LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪ್ರತೀಕಾ ಶತಕ, ಶಫಾಲಿ ಅಬ್ಬರ: ಭಾರತಕ್ಕೆ ಸುಲಭ ತುತ್ತಾದ ಜಿಂಬಾಬ್ವೆ


ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಬಳಿಕ, ಭಾರತ ಮಹಿಳಾ ಕ್ರಿಕೆಟ್ ತಂಡ ಇದೀಗ ಏಕದಿನ ಸರಣಿಯಲ್ಲೂ ಭರ್ಜರಿ ಆರಂಭ ಪಡೆದಿದೆ. ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಸುಲಭವಾಗಿ ಗೆಲುವಿನ ನಗೆ ಬೀರಿತು. ಜಿಂಬಾಬ್ವೆ ನೀಡಿದ 198 ರನ್‌ಗಳ ಗುರಿಯನ್ನು ಭಾರತ ಕೇವಲ 28 ಓವರ್‌ಗಳಲ್ಲಿ ತಲುಪಿತು. ಭಾರತದ ಗೆಲುವಿನಲ್ಲಿ ಸ್ಪಿನ್ನರ್ ಶ್ರೀ ಚರಣಿ ಮತ್ತು ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ಪ್ರಮುಖ ಪಾತ್ರ ವಹಿಸಿದರು. ಚರಣಿ 4 ವಿಕೆಟ್ ಪಡೆದು ಮಿಂಚಿದರೆ, ಪ್ರತೀಕಾ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾದರು 197 ರನ್‌ಗಳಿಗೆ ಆಲೌಟ್: ಅಕ್ಟೋಬರ್ 23ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಟಿ20 ಸರಣಿಯಲ್ಲಿದ್ದ ಲಯವನ್ನೇ ಮುಂದುವರಿಸಿದರು. ಶ್ರೀ ಚರಣಿ ಸೇರಿದಂತೆ ಭಾರತದ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ ಜಿಂಬಾಬ್ವೆ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಜಿಂಬಾಬ್ವೆ ಪರ ಬೆಲವ್ಡ್ ಬಿಜಾ ಮಾತ್ರ ಏಕಾಂಗಿ ಹೋರಾಟ ನಡೆಸಿ 62 ರನ್ ಗಳಿಸಿದರು. ಉಳಿದ ಯಾವುದೇ ಬ್ಯಾಟರ್ 30 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಕೊನೆಯ ಹಂತದಲ್ಲಿ ಮಿಚೆಲ್ ಮಾವುಂಗಾ ವೇಗವಾಗಿ 29 ರನ್ ಗಳಿಸಿದ್ದರಿಂದ ಜಿಂಬಾಬ್ವೆ ತಂಡ 49.5 ಓವರ್‌ಗಳಲ್ಲಿ 197 ರನ್‌ಗಳಿಗೆ ಆಲೌಟ್ ಆಯಿತು.4 ವಿಕೆಟ್ ಕಬಳಿಸಿದ ಶ್ರೀ ಚರಣಿ: ಭಾರತದ ಪರ ಶ್ರೀ ಚರಣಿ 10 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನನೀಡಿದರು. ಉಳಿದಂತೆ ಯುವ ವೇಗಿ ಕ್ರಾಂತಿ ಗೌಡ್ 3 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2 ವಿಕೆಟ್ ಕಬಳಿಸಿದರು. ಶಫಾಲಿ ವರ್ಮಾ ಕೂಡ ಒಂದು ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರು.ಭಾರತಕ್ಕೆ ಉತ್ತಮ ಆರಂಭ: ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕಿ ಸ್ಮöÈತಿ ಮಂಧಾನ ಮತ್ತು ಪ್ರತೀಕಾ ರಾವಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 93 ರನ್‌ಗಳನ್ನು ಸೇರಿಸಿತು. ಸ್ಮöÈತಿ 32 ರನ್ ಗಳಿಸಿ ಔಟಾದರೆ, ಆ ಬಳಿಕ ಜಿಂಬಾಬ್ವೆ ಬೌಲರ್‌ಗಳಿಗೆ ಮತ್ತೊಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಒಂದೆಡೆ ಪ್ರತೀಕಾ ರಾವಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಮತ್ತೊಂದೆಡೆ ಶಫಾಲಿ ವರ್ಮಾ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ಶಫಾಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಜಿಂಬಾಬ್ವೆ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಇತ್ತ ಪ್ರತೀಕಾ 27ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 96 ಎಸೆತಗಳಲ್ಲಿ ಶತಕ ಪೂರೈಸಿದರು.ಪ್ರತೀಕಾ ಮೂರನೇ ಏಕದಿನ ಶತಕ: ಇದು ಪ್ರತೀಕಾ ರಾವಲ್ ಅವರ ಮೂರನೇ ಏಕದಿನ ಶತಕವಾಗಿದೆ. ವಿಶೇಷವೆಂದರೆ, ಅವರ ಹಿಂದಿನ ಶತಕವೂ ಅಕ್ಟೋಬರ್ 23ರಂದೇ ದಾಖಲಾಗಿತ್ತು. 2025ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು 122 ರನ್ ಗಳಿಸಿದ್ದರು. ಇದೀಗ ಮತ್ತೊಮ್ಮೆ ಇದೇ ದಿನ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಪ್ರತೀಕಾ 96 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ ಅಜೇಯ 100 ರನ್ ಗಳಿಸಿದರು.  ಇತ್ತ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 64 ರನ್ ಗಳಿಸಿದರು. 28ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಈ ಮೂಲಕ 
ಭಾರತ ಮಹಿಳಾ ತಂಡ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST