■ ಕೆ.ಪಿ.ನವಮೋಹನ್, ಚಿಕ್ಕಬಳ್ಳಾಪುರ
ಅಕ್ಟೋಬರ್ 26ರಂದು ಮಹರ್ಷಿ ವಾಲ್ಮೀಕಿ ಜಯಂತಿ, ಶ್ರೀ ರಾಮಾಯಣ ರಚಿಸಿ ಆದಿ ಕವಿ ಎಂದೆನೆಸಿಕೊAಡ ಮಹರ್ಷಿ ಶ್ರೀ ವಾಲ್ಮೀಕಿಯು ಭಾರತೀಯ ಸಂಸ್ಕೃತಿಯ ಸಾಹಿತ್ಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆೆ. ಶ್ರೀ ವಾಲ್ಮೀಕಿ ಮಹರ್ಷಿಗಳಿಗೂ ಅವಿಭಕ್ತ ಕೋಲಾರ ಜಿಲ್ಲೆಯ ಆವನಿ ಕ್ಷೇತ್ರಕ್ಕೂ ಮತ್ತು ವಿಭಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲುಕಿನ ತಲಕಾಯಲ ಬೆಟ್ಟಕ್ಕೂ ಅವಿನಾಬಾವ ಸಂಬAದವಿದು ವಾಲ್ಮೀಕಿ ಮಹರ್ಷಿಯಾಗುವ ಮುನ್ನ ತಲಕಾಯಲಬೆಟ್ಟದಲ್ಲಿ, ಮಹರ್ಷಿಯಾದ ನಂತರ ಅವನಿ ಕ್ಷೇತ್ರದಲ್ಲಿ ನೆಲಸಿದ್ದರೆಂಬುದು ಪುರಾಣ ಗ್ರಂಥಗಳಿಂದ ತಿಳಿದುಬಂದಿದೆ. ಭಾರತೀಯ ಸಮಾಜಕ್ಕೆ ಶ್ರೀರಾಮಾಯಣವು ನೀತಿಪ್ರದವಾಗಿದೆ. ತ್ರೇತಾಯುಗದಲ್ಲಿ ನಾವು ಕಾಣುವ ವಾಲ್ಮೀಕಿ ರಾಮಾಯಣದ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಮತ್ತು ಇಂದು ಕಾಣುತ್ತಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಇವುಗಳ ನಡುವೆ ಮಹಾನ್ ಬದಲಾವಣೆಗೆ ಆಸ್ಪದ ಕೊಡದೆ ತನ್ನದೇ ಆದ ಸಾಮಾಜಿಕ ಆದರ್ಶಗಳನ್ನು ಬಲವಾಗಿ ಸಮಾಜದಲ್ಲಿನ ಕಲ್ಯಾಣಕ್ಕಾಗಿ ಆದರ್ಶ ಕಾವ್ಯವಾಗಿದೆ. ರಾಮಾಯಣದಂತಹ ಮಹಾ ಕಾವ್ಯವವನ್ನು ಬರೆದು ಭಾರತದಂತಹ ಪವಿತ್ರ ದೇಶದ ಘನತೆಯನ್ನು ಹೆಚ್ಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ.
