಗಟ್ಟಿ ಕಥೆಯೊಂದಿಗೆ ನಿರ್ದೇಶಕ ಪ್ರವೀಣ್ ಎಂ ಪ್ರಭು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಸವಾಲಿನ ಸಂಕೀರ್ಣ ಕಥೆಯೊಂದನ್ನು ದೃಶ್ಯರೂಪಕ್ಕಿಳಿಸಿರುವ ಸುಳಿವು ಕೊಟ್ಟಿದ್ದಾರೆ.ಈಗ್ಗೆ ಹತ್ತು ವರ್ಷದಿಂದೀಚೆಗೆ ಛಾಯಾಗ್ರಾಹಕ ನಾಗಿ ಚಿತ್ರರಂಗದ ಭಾಗವಾಗಿದ್ದವರು ಪ್ರವೀಣ್ ಎಂ ಪ್ರಭು. ಇವರು ಛಾಯಾಗ್ರಾಹಕರಾಗಿ ಕಾರ್ಯನಿರ್ವ ಹಿಸಿದ್ದ ರಂಕಲ್ ರಾಟೆ, ಕಪಾಲ, ಮತ್ಸ್ಯಗಂಧ ಮುಂತಾದ ಚಿತ್ರಗಳು ಸಿನಿಮಾಟೋಗ್ರಫಿ ವಿಚಾರದಲ್ಲಿ ಗಮನ ಸೆಳೆದಿದ್ದವು. ಮೆಚ್ಚುಗೆಗೂ ಪಾತ್ರವಾಗಿದ್ದವು. ಈ ನಡುವೆ ನಿರ್ದೇಶಕರಾಗೋ ಇರಾದೆಯಿಂದ ಎರಡು ಶಾರ್ಟ್ ಫಿಲಂಗಳನ್ನೂ ಪ್ರವೀಣ್ ನಿರ್ದೇಶನ ಮಾಡಿದ್ದರು. ಅದರಲ್ಲೊಂದಕ್ಕೆ ಅತ್ಯುತ್ತಮ ಕಥೆ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಆ ಕಥೆಯನ್ನೇ ಹಿಗ್ಗಲಿಸಿ ಮೈಸೂರ್ ಸ್ಟುಡಿಯೋ ಚಿತ್ರವಾಗಿಸಿದ್ದಾರಂತೆ.ಸದ್ಯಕ್ಕೆ ಈ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಇದೀಗ ಸಂಗೀತ ಸಂಬಂಧಿ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಹೈ5 ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಮತ್ತು ಆರ್‌ಡಿ ಫಿಲ್ಮ್ಸ್ ಅಂಡ್ ಮೀಡಿಯಾ ಬ್ಯಾನರ್‌ನಡಿಯಲ್ಲಿ ಪ್ರವೀಣ್ ಕವಿತಾ, ಸತ್ಯ ಶ್ರೀನಿವಾಸನ್, ದಿವಾಕರ್ ದಯಾಳ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಎಂ. ಪ್ರಭು ಸಹನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ರಿಷಿಕೇಶ್, ಧನಂಜಯ್, ಯುದಿತ್ ಶೆಟ್ಟಿ, ದಿವ್ಯಶ್ರೀ, ಗೌರವ್ ಮಹಾಂತೇಶ್ ಹಿರೇಮಠ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್, ಡ್ಯಾನಿ ಕಣಿಕರಾಜ್ ಮುಂತಾದವರ ತಾರಾಗಣವಿರುವ ಈ ಚಿತ್ರಕ್ಕೆ ಲಿಂಗರಾಜ್ ಇತಿಹಾಸ್, ಅವಿನಾಶ್ ಕಳಸ, ಪ್ರವೀಣ್ ಎಂ. ಪ್ರಭು ಸಂಭಾಷಣೆ ಮತ್ತು ಅಜಿತ್ ಕೇಶವ ಸಾಹಿತ್ಯ, ಕೆ. ಯೇಸು ಸಂಕಲನವಿದೆ. ಎಲ್ಟು ಮುತ್ತ, ಹುಬ್ಳಿ ಹಂಟರ್ಸ್ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರಸನ್ನ ಕೇಶವ ಕೆ.ಎಸ್ ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಖುದ್ದು ಪ್ರವೀಣ್ ಎಂ. ಪ್ರಭು ಅವರೇ ಛಾಯಾಗ್ರಹಣದ ಜವಾಬ್ದಾರಿ  ವಹಿಸಿಕೊಂಡಿದ್ದಾರೆ. ವಿಕ್ಕಿ, ರಾಮ್, ಡೆನಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಸಿನಿಮಾದ ಮತ್ತಷ್ಟು ಮಾಹಿತಿ ಪ್ರೇಕ್ಷಕರ ಮುಂದೆ ಬರಲಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST