LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Politics News

ದುರ್ಭಿಕ್ಷದಲ್ಲಿ ಅಧಿಕಮಾಸ

ಸರ್ಕಾರದ ವಿರುದ್ಧ ಅಶೋಕ್ ಕಿಡಿ


ಬೆಂಗಳೂರು: ದುರ್ಭಿಕ್ಷದಲ್ಲಿ ಅಧಿಕಮಾಸ ಎನ್ನುವಂತೆ, ಜನರ ಮೇಲೆ ಮತ್ತೊಂದು ಹೊರೆ ಹೊರಿಸಲು ಹೊರಟಿದೆ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ವಿಧಾನ ಸಭೆ ವಿಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅವರು, ರಾಜ್ಯದಲ್ಲಿ ಈಗಾಗಲೇ ಬರ, ನೆರೆ, ಬೆಲೆ ಏರಿಕೆಯ ಬಿಸಿ, ಅಭಿವೃದ್ಧಿಗೆ ಶೂನ್ಯತೆಯಿಂದ ಜನ ಈ ಸರ್ಕಾರದ ಮೇಲೆ ಬೇಸತ್ತಿದ್ದಾರೆ! ಈಗ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.40ರವರೆಗೆ ಏರಿಸುವ ಮೂಲಕ ಜನಸಾಮಾನ್ಯರು ಮನೆ ಕಟ್ಟಿಕೊಳ್ಳುವುದಕ್ಕೂ, ಸ್ವಂತ ಸೂರಿನ ಕನಸು ನನಸಾಗಿಸಿಕೊಳ್ಳುವುದಕ್ಕೂ  ಮತ್ತೊಂದು ಹೊಡೆತ ನೀಡಲು ಹೊರಟಿದ್ದೀರಿ! ಎಂದು ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲ, ರೈತರ ಬರ ಪರಿಹಾರಕ್ಕೆ ಹಣವಿಲ್ಲ, ಮೂಲಸೌಕರ್ಯ ಸುಧಾರಿಸಿಲ್ಲ, ರಸ್ತೆಗಳು ಸುಧಾರಿಸಿಲ್ಲ ಆದರೆ ಸರ್ಕಾರಕ್ಕೆ ತೆರಿಗೆ ಮತ್ತು ಶುಲ್ಕ ಹೆಚ್ಚಿಸುವುದರಲ್ಲಿ ಮಾತ್ರ ಎಲ್ಲಿಲ್ಲದ ಉತ್ಸಾಹ! ಎಂದಿದ್ದಾರೆ.* ಸ್ವಂತ ಮನೆ ಕಟ್ಟಿಕೊಳ್ಳುವುದೂ ಇನ್ನು ದುಬಾರಿ! ಜಮೀನು ಖರೀದಿಸುವವರು, ಮನೆ ನೋಂದಣಿ ಮಾಡಿಸಿಕೊಳ್ಳುವವರು ಹೆಚ್ಚಿನ ಹಣ ತೆರಬೇಕಾದ ಪರಿಸ್ಥಿತಿ. ಮಧ್ಯಮ ವರ್ಗದವರು ಮತ್ತು ಬಡವರ ಸ್ವಂತ ಸೂರಿನ ಕನಸಿಗೆ ಸರ್ಕಾರವೇ ಕೊಳ್ಳಿ ಇಡುತ್ತಿದೆ!`ಗ್ಯಾರಂಟಿಗಳ ಹೊರೆ ಜನರ ಮೇಲೆಯೇ? ಒಂದು ಕಡೆ ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ, ಇನ್ನೊಂದು ಕಡೆ ಸರ್ಕಾರದ ಆದಾಯ ಹೆಚ್ಚಿಸಲು ಜನರ ಜೇಬಿಗೆ ಕತ್ತರಿ! ನಿಮ್ಮ ವೈಫಲ್ಯಗಳಿಗೆ, ದುರಾಡಳಿತಕ್ಕೆ ಜನರೇ ಬೆಲೆ ತೆರಬೇಕೇ? ಅಭಿವೃದ್ಧಿ ಎಲ್ಲಿ? ದರ ಏರಿಕೆ ಮಾತ್ರ ಏಕೆ? ರಸ್ತೆ, ಕುಡಿಯುವ ನೀರು, ಒಳಚರಂಡಿ, ಮೂಲಸೌಕರ್ಯ - ಜನರಿಗೆ ಸಮರ್ಪಕ ಸೌಲಭ್ಯಗಳಿಲ್ಲ. ಆದರೆ ಆಸ್ತಿ ನೋಂದಣಿಗೆ ಮಾತ್ರ ದರ ಏರಿಕೆ. ಸೌಲಭ್ಯ ನೀಡದ ಸರ್ಕಾರಕ್ಕೆ ಜನರ ಜೇಬಿಗೆ ಕೈಹಾಕುವ ನೈತಿಕತೆ ಎಲ್ಲಿಂದ ಬಂತು? ಎಂದು ಕೇಳಿದ್ದಾರೆ.ಮುಖ್ಯಮಂತ್ರಿ  @DKShivakumar  ಅವರೇ, ನಿಮ್ಮ ಸರ್ಕಾರಕ್ಕೆ ಜನರ ಬದುಕು ಸುಧಾರಿಸುವ ದೂರದೃಷ್ಟಿಯೂ ಇಲ್ಲ, 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST