ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ರಾಜ್ಯೋತ್ಸವವು ಹೆಮ್ಮೆ, ಸ್ವಾಭಿಮಾನ ಮತ್ತು ನಾಡಿನ ಮೇಲಿನ ಪ್ರೀತಿಯ ಸಂಕೇತವಾಗಿದೆ. ಪ್ರತಿವರ್ಷ ನವೆಂಬರ್ 1 ರಂದು ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿAದ ಆಚರಿಸಲಾಗುತ್ತದೆ. ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಕನ್ನಡಿಗರ ಏಕತೆಯನ್ನು ಸ್ಮರಿಸುವುದರಿಂದ ಈ ದಿನವು ಮಹತ್ವದ್ದಾಗಿದೆ. ಈ ಲೇಖನದಲ್ಲಿ ಕನ್ನಡ ಭಾಷೆಯ ಶ್ರೀಮಂತ ಪರಂಪರೆ ಮತ್ತು ಪ್ರಾಚೀನತೆ, ಕರ್ನಾಟಕದ ರಚನೆ ಹಾಗೂ ರಾಜ್ಯೋತ್ಸವದ ಆಚರಣೆಗಳ ಕುರಿತು ತಿಳಿದುಕೊಳ್ಳೋಣ.ಪ್ರಾಚೀನ ಭಾಷೆ ಕನ್ನಡ: ಐತಿಹಾಸಿಕ ಸಾಕ್ಷ್ಯಗಳುಕನ್ನಡವು ಭಾರತದ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಎರಡು ಸಾವಿರ ವರ್ಷಗಳಿಗೂ ಮೀರಿದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಕನ್ನಡ ಭಾಷೆಯ ಮೂಲಗಳು ಮತ್ತು ಕನ್ನಡ ಮಾತನಾಡುವ ಸಾಂಸ್ಕೃತಿಕ ಪ್ರದೇಶವು ಇಂದು ಲಭ್ಯವಿರುವ ಅತ್ಯಂತ ಹಳೆಯ ಪೂರ್ಣ ಪ್ರಮಾಣದ ಕನ್ನಡ ಶಾಸನಕ್ಕಿಂತಲೂ ಬಹಳ ಹಿಂದಿನವು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಕರ್ನಾಟಕದ ಪ್ರಾಚೀನ ದಾಖಲೆಗಳು ಹಾಗೂ ಕ್ರಿ.ಶ. ಸುಮಾರು 5ನೇ ಶತಮಾನದ ಪ್ರಸಿದ್ಧ ಹಲ್ಮಿಡಿ ಶಾಸನ ಸೇರಿದಂತೆ ಪುರಾತತ್ವ ಮತ್ತು ಶಾಸನಶಾಸ್ತ್ರೀಯ ಸಾಕ್ಷ್ಯಗಳು, ಆಡಳಿತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಷೆಯಾಗಿ ಕನ್ನಡವು ದೀರ್ಘ ಕಾಲದವರೆಗೆ ವಿಕಸನಗೊಂಡಿರುವುದನ್ನು ದೃಢಪಡಿಸುತ್ತವೆ.
1. ಬ್ರಹ್ಮಗಿರಿ ಶಾಸನ-ಅಂದಾಜು ಕ್ರಿ.ಪೂ. 3ನೇ ಶತಮಾನ
ಬ್ರಹ್ಮಗಿರಿ ಶಾಸನಗಳು ಮೌರ್ಯ ಚಕ್ರವರ್ತಿ ಅಶೋಕನು ಕ್ರಿ.ಪೂ. 3ನೇ ಶತಮಾನದಲ್ಲಿ ಕೆತ್ತಿಸಿದ ಐತಿಹಾಸಿಕ ಶಿಲಾಶಾಸನಗಳಾಗಿವೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಉತ್ತರದ ತಳಭಾಗದಲ್ಲಿರುವ ಈ ಸ್ಥಳವು ವಿಶಾಲ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯನ್ನು ಸೂಚಿಸುತ್ತದೆ.
ಈ ಶಾಸನಗಳನ್ನು ಪುರಾತತ್ವ ಶಾಸ್ತçಜ್ಞ ಬೆಂಜಮಿನ್ ಎಲ್ ರೈಸ್ ಅವರು 1891ರಲ್ಲಿ ಪತ್ತೆ ಹಚ್ಚಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ವಹಣೆಯಲ್ಲಿರುವ ರಕ್ಷಣಾತ್ಮಕ ಕಲ್ಲಿನ ಕಟ್ಟಡದೊಳಗೆ ಈಗ ಸಂರಕ್ಷಿಸಲಾಗಿರುವ ದೊಡ್ಡ ಗ್ರಾನೈಟ್ ಬಂಡೆಯ ಮೇಲೆ ಈ ಶಾಸನಗಳನ್ನು ಕೆತ್ತಲಾಗಿದೆ. ಶಾಸನವು ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿದೆ.
2. ಹಲ್ಮಿಡಿ ಶಾಸನ- ಅಂದಾಜು ಕ್ರಿ.ಶ. 5ನೇ ಶತಮಾನ
ಹಲ್ಮಿಡಿ ಶಾಸನವು ಇದುವರೆಗೆ ತಿಳಿದಿರುವ ಅತ್ಯಂತ ಪ್ರಾಚೀನ ಪೂರ್ಣ ಪ್ರಮಾಣದ ಕನ್ನಡ ಭಾಷೆಯ ಶಾಸನವೆಂದು ಪ್ರಸಿದ್ಧವಾಗಿದೆ. ಮರಳುಗಲ್ಲಿನ ಕಂಬ ಅಥವಾ ಶಿಲಾಫಲಕದ ಮೇಲೆ ಕೆತ್ತಲಾಗಿರುವ ಈ ಶಾಸನವು ಕನ್ನಡ ಲಿಪಿ ಮತ್ತು ಆಡಳಿತದ ವಿಕಾಸಕ್ಕೆ ಸಂಬAಧಿಸಿದ ಪ್ರಮುಖ ಐತಿಹಾಸಿಕ ಪುರಾವೆಯಾಗಿದೆ. ಕರ್ನಾಟಕದ ಹಾಸನ ಜಿಲ್ಲೆಯ ಹಲ್ಮಿಡಿ ಎಂಬ ಸಣ್ಣ ಗ್ರಾಮದಲ್ಲಿ ಈ ಶಾಸನ ಪತ್ತೆಯಾಯಿತು. ಮೈಸೂರು ಸಂಸ್ಥಾನದ ಪುರಾತತ್ವ ನಿರ್ದೇಶಕರಾಗಿದ್ದ ಡಾ. ಎಂ.ಎಚ್. ಕೃಷ್ಣ ಅವರು ಇದನ್ನು 1936ರಲ್ಲಿ ಪ್ರಕಟಿಸಿದರು. ಈ ಶಾಸನವು ಕದಂಬ ವಂಶದ ಕಾಕುಸ್ಥವರ್ಮ ಅಥವಾ ಹರಿವರ್ಮನ ಆಳ್ವಿಕೆಯ ಕಾಲಕ್ಕೆ ಸಂಬAಧಿಸಿದೆ.
ವಿಸ್ತೃತ ಶಾಸನದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ತೋರಿಸುವ ಅತ್ಯಂತ ಪ್ರಮುಖ ಪ್ರಾಚೀನ ದಾಖಲೆಗಳಲ್ಲಿ ಇದೂ ಒಂದಾಗಿದೆ. ಇದರಲ್ಲಿನ ವಿಷಯವು ಭೂದಾನದ ದಾಖಲೆಯನ್ನು ಒಳಗೊಂಡಿದ್ದು, ಅಧಿಕೃತ ಆಡಳಿತಾತ್ಮಕ ಮತ್ತು ಸ್ಮರಣಾರ್ಥ ಉದ್ದೇಶಗಳಿಗಾಗಿ ಕನ್ನಡವನ್ನು ಬಳಸಲಾಗುತ್ತಿತ್ತು ಎಂಬುದನ್ನು ತೋರಿಸುತ್ತದೆ. ಲಿಖಿತ ಕನ್ನಡದ ಬೆಳವಣಿಗೆ ಯನ್ನು ಅಧ್ಯಯನ ಮಾಡಲು ಈ ಶಾಸನವು ಮೂಲ ಪುರಾತತ್ವ ಆಕರವಾಗಿದೆ.
3. ಕವಿರಾಜಮಾರ್ಗ- ಅಂದಾಜು ಕ್ರಿ.ಶ. 9ನೇ ಶತಮಾನ
ಸುಮಾರು ಕ್ರಿ.ಶ. 850ರಲ್ಲಿ ರಚಿಸಲಾದ ಕವಿರಾಜಮಾರ್ಗವು ಕನ್ನಡ ಭಾಷೆಯಲ್ಲಿ ಕಾವ್ಯಶಾಸ್ತç, ಅಲಂಕಾರಶಾಸ್ತç ಮತ್ತು ವ್ಯಾಕರಣದ ಕುರಿತು ಲಭ್ಯವಿರುವ ಅತ್ಯಂತ ಪ್ರಾಚೀನ ಸಾಹಿತ್ಯ ಕೃತಿಯಾಗಿದೆ. ‘ಕವಿಗಳ ರಾಜಮಾರ್ಗ’ ಎಂಬುದು ಇದರ ಅಕ್ಷರಶಃ ಅರ್ಥ. ರಾಷ್ಟçಕೂಟ ರಾಜ ನೃಪತುಂಗ ಅಮೋಘವರ್ಷನೊಂದಿಗೆ ಸಂಬAಧ ಹೊಂದಿರುವ ಮತ್ತು ಸಾಮಾನ್ಯವಾಗಿ 9ನೇ ಶತಮಾನಕ್ಕೆ ಸೇರಿದೆ ಎಂದು ಪರಿಗಣಿಸಲಾದ ಕವಿರಾಜಮಾರ್ಗವು ಕಾವ್ಯಶಾಸ್ತç ಹಾಗೂ ಸಾಹಿತ್ಯ ಸಂಪ್ರದಾಯಗಳ ಕುರಿತಾದ ಕನ್ನಡದ ಅತ್ಯಂತ ಪ್ರಾಚೀನ ಪ್ರಮುಖ ಕೃತಿಯಾಗಿದೆ. ಕಾವೇರಿ ಮತ್ತು ಗೋದಾವರಿ ನದಿಗಳ ನಡುವಿನ ಕನ್ನಡ ಭಾಷಿಕ ಸಾಹಿತ್ಯ ಪ್ರದೇಶವನ್ನು ಇದು ಉಲ್ಲೇಖಿಸುತ್ತದೆ.
ಕರ್ನಾಟಕ ಎಂಬ ಹೆಸರಿನ ವಿಕಾಸ
“ಕರ್ನಾಟಕ” ಎಂಬ ಹೆಸರು ಎತ್ತರದ ಪ್ರಸ್ಥಭೂಮಿ ಪ್ರದೇಶವನ್ನು ಸೂಚಿಸುವ ಪ್ರಾಚೀನ ಭೌಗೋಳಿಕ ವಿವರಣೆಗಳಿಂದ ವಿಕಸನಗೊಂಡು, ಆಧುನಿಕ ಭಾಷಾವಾರು ರಾಜ್ಯದ ಅಧಿಕೃತ ಹೆಸರಾಯಿತು.
ಕರುನಾಡು: ಹೆಚ್ಚು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಭಾಷಾ ಶಾಸ್ತಿçÃಯ ಮೂಲದ ಪ್ರಕಾರ ‘ಕರು’ (ಎತ್ತರದ ಅಥವಾ ಕಪ್ಪು) ಮತ್ತು ‘ನಾಡು’ (ಭೂಮಿ ಅಥವಾ ಪ್ರದೇಶ) ಎಂಬ ಕನ್ನಡ ಪದಗಳಿಂದ ಈ ಹೆಸರು ಬಂದಿದೆ. ಇದರ ಅರ್ಥ ‘ಎತ್ತರದ ನಾಡು’ (ದಕ್ಷಿಣ ಪ್ರಸ್ಥಭೂಮಿಯನ್ನು ಸೂಚಿಸುತ್ತದೆ) ಅಥವಾ ‘ಕಪ್ಪುಮಣ್ಣಿನ ನಾಡು’ (ಉತ್ತರ ಕರ್ನಾಟಕದ ಹತ್ತಿ ಬೆಳೆಯುವ ಕಪ್ಪುಮಣ್ಣನ್ನು ಸೂಚಿಸುತ್ತದೆ) ಎಂಬುದಾಗಿದೆ.
ಇತರ ಸಿದ್ಧಾಂತಗಳು: ಜನಪದ ಅಥವಾ ಸಾಹಿತ್ಯಿಕ ವ್ಯುತ್ಪತ್ತಿಗಳಲ್ಲಿ ‘ಕರ್ಣಾಟ’ ಎಂದರೆ ‘ಕಿವಿಗೆ ಇಂಪು ನೀಡುವುದು’ ಎಂಬ ಅರ್ಥವನ್ನೂ ಸೂಚಿಸಲಾಗುತ್ತದೆ. ಇದನ್ನು ಶಾಸ್ತಿçÃಯ ಸಂಗೀತ ಸಂಪ್ರದಾಯಗಳೊAದಿಗೆ ಸಂಪರ್ಕಿಸಲಾಗುತ್ತದೆ. ‘ಕಬ್ಬುನಾಡು’ (ಕಬ್ಬು ಬೆಳೆಯುವ ನಾಡು) ಎಂಬಅಭಿಪ್ರಾಯವೂಇದೆ.
ಪ್ರಾಚೀನ ಮತ್ತು ಮಧ್ಯಕಾಲೀನ ಉಲ್ಲೇಖಗಳು
ಮಹಾಕಾವ್ಯಗಳು ಮತ್ತು ಪ್ರಾಚೀನ ಗ್ರಂಥಗಳು: ಮಹಾಭಾರತ ಸೇರಿದಂತೆ ಪ್ರಾಚೀನ ಸಂಸ್ಕೃತ ಮತ್ತು ಮಹಾಕಾವ್ಯ ಸಾಹಿತ್ಯದಲ್ಲಿ ‘ಕರ್ಣಾಟ ದೇಶ’ ಅಥವಾ ಅದಕ್ಕೆ ಸಮಾನವಾದ ಪದಗಳ ಉಲ್ಲೇಖಗಳಿವೆ. 6ನೇ ಶತಮಾನದ ಖಗೋಳಶಾಸ್ತçಜ್ಞ ವರಾಹಮಿಹಿರನ ‘ಬೃಹತ್ ಸಂಹಿತೆ’ಯಲ್ಲಿಯೂ ಇಂತಹ ಉಲ್ಲೇಖ ಕಂಡು ಬರುತ್ತದೆ.
ರಾಜವಂಶಗಳ ಶಾಸನಗಳು: ಕದಂಬರು, ಚಾಲುಕ್ಯರು ಮತ್ತು ರಾಷ್ಟçಕೂಟರಂತಹ ಮಧ್ಯಕಾಲೀನ ರಾಜವಂಶಗಳು 5ನೇ ಶತಮಾನದಿಂದ ತಮ್ಮ ಶಾಸನಗಳಲ್ಲಿ ಈ ಹೆಸರಿನ ಪ್ರಾದೇಶಿಕ ರೂಪಗಳನ್ನು ಬಳಸಿದವು. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯವನ್ನು ಸಮಕಾಲೀನ ಗ್ರಂಥಗಳಲ್ಲಿ ‘ಕರ್ನಾಟಕ ಸಾಮ್ರಾಜ್ಯ’ ಎಂದು ಉಲ್ಲೇಖಿಸಲಾಗಿದೆ.
ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಇತಿಹಾಸ:
ಭಾರತ ಸ್ವಾತಂತ್ರ‍್ಯದ ನಂತರ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತಾತ್ಮಕ ಪ್ರದೇಶಗಳಲ್ಲಿ ಹರಡಿಕೊಂಡಿದ್ದರು. ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಒಂದೇ ರಾಜ್ಯವನ್ನು ರಚಿಸಬೇಕೆಂಬುದು ಕನ್ನಡಿಗರ ಬಹುಕಾಲದ ಆಶಯವಾಗಿತ್ತು. 1905ರಲ್ಲಿ ಕರ್ನಾಟಕ ಕುಲ ಪುರೋಹಿತರೆಂದು ಪ್ರಸಿದ್ಧರಾದ ಆಲೂರು ವೆಂಕಟರಾಯರು ಎಲ್ಲ ಕನ್ನಡಿಗರನ್ನು ಒಂದೇ ರಾಜ್ಯದಡಿ ತರಲು ಕರ್ನಾಟಕ ಏಕೀಕರಣ ಚಳವಳಿಯನ್ನು ಆರಂಭಿಸಿದರು. ‘ಕರ್ನಾಟಕ ಗತವೈಭವ’ ಕೃತಿಯ ಮೂಲಕ ಅವರು ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು. ಅವರೊಂದಿಗೆ ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕೆಂಗಲ್ ಹನುಮಂತಯ್ಯ ಮುಂತಾದ ಗಣ್ಯರೂ ಈ ಉದ್ದೇಶಕ್ಕಾಗಿ ಶ್ರಮಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಚದುರಿಹೋಗಿದ್ದ ಪ್ರದೇಶಗಳನ್ನು ಒಗ್ಗೂಡಿಸುವುದೇ ಈ ಚಳವಳಿಯ ಆಶಯವಾಗಿತ್ತು. ಇದರ ಫಲವಾಗಿ, ರಾಜ್ಯಗಳ ಪುನರ್‌ಸಂಘಟನಾ ಕಾಯ್ದೆಯಡಿ 1956ರ ನವೆಂಬರ್ 1ರಂದು ಮದ್ರಾಸ್, ಬಾಂಬೆ, ಹೈದರಾಬಾದ್ ಮತ್ತು ಮೈಸೂರು ರಾಜ್ಯಗಳಲ್ಲಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ‘ಮೈಸೂರು ರಾಜ್ಯ’ವನ್ನು ರಚಿಸಲಾಯಿತು. ಎಸ್. ನಿಜಲಿಂಗಪ್ಪ ಅವರು ಏಕೀಕೃತ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು.
‘ಮೈಸೂರು ರಾಜ್ಯ’ ಎಂಬ ಹೆಸರು ಹಳೆಯ ಮೈಸೂರು ಪ್ರದೇಶಕ್ಕೆ ಮಾತ್ರ ಸೀಮಿತವಾದಂತೆ ಕಂಡಿತು. ಆದ್ದರಿಂದ ಎಲ್ಲಾ ಪ್ರದೇಶಗಳನ್ನು ಒಳಗೊಳ್ಳುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜಅರಸು ಅವರ ಆಡಳಿತಾವಧಿಯಲ್ಲಿ 1973ರ ನವೆಂಬರ್ 1ರಂದು ರಾಜ್ಯಕ್ಕೆ ಅಧಿಕೃತವಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿAದ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಭುವನೇಶ್ವರಿ ದೇವಿ ಮತು ್ತಕರ್ನಾಟಕ ರಾಜ್ಯೋತ್ಸವದ ಸಾಂಸ್ಕೃತಿಕ ಸಂಬAಧ: ಭುವನೇಶ್ವರಿ ದೇವಿಯನ್ನು ಕನ್ನಡ ಮಾತೆ ಅಥವಾ ಕನ್ನಡಾಂಬೆ ಎಂದು ಪೂಜಿಸಲಾಗುತ್ತದೆ ಮತ್ತು ಕರ್ನಾಟಕ ರಾಜ್ಯ, ಭಾಷೆ ಮತ್ತು ಸಂಸ್ಕೃತಿಯ ಅಧಿದೇವತೆ ಹಾಗೂ ಅವುಗಳ ಸಾಕಾರ ರೂಪವೆಂದು ಗೌರವಿಸಲಾಗುತ್ತದೆ.
ಕದಂಬರು: ಆಡಳಿತದಲ್ಲಿ ಕನ್ನಡವನ್ನು ಬಳಸಿದ ಮೊದಲ ರಾಜ್ಯವೆಂದು ಪರಿಗಣಿಸಲ್ಪಡುವ ಬನವಾಸಿಯಿಂದ ಆಳ್ವಿಕೆ ನಡೆಸಿದ ಕದಂಬರು ಭುವನೇಶ್ವರಿ ದೇವಿಯನ್ನು ತಮ್ಮ ರಕ್ಷಕ ದೇವತೆಯಾಗಿ ಆರಿಸಿಕೊಂಡರು. ಭುವನೇಶ್ವರಿ ದೇವಿಗೆ ಸಮರ್ಪಿತವಾದ ಅತ್ಯಂತ ಪ್ರಾಚೀನ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಭುವನಗಿರಿಯಲ್ಲಿದೆ.
1956ರಲ್ಲಿ ಏಕೀಕೃತ ಕರ್ನಾಟಕಕ್ಕಾಗಿ ನಡೆದ ಹೋರಾಟ ಯಶಸ್ವಿಯಾದಾಗ ಚಳವಳಿಯ ನಾಯಕರು ಭುವನೇಶ್ವರಿ ದೇವಿಯನ್ನು ಏಕತೆಯ ಸಂಕೇತವಾಗಿ ಸ್ವೀಕರಿಸಿದರು. ಪ್ರಸಿದ್ಧ ಹೋರಾಟಗಾರ ಆಲೂರು ವೆಂಕಟರಾಯರು ಹಂಪಿಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಏಕೀಕರಣ ಚಳವಳಿಯ ಯಶಸ್ಸನ್ನು ಆಚರಿಸಿದರು. ಈ ಮೂಲಕ ‘ತಾಯಿಯ ಆಜ್ಞೆ’ ಕೊನೆಗೂ ನೆರವೇರಿದೆ ಎಂದು ಘೋಷಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವ:
ಕನ್ನಡ ಭಾಷೆಯ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಕುವೆಂಪು, ದ.ರಾ. ಬೇಂದ್ರೆ ಮತ್ತು ಶಿವರಾಮ ಕಾರಂತ ಮುಂತಾದ ಗಣ್ಯರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಕವಿಗಳು, ಲೇಖಕರು, ಕಲಾವಿದರು ಮತ್ತು ಚಿಂತಕರು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕರ್ನಾಟಕವು ತನ್ನ ವೈವಿಧ್ಯಮಯ ಸಂಸ್ಕೃತಿ, ಜನಪದ ಕಲೆಗಳು, ಸಂಗೀತ, ನೃತ್ಯ, ಹಬ್ಬಗಳು ಮತ್ತು ಆಹಾರ ಸಂಪ್ರದಾಯಗಳಿಗೆ ಪ್ರಸಿದ್ಧವಾಗಿದೆ. ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ ಮತ್ತು ಕಂಸಾಳೆಯAತಹ ಜನಪದ ಕಲಾಪ್ರಕಾರಗಳು ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಹಂಪಿ, ಬೇಲೂರು, ಹಳೇಬೀಡು ಮತ್ತು ಮೈಸೂರು ಅರಮನೆಯಂತಹ ಐತಿಹಾಸಿಕ ತಾಣಗಳು ಕರ್ನಾಟಕದ ವೈಭವಯುತ ಪರಂಪರೆಗೆ ಸಾಕ್ಷಿಯಾಗಿವೆ.
ರಾಜ್ಯೋತ್ಸವದ ಆಚರಣೆಗಳು:
ಕನ್ನಡ ರಾಜ್ಯೋತ್ಸವದಂದು ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಕರ್ನಾಟಕದ ಅಧಿದೇವತೆಯಾದ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಗುತ್ತದೆ. ನಂತರ ಹಳದಿ-ಕೆಂಪು ಬಣ್ಣದ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ರಾಷ್ಟçಕವಿ ಕುವೆಂಪು ರಚಿಸಿದ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯನ್ನು ಹಾಡಲಾಗುತ್ತದೆ.
