LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

MR ಜಾಕ್ ಚಿತ್ರದ `ಆರಂಭ ವಸಂತ ಆರಂಭ' ಹಾಡು ಬಿಡುಗಡೆ


ಗುರುನಂದನ್ ಹಾಗೂ  ತಪಸ್ವಿನಿ ಪೂಣಚ್ಛ ಅಭಿನಯದ `ಒಖ ಜಾಕ್’ ಚಿತ್ರದ ಎರಡನೇ ಹಾಡು `ಆರಂಭ ವಸಂತ ಆರಂಭ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಶೀರ್ಷಿಕೆ ಗೀತೆಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದೆ.  ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಜಸ್ಕರಣ್ ಸಿಂಗ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ.ಹಲವು ವರ್ಷಗಳ ಹಿಂದೆಯೇ ಈ ಹಾಡನ್ನು ಬರೆದಿದ್ದೆ. ಚಿಕ್ಕಂದಿನಿಂದಲೂ ಕಿರಣ್ ರವೀಂದ್ರನಾಥ್ ಅವರ ಸಂಗೀತವನ್ನು ಕೇಳುತ್ತಾ ಬೆಳೆದ ನನಗೆ, ಅವರೊಂದಿಗೆ ಕೆಲಸ ಮಾಡುವ ಅವಕಾಶ `ಒಖ ಜಾಕ್’ ಚಿತ್ರದ ಮೂಲಕ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಸಾಹಿತಿ ಪ್ರಮೋದ್ ಮರವಂತೆ ಹೇಳಿದರು.ನಿರ್ದೇಶಕ ಸುಮಂತ್  ಮಾತನಾಡಿ, `ಕಥೆ ಹೇಳಿದ ತಕ್ಷಣವೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡ ಗುರುನಂದನ್ ಅವರಿಗೆ ಧನ್ಯವಾದಗಳು. ಛಾಯಾಗ್ರಾಹಕ ಶಿವಸೇನ, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಸೇರಿದಂತೆ ಇಡೀ ತಾಂತ್ರಿಕ ತಂಡದ ಸಹಕಾರದಿಂದ ನನ್ನ ಕಲ್ಪನೆ ತೆರೆಮೇಲೆ ಮೂಡಿಬಂದಿದೆ. ಎಲ್ಲ ಕಲಾವಿದರ ಪರಿಶ್ರಮ ಚಿತ್ರಕ್ಕೆ ಬಲ ತುಂಬಿದೆ’ ಎಂದರು.ನಾಯಕ ಗುರುನಂದನ್ ಮಾತನಾಡಿ, ಮೂಡಿಗೆರೆ ಸಮೀಪದ ಕಳಸ ಬಳಿಯ ಮೈದಾಡಿ ಗುಡ್ಡದಲ್ಲಿ ಮೂರು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಿದ್ದೇವೆ. ಹವಾಮಾನದ ಸವಾಲುಗಳ ನಡುವೆಯೂ ಇಡೀ ತಂಡ ಶ್ರಮಿಸಿದೆ.  ಟ್ರೇಲರ್ ಹಾಗೂ ಇನ್ನಷ್ಟು ಹಾಡುಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದರು.ನಾಯಕಿ ತಪಸ್ವಿನಿ ಪೂಣಚ್ಛ ಮಾತನಾಡಿ, `ಚಿತ್ರದ ಟೀಸರ್ ಹಾಗೂ ಮೊದಲ ಶೀರ್ಷಿಕೆ ಗೀತೆಗೆ ಪ್ರೇಕ್ಷಕರು ಮತ್ತು ಮಾಧ್ಯಮದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ನಂದಿನಿ ಎಂಬ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಂಪ್ರದಾಯಗಳನ್ನು ಪಾಲಿಸುವ ಕುಟುಂಬದಿಂದ ಬಂದಿರುವ ಶಿಕ್ಷಕಿಯ ಪಾತ್ರ ನನ್ನದು’ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನಕ್ಕೆ ಚಾಲನೆಆದಿವಾಸಿಗಳ ಕಲ್ಯಾಣಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ರಷರ್ ಮಂಜೂರಾತಿ ರದ್ದುಪಡಿಸಲು ಒತ್ತಾಯಹಾಲಿ ಚಾಂಪಿಯನ್ಸ್ ಆರ್‌ಸಿಬಿ ಹಿಂದಿಕ್ಕಿದ ಮುಂಬೈ- ಈಗ ವಿಶ್ವದ ಶ್ರೀಮಂತ ಫ್ರಾಂಚೈಸಿ!ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊಕನ್ನಡ ರಾಜ್ಯೋತ್ಸವ-ನಮ್ಮ ಹೆಮ್ಮೆಯ ಹಬ್ಬ -ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳುMR ಜಾಕ್ ಚಿತ್ರದ `ಆರಂಭ ವಸಂತ ಆರಂಭ' ಹಾಡು ಬಿಡುಗಡೆಇಂದಿನಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್  ಸಂಭ್ರಮ!ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಭರ್ಜರಿ ಗೆಲುವು: ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