ಜೀವನ ಚರಿತ್ರೆ: ವಾಲ್ಮೀಕಿಯ ತ್ರೇತಾ ಯುಗಧ ರಾಮಾಯಣ ಕಾಲಮಾನದಲ್ಲಿ ಜೀವಿಸಿದ್ದರು, ಇವರ ನಿಜವಾದ ಹೆಸರು ರತ್ನಾಕರ(ಪ್ರಚೇತಸ), ಮೂಲತಃ ಬೇಡರ ಕುಟುಂಬದಲ್ಲಿ ಜನಿಸಿ ಆರಂಭದಲ್ಲಿ ಬಹಳ ಕ್ರೂರ ವ್ಯಕ್ತಿತ್ವದವನಾಗಿದ್ದು ಒಬ್ಬ ದರೋಡೆಕೋರನಾಗಿದ್ದನು.ಒಂದು ಸಂದರ್ಭದಲ್ಲಿ ನಾರದ ಮಹರ್ಷಿಯನ್ನು ಅಡ್ಡಗಟ್ಟಿ ದೋಚಿಸಲೆತ್ನಿಸಿ ಏನೂ ಸಿಗದೆÉ ಹತಾಶನಾಗಿ ನಂತರ ನಾರದರು ಕೇಳಿದ ಪ್ರಶ್ನೆಗಳಿಂದ ರತ್ನಾಕರನು ಉತ್ತರ ಹುಡುಕುತ್ತಾ ತನ್ನ ಮನೆಯಲ್ಲಿ ಪತ್ನಿ ಕುಟುಂಬದವರಿಗೆ ತಾನು ಮಾಡಿದ ಕೃತ್ಯದಿಂದ ಸಂಪಾದಿಸಿ ಕುಟುಂಬದವರನ್ನು ಪೋಷಿಸುತ್ತ ಪಾಪದ ಫಲವನ್ನು ಯಾರೂ ಹೊಣೆತೆಗೆದುಕೊಳ್ಳಲಿಲ್ಲ ತಾನು ಮಾಡಿದ ಪಾಪಕ್ಕೆ ತಾನೆ ಹೊಣೆ ಬೇರೆಯವರ ಪಾಲಿಲ್ಲ ಎಂಬ ಅಂಶ ತಿಳಿದು ದಿಗ್ಬ್ರಾಂತನಾಗಿ ನಾರದರೊಂದಿಗೆ ಕ್ಷಮೆಯಾಚಿಸಿದ.ನಾರದರು ನೀಡಿದ ಉಪದೇಶದಿಂದ ತನ್ನ ಮೈಮೇಲೆಲ್ಲಾ ಹುತ್ತ ಬೆಳೆಯುವಷ್ಟು ಘೋರ ತಪಸ್ಸನ್ನಾಚರಿಸಿದನು(ಹುತ್ತವನ್ನು ವಲ್ಮೀಕ ಎನ್ನುವರು) ಅದರಿಂದಲೇ ರತ್ನಾಕರನಿಗೆ ವಾಲ್ಮೀಕಿ ಎಂದು ಕರೆಯಲ್ಪಟ್ಟು ದಿವ್ಯ ಜ್ಞಾನವನ್ನು ಪಡೆದರು ಮುಂದೆ ಶ್ರೀರಾಮಾಯಣ ವನ್ನು ಬರೆದು ಆದಿಕವಿ ಎಂದೆನಿಸಿಕೊಂಡರು.ಮಹರ್ಷಿ ವಾಲ್ಮೀಕಿಯ ಸಂದೇಶಗಳನ್ನು ಎಲ್ಲ ಮಹಿಮಾ ಪುರುಷರು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ಸಾರಿ ಹೇಳಿದ್ದಾರೆ. ಇಂದು ನಾವು ಅನೇಕ ಕಷ್ಠಗಳನ್ನು ಎದುರಿಸುತ್ತಿದ್ದೇವೆ. ಆಗ ನೋವನ್ನು ಅನುಭವಿಸುತ್ತೇವೆ. ಅಂತಹ ಸಂದರ್ಭದಲ್ಲಿ ಶ್ರೀರಾಮನ ವನವಾಸದ ಅರಣ್ಯ ಕಾಂಡವನ್ನು ಓದಿದರೆ ನಮಗೆ ಬಂದಿರುವುದು ಕಷ್ಟಗಳು ಏನೂ ಅಲ್ಲ ಅನಿಸುತ್ತದೆ. ಕಷ್ಟಗಳು ಯಾರನ್ನೂ ಬಿಟ್ಟಿಲ್ಲ ಬಿಡುವುದೂ ಇಲ್ಲ ಅವುಗಳನ್ನು ಎದುರಿಸಿದರೆ ಜೀವನದಲ್ಲಿ ಸುಖ ಸಿಗುತ್ತದೆ ಎಂಬುದನ್ನು ವಾಲ್ಮೀಕಿ ರಾಮಾಯಣದ ಸುಂದರ ಕಾಂಡದಲ್ಲಿ ವಿವರಿಸಿದರು. ರಾಮಾಯಣದಲ್ಲಿ ಎಲ್ಲವೂ ಇದೆ, ನಮ್ಮ ಜೀವನವೇ ಇದೆ, ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಇದೆ. ಲಕ್ಷ್ಮಣನ ಸೋದರ ಪ್ರೇಮ, ಹನುಮಂತನ ಸ್ವಾಮಿನಿಷ್ಠೆ, ಸೀತೆಯ ಪಾವಿತ್ರ್ಯತೆ ಮನುಷ್ಯನಲ್ಲಿ ಇರಬೇಕಾದ ಗುಣಗಳನ್ನು ಸಾರಿ ಹೇಳುತ್ತವೆ.