ಕನ್ನಡ ನಾಡು, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ಭಾಷಣಗಳು, ಕನ್ನಡ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು, ನೃತ್ಯ ಪ್ರದರ್ಶನಗಳು, ಸ್ತಬ್ಧಚಿತ್ರಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಕವನ ವಾಚನ, ರಸಪ್ರಶ್ನೆ ಮತ್ತು ಕನ್ನಡ ಗೀತೆಗಳ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕನ್ನಡದ ಬಳಕೆಯನ್ನು ಉತ್ತೇಜಿಸಲು, ಕನ್ನಡ ಪುಸ್ತಕ ಓದುವ ಅಭ್ಯಾಸ ಬೆಳೆಸಲು ಮತ್ತು ಕನ್ನಡ ಸಂಸ್ಕೃತಿಯನ್ನು ಸಂರಕ್ಷಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿವಿಧ ಸಂಸ್ಥೆಗಳು ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಗಿಡನೆಡುವಿಕೆ ಮತ್ತು ಕನ್ನಡದ ಮಹತ್ವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ಆಯೋಜಿಸುತ್ತವೆ. ಸರ್ಕಾರಿ ಕಟ್ಟಡಗಳು, ಪ್ರಮುಖ ವೃತ್ತಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಕನ್ನಡ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗುತ್ತದೆ.
ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಕ್ರೀಡೆ ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಗಣ್ಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಕನ್ನಡದ ಬೆಳವಣಿಗೆಯಲ್ಲಿ ನಮ್ಮ ಪಾತ್ರ:
ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸುವುದು, ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಮತ್ತು ಮುಂದಿನ ಪೀಳಿಗೆಗೆ ಕನ್ನಡದ ಮಹತ್ವವನ್ನು ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆಡಳಿತ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿಯೂ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು.
ಇತರ ಭಾಷೆಗಳನ್ನು ಗೌರವಿಸುವುದರ ಜೊತೆಗೆ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಸಿ, ಬೆಳೆಸಿ, ಉಳಿಸಬೇಕು. ಕರ್ನಾಟಕದ ವೈವಿಧ್ಯಮಯ ಭಾಷಾ ಮತ್ತು ಸಾಂಸ್ಕೃತಿಕ ಸಮುದಾಯಗಳ ನಡುವೆ ಸೌಹಾರ್ದತೆ, ಸಹಬಾಳ್ವೆ ಮತ್ತು ಏಕತೆಯನ್ನು ಬೆಳೆಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರುವುದೇ ನಾವು ಕನ್ನಡಾಂಬೆಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಈ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕಾಗಿದೆ.
ಸಮಾರೋಪ:
ಕನ್ನಡ ರಾಜ್ಯೋತ್ಸವವು ನಮ್ಮ ನಾಡಿನ ಇತಿಹಾಸವನ್ನು ನೆನಪಿಸುವುದರ ಜೊತೆಗೆ ಭವಿಷ್ಯದ ಕರ್ನಾಟಕವನ್ನು ಕಟ್ಟುವ ಸಂಕಲ್ಪವನ್ನು ಮೂಡಿಸುತ್ತದೆ. ಕನ್ನಡ ಭಾಷೆ ನಮ್ಮ ಅಸ್ಮಿತೆ, ನಮ್ಮ ಸಂಸ್ಕೃತಿ ನಮ್ಮ ಶಕ್ತಿ ಮತ್ತು ನಮ್ಮ ಏಕತೆ ನಮ್ಮ ಹೆಮ್ಮೆ, ಕನ್ನಡ ನಾಡಿನ ಅಭಿವೃದ್ಧಿಗಾಗಿ ಶ್ರಮಿಸುವುದು, ಕನ್ನಡ ಭಾಷೆಯ ಗೌರವವನ್ನು ಎತ್ತಿ ಹಿಡಿಯುವುದು ಹಾಗೂ ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.
“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!”
ಜೈ ಕರ್ನಾಟಕ! ಜೈ ಕನ್ನಡ!