LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News | Sports News

ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊ


ಫುಟ್‌ಬಾಲ್ ಲೋಕದ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ನಡುವಿನ ಪೈಪೋಟಿಗೆ ಈಗ ಹೊಸದೊಂದು ಅಧ್ಯಾಯ ಸೇರ್ಪಡೆಯಾಗಿದೆ. ಫ್ರಾನ್ಸ್ ಫುಟ್‌ಬಾಲ್ ಇತ್ತೀಚೆಗೆ ಆಯೋಜಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ'ಓರ್ ಪ್ರಶಸ್ತಿಗಾಗಿ ನಡೆದ ಜಾಗತಿಕ ಅಭಿಮಾನಿಗಳ ಮತದಾನದಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ಜಯ ಸಾಧಿಸಿದ್ದಾರೆ. ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬ ದಶಕಗಳ ವಿವಾದಕ್ಕೆ ಅಭಿಮಾನಿಗಳು ಕೊನೆಗೂ ತೀರ್ಪು ನೀಡಿದ್ದಾರೆ. ಲಿಯೋನೆಲ್ ಮೆಸ್ಸಿ ವಿರುದ್ಧದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಭರ್ಜರಿ ಜಯ ಸಾಧಿಸುವ ಮೂಲಕ ಚೊಚ್ಚಲ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿಓರ್ (Ballon d Or of All Time  B.O.A.T.) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ಯಾಲನ್ ಡಿಓರ್ ಪ್ರಶಸ್ತಿಯ 70ನೇ ವರ್ಷಾಚರಣೆಯ ನೆನಪಿಗಾಗಿ ಫ್ರಾನ್ಸ್ ಫುಟ್‌ಬಾಲ್ ಮತ್ತು Uಇಈಂ ಜಂಟಿಯಾಗಿ ಈ ವಿಶೇಷ ಜಾಗತಿಕ ಡಿಜಿಟಲ್ ಮತದಾನವನ್ನು ಆಯೋಜಿಸಿದ್ದವು. ಇತಿಹಾಸದಲ್ಲೇ ಅತ್ಯಂತ ವೈಭವಯುತ ಪ್ರದರ್ಶನ ನೀಡಿದ 10 ದಿಗ್ಗಜ ಆಟಗಾರರ ಶಾರ್ಟ್ಲಿಸ್ಟ್ನಲ್ಲಿ, ಅಭಿಮಾನಿಗಳು ರೊನಾಲ್ಡೊ ಅವರ ಸಾಂಪ್ರದಾಯಿಕ ಸೀಸನ್ ಅನ್ನು ಜಗತ್ತಿನ ಶ್ರೇಷ್ಠ ಅಭಿಯಾನ ಎಂದು ಆರಿಸಿದ್ದಾರೆ.ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದ ಮೊದಲ ಬ್ಯಾಲನ್ ಡಿಓರ್ ಗೆದ್ದಿದ್ದ ಮ್ಯಾಂಚೆಸ್ಟರ್ ಯುನೈಟೆಡ್‌ನ 2007-08ರ ಅದ್ಭುತ ಸೀಸನ್‌ಗಾಗಿ ಅತಿ ಹೆಚ್ಚು ಮತಗಳನ್ನು ಪಡೆದು ಮೊದಲ ಸ್ಥಾನಕ್ಕೇರಿದ್ದಾರೆ. ಆ ಸೀಸನ್‌ನಲ್ಲಿ ರೊನಾಲ್ಡೊ ಒಟ್ಟು 42 ಗೋಲುಗಳನ್ನು ಬಾರಿಸಿದ್ದಲ್ಲದೆ, ಕ್ಲಬ್‌ಗೆ ಪ್ರೀಮಿಯರ್ ಲೀಗ್ ಮತ್ತು Uಇಈಂ ಚಾಂಪಿಯನ್ಸ್ ಲೀಗ್ ಎರಡೂ ಟ್ರೋಫಿಗಳನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮತ್ತೊಂದೆಡೆ, ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲೆಯ 91 ಗೋಲುಗಳನ್ನು ಹೊಡೆದಿದ್ದ 2012ರ ಅಭಿಯಾನಕ್ಕಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂದರೆ ಕ್ರಿಸ್ಟಿಯಾನೊ ರೊನಾಲ್ಡೊ 2008ರ ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿನ ಪರಾಕ್ರಮಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಈ ಮೂಲಕ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿಓರ್ ಪ್ರಶಸ್ತಿಗೆ ರೊನಾಲ್ಡೊ ಅವರನ್ನು ಆಯ್ಕೆ ಮಾಡಿದ್ದಾರೆ.ಪ್ರಶಸ್ತಿಯ ರೋಚಕ ನಿಯಮಗಳು: ಪತ್ರಕರ್ತರ ಸಮಿತಿಯು ನಿರ್ಧರಿಸುವ ಸಾಂಪ್ರದಾಯಿಕ ಬ್ಯಾಲನ್ ಡಿಓರ್ ಪ್ರಶಸ್ತಿಯಂತಲ್ಲದೆ, ಈ B.O.A.T. ಪ್ರಶಸ್ತಿಯನ್ನು ಸಂಪೂರ್ಣವಾಗಿ ಜಾಗತಿಕ ಅಭಿಮಾನಿಗಳ ಡಿಜಿಟಲ್ ಮತಗಳ ಆಧಾರದ ಮೇಲೆ ನೀಡಲಾಗಿದೆ. ಇತಿಹಾಸದಲ್ಲಿ ಕನಿಷ್ಠ 2 ಅಥವಾ ಅದಕ್ಕಿಂತ ಹೆಚ್ಚು ಬಾರಿ ಬ್ಯಾಲನ್ ಡಿಓರ್ ಪ್ರಶಸ್ತಿ ಗೆದ್ದ ಆಟಗಾರರನ್ನು ಮಾತ್ರ ಈ ಸ್ಪರ್ಧೆಗೆ ಶಾರ್ಟ್ಲಿಸ್ಟ್ ಮಾಡಲಾಗಿತ್ತು. (ಉದಾಹರಣೆಗೆ: ರೊನಾಲ್ಡೊ, ಮೆಸ್ಸಿ, ರೊನಾಲ್ಡೊ ನಝರಿಯೋ, ಜೋಹಾನ್ ಕ್ರೆöÊಫ್ ಮುಂತಾದ 10 ದೈತ್ಯ ಆಟಗಾರರು). ಈ ವೋಟಿಂಗ್‌ನಲ್ಲಿ ಭಾಗವಹಿಸಲು ಅಭಿಮಾನಿಗಳಿಗೆ ಪ್ರತಿ ಮತಕ್ಕೆ 1 (ಸುಮಾರು 90 ರೂಪಾಯಿ) ಶುಲ್ಕ ನಿಗದಿಪಡಿಸಲಾಗಿತ್ತು. ನೆಚ್ಚಿನ ಆಟಗಾರನನ್ನು ಗೆಲ್ಲಿಸಲು ಸಾವಿರಾರು ಅಭಿಮಾನಿಗಳು ಹಲವು ಬಾರಿ ಹಣ ಪಾವತಿಸಿ ಮತ ಚಲಾಯಿಸಿದ್ದಾರೆ! ಈ ಸ್ಪರ್ಧೆಗೆ ಯಾವುದೇ ಭೌತಿಕ ಟ್ರೋಫಿ ಇರುವುದಿಲ್ಲ. ಆದರೆ ವೋಟ್ ಮಾಡಿದ ಅದೃಷ್ಟಶಾಲಿ ಅಭಿಮಾನಿಗಳಿಗೆ 2027ರ ಬ್ಯಾಲನ್ ಡಿಓರ್ ಪ್ರಶಸ್ತಿ ಪ್ರದಾನ ಸಮಾರಂಭದ 2 ಉಚಿತ ಟಿಕೆಟ್‌ಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.ಒಟ್ಟಿನಲ್ಲಿ, ಮೈದಾನದ ಒಳಗೆ ಮತ್ತು ಹೊರಗೆ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಪೈಪೋಟಿ ಎಂದಿಗೂ ಮುಗಿಯದ ಒಂದು ಅದ್ಭುತ ಕಾವ್ಯ. ಪತ್ರಕರ್ತರು ಮತ್ತು ಕ್ರೀಡಾ ತಜ್ಞರ ದೃಷ್ಟಿಯಲ್ಲಿ ಮೆಸ್ಸಿ ಹೆಚ್ಚು ಪ್ರಶಸ್ತಿಗಳೊಂದಿಗೆ ಮುಂದಿರಬಹುದು. ಆದರೆ, ತಮ್ಮ ನೆಚ್ಚಿನ ಆಟಗಾರನಿಗಾಗಿ ಹಣ ಪಾವತಿಸಿ ಮತ ಚಲಾಯಿಸುವ ಹಂತಕ್ಕೆ ಬಂದು ನಿಂತಾಗ, ಕ್ರಿಸ್ಟಿಯಾನೊ ರೊನಾಲ್ಡೊ ಹೊಂದಿರುವ ಜಾಗತಿಕ ಅಭಿಮಾನಿ ಬಳಗದ ಶಕ್ತಿ ಮತ್ತು ಕ್ರೇಝ್ ಎಂಥದ್ದು ಎಂಬುದನ್ನು ಈ B.O.A.T ಪ್ರಶಸ್ತಿ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನಕ್ಕೆ ಚಾಲನೆಆದಿವಾಸಿಗಳ ಕಲ್ಯಾಣಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ರಷರ್ ಮಂಜೂರಾತಿ ರದ್ದುಪಡಿಸಲು ಒತ್ತಾಯಹಾಲಿ ಚಾಂಪಿಯನ್ಸ್ ಆರ್‌ಸಿಬಿ ಹಿಂದಿಕ್ಕಿದ ಮುಂಬೈ- ಈಗ ವಿಶ್ವದ ಶ್ರೀಮಂತ ಫ್ರಾಂಚೈಸಿ!ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊಕನ್ನಡ ರಾಜ್ಯೋತ್ಸವ-ನಮ್ಮ ಹೆಮ್ಮೆಯ ಹಬ್ಬ -ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳುMR ಜಾಕ್ ಚಿತ್ರದ `ಆರಂಭ ವಸಂತ ಆರಂಭ' ಹಾಡು ಬಿಡುಗಡೆಇಂದಿನಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್  ಸಂಭ್ರಮ!ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಭರ್ಜರಿ ಗೆಲುವು: ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