ಬೆಂಗಳೂರು: ಭಾರತದ ಸ್ವದೇಶಿ ಮೈಕ್ರೋ-ಡ್ರಾಮಾ ಮನರಂಜನಾ ವೇದಿಕೆ ಯಾದ ಟುಕ್ ಟುಕಿ, ಅ.22 ರಂದು ತನ್ನ ನೂತನ ಸರಣಿ ಮದನಿಕಾ ಅನ್ನು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಈ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸರಣಿಯು, ನಾವು ಬಯಸಿದ್ದೆಲ್ಲವನ್ನೂ ಪಡೆದುಕೊಳ್ಳಲು ತೆರಬೇಕಾಗುವ ಬೆಲೆಯ ಸುತ್ತ ಸಾಗಲಿದ್ದು, ಇದನ್ನು ರೊಮ್ಯಾಂಟಿಕ್ ಹಾರರ್, ಗೀಳು ಹಾಗೂ ಪ್ರಾಚೀನ ಆಚರಣೆಗಳನ್ನು ಬೆರೆಸಿ ಕಟ್ಟಿಕೊಡಲಾಗಿದೆ.ಈ ಧಾರಾವಾಹಿಯು ಅರ್ಜುನ್ ಎಂಬ ವ್ಯಕ್ತಿಯ ಸುತ್ತ ಸುತ್ತುತ್ತದೆ. ಆತನ ಬದುಕು ಸಂಪೂರ್ಣ ನೆಲಕಚ್ಚಿರುತ್ತದೆ. ಆರ್ಥಿಕ ಸಂಕಷ್ಟ, ಸಮಾಜದ ಅವಹೇಳನ ಹಾಗೂ ಮಾಜಿ ಪತ್ನಿ ವಾಮಿಕಾಳ ನಂಬಿಕೆದ್ರೋ ಹದಿಂದ ಕಂಗೆಟ್ಟ ಆತ, ಜೀವನವನ್ನೇ ಕೈಚೆ ಲ್ಲುವ ಸ್ಥಿತಿಗೆ ತಲುಪಿರುತ್ತಾನೆ. ಅಂತಹ ಹೊತ್ತಿನಲ್ಲಿ ರಹಸ್ಯಮಯ ವೃದ್ಧನೊಬ್ಬ ಆತನ ಕೈಗೆ ಪ್ರಾಚೀನ ಗ್ರಂಥವೊAದನ್ನು ನೀಡುತ್ತಾನೆ.ತಾನು ಒಲಿದ ವ್ಯಕ್ತಿಯ ಬದುಕನ್ನೇ ಆಮೂಲಾಗ್ರವಾಗಿ ಬದಲಾಯಿಸಬಲ್ಲ ಶಕ್ತಿಯುಳ್ಳ, ಸೌಂದರ್ಯವತಿ ಹಾಗೂ ಅಲೌಕಿಕ ಸ್ತ್ರೀ ಮದನಿಕಾಳನ್ನು ಆವಾಹನೆ ಮಾಡುವವನಿಗೆ ಅಪಾರ ಐಶ್ವರ್ಯ ಮತ್ತು ಅದೃಷ್ಟ ಲಭಿಸುತ್ತದೆ ಎಂದು ಆ ಗ್ರಂಥ ವಾಗ್ದಾನ ಮಾಡುತ್ತದೆ. ಏಳು ರಾತ್ರಿಗಳ ಸುದೀರ್ಘ ಪೂಜಾವಿಧಿಯ ನಂತರ ಮದನಿಕಾ ಪ್ರತ್ಯಕ್ಷಳಾಗುತ್ತಾಳೆ. ಆತನ ಗತಕಾಲದ ಕುರಿತು ಯಾರಿಗೂ ತಿಳಿಯದ ರಹಸ್ಯಗಳನ್ನು ತೆರೆದಿಡುತ್ತಾಳೆ. ಬೆನ್ನಲ್ಲೇ ಹಣ, ಪ್ರಭಾವ ಮತ್ತು ಗೌರವಗಳು ಅರ್ಜುನನನ್ನು ಹುಡುಕಿಕೊಂಡು ಬರುತ್ತವೆ. ವಾಮಿಕಾ ಸೇರಿದಂತೆ ಈ ಹಿಂದೆ ಆತನನ್ನು ಕಡೆಗಣಿಸಿ ಗೇಲಿ ಮಾಡಿದ್ದವರೆಲ್ಲರೂ ಆತನ ಈ ಅನಿರೀಕ್ಷಿತ ರೂಪಾಂತರವನ್ನು ಕಂಡು ದಂಗಾಗುತ್ತಾರೆ.ಆದರೆ ಮದನಿಕಾ ನೀಡುವ ಈ ವರಗಳು ಸುಲಭದ ಬೆಲೆಗೆ ಸಿಗುವಂಥದ್ದಲ್ಲ. ಮೋಹಕತೆಯ ಜತೆಗೆ ಉಗ್ರವಾದ ಸ್ವಾಮ್ಯಸೂಚಕ ಮನಸ್ಥಿತಿ ಹೊಂದಿರುವ ಆಕೆ, ಅರ್ಜುನನ ಕೇವಲ ಕೃತಜ್ಞತೆಗಿಂತಲೂ ಹೆಚ್ಚಿನದನ್ನು ಆಶಿಸುತ್ತಾಳೆ.