LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮಲೇಷ್ಯಾ ಬಾಕ್ಸಿಂಗ್ ರಿಂಗ್‌ನಲ್ಲಿ ಜಯಭೇರಿ: ಪಾಕ್ ಬಾಕ್ಸರ್ ಮಣಿಸಿದ ಭಾರತದ ಗುಲ್ಫಿಶಾನ್ ಗೌರ್


ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟಿçÃಯ ಬಾಕ್ಸಿಂಗ್ ಪಂದ್ಯದಲ್ಲಿ ಪಾಕಿಸ್ತಾನಿ ಬಾಕ್ಸರ್ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಭಾರತದ ಬಾಕ್ಸರ್ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗುಲ್ಫಿಶಾನ್ ಗೌರ್ ದೇಶಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ತಮ್ಮ ಅತ್ಯುತ್ತಮ ಹಾಗೂ ಶಿಸ್ತುಬದ್ಧ ಆಟದ ಪ್ರದರ್ಶನದಿಂದ ಟ್ರೋಫಿ ಗೆದ್ದುಕೊಂಡಿರುವ ಗುಲ್ಫಿಶಾನ್ ಗೌರ್ ಅವರ ಈ ಸಾಧನೆಯು ದೇಶಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದುಕೊಟ್ಟಿದೆ. ಆರಂಭದಿಂದಲೂ ಅವರ ಪ್ರತಿಭೆಯನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ ಸಮಾಜ ಸೇವಕ ರಾಹುಲ್ ಗುಪ್ತಾ ಅವರ ಕೊಡುಗೆ ಈ ಸಫಲತೆಯ ಹಾದಿಯಲ್ಲಿ ಪ್ರಮುಖವಾಗಿದೆ.ಯಶಸ್ವಿ ಪ್ರದರ್ಶನದ ನಂತರ ಭಾರತಕ್ಕೆ ಮರಳಿದ ಗುಲ್ಫಿಶಾನ್ ಗೌರ್ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಹಾಗೂ ವೈಭವದ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ರಾಹುಲ್ ಗುಪ್ತಾ, ಗಾಯಕ ವಿಕ್ಕಿ ಠಾಕೂರ್ ಹಾಗೂ ಸಿಎ ಮನೀಶ್ ಭಾರದ್ವಾಜ್ ಉಪಸ್ಥಿತರಿದ್ದು, ಗೌರ್ ಅವರ ಅಸಾಧಾರಣ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ನಿರಂತರ ಶ್ರಮ, ದೃಢಸಂಕಲ್ಪ ಮತ್ತು ಸರಿಯಾದ ಸಮಯದಲ್ಲಿ ದೊರೆಯುವ ಪ್ರೋತ್ಸಾಹವು ಯಾವುದೇ ಕ್ರೀಡಾಪಟುವಿಗೆ ಸಾಧನೆಯ ಹಾದಿಯನ್ನು ಸುಗಮಗೊಳಿಸುತ್ತದೆ ಎಂಬುದಕ್ಕೆ ಗುಲ್ಫಿಶಾನ್ ಗೌರ್ ಅವರ ಈ ಜಯ 
ಉದಾಹರಣೆಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ದೇಶದ ಯುವ ಸಮುದಾಯಕ್ಕೆ ಈ ಜಯ ದೊಡ್ಡ ಪ್ರೇರಣೆಯಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST